ತವರಿಗೆ ತಲುಪಿದ ವಿರಾಟ್ ಕೊಹ್ಲಿ ಮುದ್ದಿನ ನಾಯಿ ಜೊತೆ ಸೆಲ್ಫಿ!

Published : Mar 11, 2019, 07:40 PM IST
ತವರಿಗೆ ತಲುಪಿದ ವಿರಾಟ್ ಕೊಹ್ಲಿ ಮುದ್ದಿನ ನಾಯಿ ಜೊತೆ ಸೆಲ್ಫಿ!

ಸಾರಾಂಶ

ಮೊಹಾಲಿ ಪಂದ್ಯ ಮುಗಿಸಿದ ಟೀಂ ಇಂಡಿಯಾ ಇದೀಗ ಅಂತಿಮ ಪಂದ್ಯಕ್ಕಾಗಿ ದೆಹಲಿ ತಲುಪಿದೆ. ತವರಿಗೆ ತಲುಪಿದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಮನಗೆ ಭೇಟಿ ನೀಡಿದ್ದಾರೆ. 

ದೆಹಲಿ(ಮಾ.11): ಆಸ್ಟ್ರೇಲಿಯಾ ವಿರುದ್ದದ 5ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ತಯಾರಿ ಆರಂಭಿಸಿದೆ. ಮೊಹಾಲಿ ಪಂದ್ಯ ಮುಗಿಸಿದ ಟೀಂ ಇಂಡಿಯಾ 5ನೇ ಪಂದ್ಯಕ್ಕಾಗಿ ದೆಹಲಿ ತಲುಪಿದೆ. ತವರಿಗೆ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ ಮನೆಗೆ ತೆರಳಿ ನಾಯಿ ಜೊತೆ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದಾರೆ.

 

 

ಇದನ್ನೂ ಓದಿ: ರಿಷಭ್ ಪಂತ್ ಮಾಡಿದ ಎಡವಟ್ಟುಗಳು ಒಂದಾ.. ಎರಡಾ..?

ದೆಹಲಿ ತಲುಪಿದ ಬಳಿಕ ವಿರಾಟ್ ಕೊಹ್ಲಿ ಮನೆಗೆ ತೆರಳಿದ್ದಾರೆ. ಮನೆಯಲ್ಲಿರುವ ತಮ್ಮ ಮುದ್ದಿನ ನಾಯಿ ಜೊತೆ ಸಮಯ ಕಳೆದಿದ್ದಾರೆ. ಟ್ವಿಟರ್‌ನಲ್ಲಿ ಕೊಹ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಮಾರ್ಚ್ 13 ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅಂತಿಮ ಏಕದಿನ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಮೊಹಾಲಿ ಗೆಲುವಿನ ಬೆನ್ನಲ್ಲೇ ಆಸಿಸ್’ಗೆ ಆಘಾತ: ಸ್ಟಾರ್ ಆಟಗಾರ ಔಟ್..?

ಆಸಿಸ್ ವಿರುದ್ಧದ ಸರಣಿಯಲ್ಲಿ ಆರಂಭಿಕ 2 ಪಂದ್ಯ ಗೆದ್ದು ಮುನ್ನಡೆ ಸಾಧಿಸಿದ್ದ ಟೀಂ ಇಂಡಿಯಾ, ನಂತರದ 2 ಪಂದ್ಯದಲ್ಲಿ ಸೋಲು ಅನುಭವಿಸಿತು. ಹೀಗಾಗಿ ಸರಣಿ 2-2 ಅಂತರದಲ್ಲಿ ಸಮಬಲವಾಗಿದೆ. ಇದೀಗ ಅಂತಿಮ ಪಂದ್ಯದ ಫಲಿತಾಂಶ ಸರಣಿ ಯಾರಿಗೆ ಅನ್ನೋದನ್ನ ನಿರ್ಧರಿಸಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ
ಅಬ್ಬಬ್ಬಾ..! ಲಿಯೋನೆಲ್ ಮೆಸ್ಸಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಒಂದು ದಿನದ ಚಾರ್ಜ್ ಇಷ್ಟೊಂದಾ?