ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ 3ನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪಿದೆ. ಭಾರತದ ಗೆಲುವಿಗೆ ಇನ್ನು 2 ವಿಕೆಟ್ ಅವಶ್ಯಕತೆ ಇದ್ದರೆ, ಆಸ್ಟ್ರೇಲಿಯಾ ರನ್ ಸಿಡಿಸಬೇಕಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಅಂತಿಮ ದಿನ ಭಾರತ ಇತಿಹಾಸ ರಚಿಸಲು ಸಜ್ಜಾಗಿದೆ.
ಮೆಲ್ಬರ್ನ್(ಡಿ.29): ಆಸ್ಟ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇತಿಹಾಸ ರಚಿಸಲು ತುದಿಗಾಲಲ್ಲಿ ನಿಂತಿದೆ. ನಾಲ್ಕನೇ ದಿನದಾಟದಲ್ಲೂ ಟೀಂ ಇಂಡಿಯಾ ಬೌಲರ್‌ಗಳು ಆರ್ಭಟಿಸಿದರು. ಹೀಗಾಗಿ 399 ರನ್ ಟಾರ್ಗೆಟ್ ಪಡೆದಿರುವ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 242 ರನ್ ಸಿಡಿಸಿದೆ. ಇದೀಗ ಭಾರತದ ಗೆಲುವಿಗಿನ್ನು 2 ವಿಕೆಟ್ ಬೇಕಿದೆ.
5 ವಿಕೆಟ್ ನಷ್ಟಕ್ಕೆ 54 ರನ್‌ಗಳೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ಟೀಂ ಇಂಡಿಯಾಗೆ ಮಯಾಂಕ್ ಅಗರ್ವಾಲ್ ಆಸರೆಯಾದರು. ಮಯಾಂಕ್ ಹಾಗೂ ರಿಷಬ್ ಪಂತ್ ಜೋಡಿ ಜೊತೆಯಾಟದಿಂದ ಟೀಂ ಇಂಡಿಯಾ 100 ರನ್ ಗಡಿ ದಾಟಿತು.
ಇದನ್ನೂ ಓದಿ: ಸತತ 2ನೇ ವರ್ಷವೂ ಪಾಂಟಿಂಗ್ ದಾಖಲೆ ಮುರಿಯಲು ಕೊಹ್ಲಿ ಫೇಲ್
ರಿಷಬ್ 33 ರನ್ ಸಿಡಿಸಿ ಔಟಾದರೆ, ಮಯಾಂಕ್ 42 ರನ್ ಕಾಣಿಕೆ ನೀಡಿದರು. ಟೀಂ ಇಂಡಿಯಾ 7 ವಿಕೆಟ್ 106 ರನ್ ಸಿಡಿಸಿ 398 ರನ್ ಮುನ್ನಡೆ ಪಡೆದುಕೊಂಡಿತ್ತು. ಇದೇ ವೇಳೆ ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಈ ಮೂಲಕ ಆಸ್ಟ್ರೇಲಿಯಾ ಗೆಲುವಿಗೆ 399 ರನ್ ಟಾರ್ಗೆಟ್ ನೀಡಲಾಯಿತು.
ಬೃಹತ್ ಟಾರ್ಗೆಟ್ ಪಡೆದ ಆಸಿಸ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಿಕರನ್ನ ಹೊರತು ಪಡಿಸಿದರೆ, ದಿಟ್ಟ ಹೋರಾಟ ನೀಡಿತು. ಆ್ಯರೋನ್ ಫಿಂಚ್ 3 ಹಾಗೂ ಮಾರ್ಕಸ್ ಹ್ಯಾರಿಸ್ 13 ರನ್ ಸಿಡಿಸಿ ಔಟಾದರು. ಉಸ್ಮಾನ್ ಖವಾಜ 33, ಶಾನ್ ಮಾರ್ಶ್ 44, ಟ್ರಾವಿಸ್ ಹೆಡ್ 34 ರನ್ ಕಾಣಿಕೆ ನೀಡಿದರು.
ಇದನ್ನೂ ಓದಿ: ಕ್ರಿಕೆಟ್‌ಗೂ ಕಾಲಿಟ್ಟಿತು ಕಿಸ್ ಕ್ಯಾಮ್- ಮೈದಾನಲ್ಲೇ ಚುಂಬನ-ವೀಡಿಯೋ ವೈರಲ್!
ಮಿಚೆಲ್ ಮಾರ್ಶ್, ಟಿಮ್ ಪೈನೆ ಹಾಗೂ ಮಿಚೆಲ್ ಸ್ಟಾರ್ಕ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆದರೆ ಪ್ಯಾಟ್ ಕಮಿನ್ಸ್ ಹಾಗೂ ನಥನ್ ಲಿಯೊನ್ ಜೊತೆಯಾಟ ಟೀಂ ಇಂಡಿಯಾಗ ತಲೆ ನೋವು ತಂದಿತು. 8 ವಿಕೆಟ್ ಕಳೆದುಕೊಂಡ ಆಸಿಸ್ ತಂಡಕ್ಕೆ ರಿಯಲ್ ಹೀರೋ ಆದ ಪ್ಯಾಟ್ ಕಮಿನ್ಸ್ ಆಕರ್ಷಕ ಅರ್ಧಶತಕ ಸಿಡಿಸಿದರು.
ಇದನ್ನೂ ಓದಿ: ರೋಹಿತ್ ಸಿಕ್ಸ್ ಬಾರಿಸಿದ್ರೆ ಮುಂಬೈಗೆ ಬೆಂಬಲ: ಪೈನ್
ಅಂಪೈರ್ ಹೆಚ್ಚುವರಿ ಓವರ್ ನೀಡಿದರೂ ಆಸ್ಟ್ರೇಲಿಯಾ ಸೋಲೋಪ್ಪಲು ಸಿದ್ದವಿರಲಿಲ್ಲ. ದಿನದಾಟದ ಅಂತ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 258 ರನ್ ಸಿಡಿಸಿದೆ. ಆಸಿಸ್ ಗೆಲುವಿಗೆ ಇನ್ನು 141 ರನ್ ಅವಶ್ಯಕತೆ ಇದ್ದರೆ, ಭಾರತಕ್ಕೆ 2 ವಿಕೆಟ್ ಬೇಕಿದೆ. ಪ್ಯಾಟ್ ಕಮಿನ್ಸ್ ಅಜೇಯ 61 ರನ್ ಸಿಡಿಸಿದರೆ, ನಥನ್ ಲಿಯೋನ್ 6 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.