ಪರ್ತ್ ಟೆಸ್ಟ್ ಪಂದ್ಯದಿಂದ ರೋಹಿತ್‌ಗೆ ಗೇಟ್‌ಪಾಸ್?

Published : Dec 12, 2018, 08:47 PM IST
ಪರ್ತ್ ಟೆಸ್ಟ್ ಪಂದ್ಯದಿಂದ ರೋಹಿತ್‌ಗೆ ಗೇಟ್‌ಪಾಸ್?

ಸಾರಾಂಶ

ಸುದೀರ್ಘ ದಿನಗಳ ಬಳಿಕ ಟೆಸ್ಟ್ ತಂಡಕ್ಕೆ ಆಯ್ಕೆಯಾದ ರೋಹಿತ್ ಶರ್ಮಾಗೆ ಮತ್ತೆ ಆಘಾತ ಎದುರಾಗೋ ಸಾಧ್ಯತೆ ಹೆಚ್ಚಿದೆ. ದ್ವಿತೀಯ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಕಣಕ್ಕಿಳಿಯುವುದು ಅನುಮಾನವಾಗಿದೆ. 

ಪರ್ತ್(ಡಿ.12): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಇದೀಗ 2ನೇ ಪಂದ್ಯಕ್ಕೆ ಕಸರತ್ತು ಆರಂಭಿಸಿದೆ. ಪರ್ತ್‌ನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಕೆಲ ಬದಲಾವಣೆ ಮಾಡಲು ಟೀಂ ಇಂಡಿಯಾ ಮುಂದಾಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ದಿನನಿತ್ಯ ಆಹಾರ ಪದ್ಧತಿ ಹೇಗಿದೆ?

ಪರ್ತ್ ಮೈದಾನ ವೇಗಿಗಳಿಗೆ ಹೆಚ್ಚು ನೆರವು ನೀಡಲಿದೆ. ಹೀಗಾಗಿ ಟೀಂ ಇಂಡಿಯಾ ನಾಲ್ವರು ವೇಗಿಗಳನ್ನ ಕಣಕ್ಕಿಳಿಸಲು ಮುಂದಾಗಿದೆ. ಹೀಗಾದಲ್ಲಿ ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಮತ್ತೆ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ: ಇಂಡೋ-ಆಸಿಸ್ ಟೆಸ್ಟ್: 2ನೇ ಪಂದ್ಯಕ್ಕೂ ಮೊದಲೇ ಭಾರತಕ್ಕೆ ಹಿನ್ನಡೆ!

ರೋಹಿತ್ ಬದಲು ಉಮೇಶ್ ಯಾದವ್ ತಂಡ ಸೇರಿಕೊಳ್ಳೋ ಸಾಧ್ಯತೆ ಹೆಚ್ಚಿದೆ. ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್  ವೇಗದ ಸಾರಥ್ಯವಹಿಸಲಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಶಾಕ್ ನೀಡಲು ರೆಡಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆ ಸ್ಟಾರ್ ಆಲ್‌ರೌಂಡರ್‍‌ನ‌ ತ್ಯಾಗದ ಜೊತೆಗೆ 10 ಕೋಟಿ ಆಫರ್! ಆದ್ರೂ ಚೆನ್ನೈ ಪ್ಲಾನ್‌ಗೆ ಶಾಕ್ ಕೊಟ್ಟ ಮುಂಬೈ
IND vs ZIM 2nd T20I: ಹೊಸ ಚಾನೆಲ್‌ನಲ್ಲಿ ನೇರ ಪ್ರಸಾರ, ಆದ್ರೆ ಭಾರತ-ಜಿಂಬಾಬ್ವೆ ಮ್ಯಾಚ್ ಫ್ರೀ ಆಗಿ ವೀಕ್ಷಿಸೋದು ಹೇಗೆ? ಇಲ್ಲಿದೆ ಡೀಟೈಲ್ಸ್