ಹೊಸ ಸ್ವಿಂಗ್ ಬೌಲರ್ -ಈತನ ಸ್ವಿಂಗ್ ನೋಡಿದರೆ ಅಚ್ಚರಿಯಾಗೋದು ಖಚಿತ!

Published : Dec 12, 2018, 06:37 PM ISTUpdated : Dec 12, 2018, 06:41 PM IST
ಹೊಸ ಸ್ವಿಂಗ್ ಬೌಲರ್ -ಈತನ ಸ್ವಿಂಗ್ ನೋಡಿದರೆ ಅಚ್ಚರಿಯಾಗೋದು ಖಚಿತ!

ಸಾರಾಂಶ

ಸ್ವಿಂಗ್ ಬೌಲಿಂಗ್‌ನಲ್ಲಿ ಪಾಕಿಸ್ತಾನ ಮಾಜಿ ನಾಯಕ ವಾಸಿಮ್ ಅಕ್ರಮ್ ಮಾಸ್ಟರ್. ಇದೀಗ ಯುವ ವೇಗಿಯೊಬ್ಬನ ಸ್ವಿಂಗ್ ನೋಡಿದರೆ ಅಕ್ರಮ್ ಬೌಲಿಂಗ್‌ನ್ನ ಮೀರಿಸುವಂತಿದೆ. ಇಲ್ಲಿದೆ ಆತನ ಸ್ವಿಂಗ್ ಮೋಡಿ.

ಕರಾಚಿ(ಡಿ.12): ವಿಶ್ವ ಕ್ರಿಕೆಟ್‌ಗೆ ಭಾರತ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನ ನೀಡಿದ್ದರೆ, ಪಾಕಿಸ್ತಾನ ವೇಗಿಗಳನ್ನ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಪಾಕಿಸ್ತಾನ ಯುವ ಪ್ರತಿಭೆಯ ಸ್ವಿಂಗ್ ಬೌಲಿಂಗ್‌ ಎಲ್ಲರಲ್ಲೂ ಅಚ್ಚರಿ ತಂದಿದೆ.

ಇದನ್ನೂ ಓದಿ: ಐಪಿಎಲ್ ಹರಾಜು: ದಾಖಲೆ ಬರೀತಾರ ಈ ಐವರು ಕ್ರಿಕೆಟಿಗರು?

ಕರಾಚಿಯ ದೇಸಿ ಟೂರ್ನಿಯಲ್ಲಿ ಆಡುತ್ತಿರುವ ಯುವ ವೇಗಿ ಆಮಿರ್ ಬ್ರೊಹಿ ಸ್ವಿಂಗ್ ಬೌಲಿಂಗ್ ಬ್ಯಾಟ್ಸ್‌ಮನ್‌ಗಳನ್ನ ತಬ್ಬಿಬ್ಬು ಮಾಡುತ್ತಿದ್ದರೆ, ವೀಕ್ಷಕರಿಗೆ ಶಾಕ್ ನೀಡುತ್ತಿದೆ. ಸ್ವಿಂಗ್ ಮಾಸ್ಟರ್ ಪಾಕಿಸ್ತಾನ ಮಾಜಿ ನಾಯಕ ವಾಸಿಮ್ ಅಕ್ರಮ್ ಸ್ವಿಂಗ್ ಮೀರಿಸುವಂತಿದೆ ಈತನ ಬೌಲಿಂಗ್.

ಆಮೀರ್ ಬ್ರೊಹಿ ಅತ್ಯುತ್ತಮ ಸ್ವಿಂಗ್ ಬೌಲಿಂಗ್ ಮಾಡುತ್ತಿದ್ದಾನೆ. ಆದರೆ ಮೊನಚಿಲ್ಲ. ಸೂಕ್ತ ತರಬೇತಿ ಲಭಿಸಿದರೆ ಈತ ಭವಿಷ್ಯದ ಅತ್ಯುತ್ತಮ ಸ್ವಿಂಗ್ ವೇಗಿಯಾಗುವ ಎಲ್ಲಾ ಲಕ್ಷಣಗಳಿವೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ: ಡೆಲ್ಲಿ ,ಕೆಕೆಆರ್ ಬಳಿಕ ಹೊಸ ತಂಡದತ್ತ ಗೌತಮ್ ಗಂಭೀರ್?

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!