ಸತತ 2ನೇ ವರ್ಷವೂ ಪಾಂಟಿಂಗ್ ದಾಖಲೆ ಮುರಿಯಲು ಕೊಹ್ಲಿ ಫೇಲ್

By Web Desk  |  First Published Dec 29, 2018, 12:49 PM IST

2005ರಲ್ಲಿ ಪಾಂಟಿಂಗ್‌ 2833 ರನ್‌ ಕಲೆಹಾಕಿದ್ದರು. 2014ರಲ್ಲಿ ಶ್ರೀಲಂಕಾದ ಕುಮಾರ್‌ ಸಂಗಕ್ಕಾರ, ಪಾಂಟಿಂಗ್‌ ದಾಖಲೆ ಮುರಿಯುವ ಸನಿಹಕ್ಕೆ ಬಂದಿದ್ದರು. 2813 ರನ್‌ ಗಳಿಸಿದ ಸಂಗಾ, 20 ರನ್‌ಗಳಿಂದ ಹಿಂದೆ ಬಿದ್ದರು.


ಮೆಲ್ಬರ್ನ್‌[ಡಿ.29]: ಭಾರತ ತಂಡದ ನಾಯಕ, ರನ್‌ ಮಷಿನ್‌ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2735 ರನ್‌ಗಳೊಂದಿಗೆ 2018 ಅನ್ನು ಮುಕ್ತಾಯಗೊಳಿಸಲಿದ್ದಾರೆ. 2ನೇ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅವರು ನಿರಾಸೆ ಅನುಭವಿಸಿದರು. ಇದರೊಂದಿಗೆ ಸತತ 2ನೇ ವರ್ಷ ಆಸ್ಪ್ರೇಲಿಯಾದ ದಿಗ್ಗಜ ನಾಯಕ ರಿಕಿ ಪಾಂಟಿಂಗ್‌ರ ದಾಖಲೆ ಮುರಿಯುವಲ್ಲಿ ವಿಫರಾಗಿದ್ದಾರೆ.

ರೋಹಿತ್‌ ಸಿಕ್ಸ್‌ ಬಾರಿಸಿದ್ರೆ ಮುಂಬೈಗೆ ಬೆಂಬಲ: ಪೈನ್‌

2005ರಲ್ಲಿ ಪಾಂಟಿಂಗ್‌ 2833 ರನ್‌ ಕಲೆಹಾಕಿದ್ದರು. 2014ರಲ್ಲಿ ಶ್ರೀಲಂಕಾದ ಕುಮಾರ್‌ ಸಂಗಕ್ಕಾರ, ಪಾಂಟಿಂಗ್‌ ದಾಖಲೆ ಮುರಿಯುವ ಸನಿಹಕ್ಕೆ ಬಂದಿದ್ದರು. 2813 ರನ್‌ ಗಳಿಸಿದ ಸಂಗಾ, 20 ರನ್‌ಗಳಿಂದ ಹಿಂದೆ ಬಿದ್ದರು. 2017ರಲ್ಲಿ ವಿರಾಟ್‌ 2818 ರನ್‌ ಬಾರಿಸಿ, ಕೇವಲ 15 ರನ್‌ಗಳಿಂದ ವಿಶ್ವ ದಾಖಲೆ ಮುರಿಯುವ ಅವಕಾಶದಿಂದ ವಂಚಿತರಾಗಿದ್ದರು.

Tap to resize

Latest Videos

ಈ ವರ್ಷ 13 ಟೆಸ್ಟ್‌ಗಳಲ್ಲಿ 1322 ರನ್‌ ಕಲೆಹಾಕಿದ ವಿರಾಟ್‌, 14 ಏಕದಿನ ಪಂದ್ಯಗಳಲ್ಲಿ 1202 ರನ್‌ ಬಾರಿಸಿದರು. 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 211 ರನ್‌ ದಾಖಲಿಸಿದರು. ಕೊಹ್ಲಿ ಏಷ್ಯಾಕಪ್‌ ಸೇರಿ ತವರಿನಲ್ಲಿ ನಡೆದ ಕೆಲ ಸರಣಿಗಳಿಗೆ ಗೈರಾಗಿದ್ದರು.
 

click me!