ವಿದಾಯ ಹೇಳಿದ ಡ್ವೇನ್ ಬ್ರಾವೋಗೆ ನಾಯಕ ಪಟ್ಟ!

By Web DeskFirst Published Nov 21, 2018, 12:22 PM IST
Highlights

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋಗೆ ಇದೀಗ ನಾಯಕ ಪಟ್ಟ ನೀಡಲಾಗಿದೆ. ನೋವಿನ ವಿದಾಯ ಹೇಳಿದ ಮೇಲೆ ಬ್ರಾವೋಗೆ ನಾಯಕತ್ವ ನೀಡಿದ್ದು ಯಾರು? ಇಲ್ಲಿದೆ ಹೆಚ್ಚಿನ ವಿವರ.

ಶಾರ್ಜಾ(ನ.21): ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ ಇದೀಗ ಟಿ10 ಕ್ರಿಕೆಟ್ ಲೀಗ್ ಟೂರ್ನಿಯ ಮರಾಥ ಅರೇಬಿಯನ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.

 

Ladies and gentlemen, get ready for some great cricketainment as we are just 1⃣ day away from the 😍😎

There's still time to book your tickets. Do it now. https://t.co/jNeapOlurZ pic.twitter.com/rzp0LH8jJK

— T10 League (@T10League)

;

 

ಡ್ವೇನ್ ಬ್ರಾವೋ ಮೊದಲ ಟಿ10 ಲೀಗ್ ಆವೃತ್ತಿಯಲ್ಲೂ ಭಾಗವಹಿಸಿದ್ದರು. ಮೊದಲ ಆವೃತ್ತಿಯಲ್ಲಿ 6 ತಂಡಗಳಿದ್ದ ಟೂರ್ನಿ ಇದೀಗ ತಂಡಗಳ ಸಂಕ್ಯೆ 8ಕ್ಕೇರಿದೆ. ಮರಾಥಾ ಅರೇಬಿಯನ್ಸ್ ತಂಡದಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಸೇರಿದಂತೆ 9 ದೇಶದ ಆಟಗಾರರಿದ್ದಾರೆ.

ಇಂದಿನಿಂದ(ನ.21) ಆರಂಭಗೊಳ್ಳುತ್ತಿರುವ ಈ ಟೂರ್ನಿಯಲ್ಲಿ ಭಾರತದ ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್, ಆರ್‌ಪಿ ಸಿಂಗ್, ಪಾಕಿಸ್ತಾನದ ಶಾಹಿದ್ ಅಫ್ರೀದಿ ಸೇರಿದಂತೆ ಹಲವು ಸ್ಟಾರ್ ಮಾಜಿ ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ. ಒಟ್ಟು 29 ಪಂದ್ಯಗಳಿರುವ ಈ ಟೂರ್ನಿ ನವೆಂಬರ್ 21 ರಿಂದ ಡಿಸೆಂಬರ್ 3 ರ ವರೆಗೆ ನಡೆಯಲಿದೆ. ಶಾರ್ಜಾ 
 

click me!