ಇಂಡೋ-ಆಸಿಸ್ ಏಕದಿನ: ಜಸ್‌ಪ್ರೀತ್ ಬುಮ್ರಾಗೆ ರೆಸ್ಟ್, ಯುವ ವೇಗಿಗೆ ಸ್ಥಾನ!

By Web Desk  |  First Published Jan 8, 2019, 12:00 PM IST

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯಿಂದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಬದಲು ಯುವ ವೇಗಿಗೆ ಅವಕಾಶ ನೀಡಲಾಗಿದೆ. ತಂಡ ಸೇರಿಕೊಂಡ ಯುವ ವೇಗಿ ಯಾರು? ಇಲ್ಲಿದೆ ವಿವರ.


ಸಿಡ್ನಿ(ಜ.08): ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಗಾಗಿ ಗೇಮ್ ಪ್ಲಾನ್ ರೂಪಿಸಿದೆ. 3 ಪಂದ್ಯಗಳ ಏಕದಿನ ಸರಣಿಯಿಂದ ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಸತತ ಪಂದ್ಯ ಆಡಿರುವ ಬುಮ್ರಾಗೆ ರೆಸ್ಟ್ ಅಗತ್ಯವಿದೆ ಎಂದು ಬಿಸಿಸಿಐ ಹೇಳಿದೆ. ಆಸಿಸ್ ವಿರುದ್ದ ಬಳಿಕ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

"

Tap to resize

Latest Videos

ಇದನ್ನೂ ಓದಿ: ಇಂಡೋ-ಆಸಿಸ್ ಸರಣಿ: ತಪ್ಪು ಭವಿಷ್ಯ ನುಡಿದ ರಿಕಿ ಪಾಂಟಿಂಗ್ ಫುಲ್ ಟ್ರೋಲ್!

ವೇಗಿ ಬುಮ್ರಾ ಸ್ಥಾನಕ್ಕೆ ಇದೀಗ ಯುವ ವೇಗಿ ಮೊಹಮ್ಮದ್ ಸಿರಾಜ್‌ಗೆ ಬುಲಾವ್ ನೀಡಲಾಗಿದೆ. ಹೈದರಾಬಾದ್ ಮೂಲದ ವೇಗಿ ದೇಸಿ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಟೀಂ ಇಂಡಿಯಾ 3 ಏಕದಿನ ಪಂದ್ಯ ಆಡಿರುವ ಸಿರಾಜ್ 3 ವಿಕೆಟ್ ಕಬಳಿಸಿದ್ದಾರೆ. ಇದೀಗ ಏಕದಿನ ತಂಡಕ್ಕೂ ಪಾದರ್ಪಣೆ ಮಾಡೋ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಅಭಿನಂದಿಸಿ ಟ್ರೋಲ್ ಆದ ಪ್ರೀತಿ ಜಿಂಟಾ!

ಜನವರಿ 12ರಿಂದ ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿ ಆರಂಭವಾಗಲಿದೆ. 3 ಪಂದ್ಯದ ಸರಣಿಯಲ್ಲೂ ಟೀಂ ಇಂಡಿಯಾ ಗೆಲುವಿನ ವಿಶ್ವಾಸದಲ್ಲಿದೆ. ಈಗಾಗಲೇ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದ ಗೆಲುವು ಸಾಧಿಸಿದೆ.

click me!