ಧೋನಿ ತವರಿನಲ್ಲಿ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಆಸಿಸ್ ವಿರುದ್ಧ ಮುಗ್ಗರಿಸಿದರೂ ಭಾರತೀಯರ ಮನ ಗೆಲ್ಲುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.
ರಾಂಚಿ(ಮಾ.08): ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಆಸ್ಟ್ರೇಲಿಯಾ ನೀಡಿದ 314 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ 48.2 ಓವರ್‌ಗಳಲ್ಲಿ 281 ರನ್‌ಗಳಿಗೆ ಆಲೌಟ್ ಆಯಿತು. ಮೂಲಕ ಆಸಿಸ್ 32 ರನ್ ಗೆಲುವು ಸಾಧಿಸಿತು.
ಇದನ್ನೂ ಓದಿ: ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ
ರಾಂಚಿ ಪಂದ್ಯದಲ್ಲಿ ಭಾರತ ಸೋತರೂ ಭಾರತೀಯ ಮನ ಗೆದ್ದಿದೆ. ಇಂದಿನ ಪಂದ್ಯವನ್ನೂ ಕೊಹ್ಲಿ ಬಾಯ್ಸ್ ಸಂಪೂರ್ಣವಾಗಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಮರ್ಪಿಸಿದ್ದಾರೆ. ಪಂದ್ಯದ ಸಂಭಾವನೆಯನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ದಾರೆ. ಇನ್ನು ಇಡೀ ಪಂದ್ಯವನ್ನು ಆರ್ಮಿ ಕ್ಯಾಪ್ ಧರಿಸಿ ಆಡಿದ್ದಾರೆ. ಈ ಮೂಲಕ ಭಾರತೀಯ ಯೋಧರ ಜೊತೆಗೆ ನಾವಿದ್ದೇವೆ ಅನ್ನೋ ಸಂದೇಶ ಸಾರಿಸಿದ್ದಾರೆ.
ಇದನ್ನೂ ಓದಿ:: ರಾಂಚಿಯಲ್ಲಿ ವಿರಾಟ್ ಶತಕ- ದಾಖಲೆ ಬರೆದ ನಾಯಕ
ಧೋನಿ ತವರಿನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 313 ರನ್ ಬೃಹತ್ ಮೊತ್ತ ಪೇರಿಸಿತು. ಉಸ್ಮಾನ್ ಖವಾಜ ಶತಕ ಹಾಗೂ ನಾಯಕ ಆರೋನ್ ಫಿಂಚ್ 92 ರನ್ ಕಾಣಿಕೆ ನೀಡಿದ್ದರು. ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹೊರತು ಪಡಿಸಿದರೆ ಇತರ ಬ್ಯಾಟ್ಸ್‌ಮನ್‌ಗಳು ಆಸರೆಯಾಗಲಿಲ್ಲ.
ಇದನ್ನೂ ಓದಿ:INDvsAUS:ಹುತಾತ್ಮ ಯೋಧರಿಗೆ ವೀಕ್ಷಕ ವಿವರಣೆಗಾರರ ಸಲಾಂ!
ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಕೊಹ್ಲಿ 123 ರನ್ ಸಿಡಿಸಿ ಔಟಾಗುತ್ತಿದ್ದಂತೆ ಭಾರತ ಸೋಲಿನ ತೆಕ್ಕೆಗೆ ಜಾರಿತು. ಆದರೆ ವಿಜಯ್ ಶಂಕರ್ ಹಾಗೂ ರವೀಂದ್ರ ಜಡೇಜಾ ಹೋರಾಟ ಮಾಡಿದರೂ ಗೆಲುವು ಸಾಧ್ಯವಾಗಲಿಲ್ಲ. ಹೀಗಾಗಿ 48.2 ಓವರ್‌ಗಳಲ್ಲಿ ಭಾರತ 281 ರನ್‌ಗೆ ಆಲೌಟ್ ಆಯಿತು. ಇಷ್ಟೇ ಅಲ್ಲ ಪಂದ್ಯ ಕೈಚೆಲ್ಲಿತು.