ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ- ಸಂಭವನೀಯ ತಂಡ ಪ್ರಕಟ!

By Web DeskFirst Published Mar 1, 2019, 3:48 PM IST
Highlights

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಮಾ.02 ರಿಂದ ಆರಂಭಗೊಳ್ಳಲಿದೆ. ಮೊದಲ ಏಕದಿನ ಪಂದ್ಯಕ್ಕೆ ಸಂಭವನೀಯ ಟೀಂ ಇಂಡಿಯಾ ಪ್ರಕಟಿಸಲಾಗಿದೆ. ಇಲ್ಲಿದೆ ವಿವರ.
 

ಹೈದರಾಬಾದ್(ಮಾ.01): ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಸೋತು ಭಾರತ ಇದೀಗ ಏಕದಿನ ಸರಣಿಯಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಮಾ.02ರಿಂದ ಇಂಡೋ-ಆಸಿಸ್ ಏಕದಿನ ಸರಣಿ ಆರಂಭೊಗಳ್ಳಲಿದೆ. ಮೊದಲ ಪಂದ್ಯಕ್ಕೆ ಹೈದರಾಬಾದ್‌ನ ರಾಜೀವ್ ಗಾಂಧಿ ಉಪ್ಪಳ ಕ್ರೀಡಾಂಗಣ ಆತಿಥ್ಯವಹಿಸಲಿದೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ: ಭಾರತಕ್ಕೆ 6 ವಿಕೆಟ್ ರೋಚಕ ಗೆಲುವು

5 ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಆಸ್ಟ್ರೆಲಿಯಾಗೆ ತಿರುಗೇಟು ನೀಡುವುದರ ಜೊತೆಗೆ ವಿಶ್ವಕಪ್ ಟೂರ್ನಿಗೆ ತಯಾರಿ ಕೂಡ ನಡೆಸಲಿದೆ. ಹೀಗಾಗಿ ಈ ಸರಣಿ ಟೀಂ ಇಂಡಿಯಾ ಪಾಲಿಗೆ ತುಂಬಾ ಮುಖ್ಯವಾಗಿದೆ. ಅಭ್ಯಾಸದ ವೇಳೆ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಕೈಗೆ ಗಾಯವಾಗಿದ್ದು, ಮೊದಲ ಪಂದ್ಯ ಆಡುವ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಧೋನಿ ಚೇತರಿಸಿಕೊಳ್ಳದಿದ್ದರೆ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮೊದಲ ಏಕದಿನ ಪಂದ್ಯಕ್ಕೆ ಸಂಭವನೀಯ ಟೀಂ ಇಂಡಿಯಾ ಇಲ್ಲಿದೆ.

ಇದನ್ನೂ ಓದಿ: ಇಂಡೋ-ಪಾಕ್ ಟೆನ್ಶನ್: ಭಾರತ-ಆಸೀಸ್‌ ಏಕದಿನ ಬೆಂಗಳೂರಿಗೆ ಶಿಫ್ಟ್‌?

ಭಾರತ ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ಎಂ.ಎಸ್.ಧೋನಿ, ರಿಷಬ್ ಪಂತ್, ವಿಜಯ್ ಶಂಕರ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ವೇಳಾಪಟ್ಟಿ ಇಲ್ಲಿದೆ

ದಿನಾಂಕ ಪಂದ್ಯ ಸಮಯ
ಮಾ.02 1ನೇ ಏಕದಿನ(ಹೈದರಾಬಾದ್) 1.30PM
ಮಾ.05 2ನೇ ಏಕದಿನ(ನಾಗ್ಪುರ) 1.30PM
ಮಾ.08 3ನೇ ಏಕದಿನ(ರಾಂಚಿ) 1.30PM
ಮಾ.10 4ನೇ ಏಕದಿನ(ಮೊಹಾಲಿ) 1.30PM
ಮಾ.13 5ನೇ ಏಕದಿನ(ದೆಹಲಿ) 1.30PM
click me!