ಎಂ.ಎಸ್.ಧೋನಿ ನಿವೃತ್ತಿ ಕುರಿತು ಕೋಚ್ ಬಾಂಗರ್ ಜೊತೆ ಹೇಳಿದ್ದೇನು?

By Web DeskFirst Published Jan 20, 2019, 9:00 AM IST
Highlights

ಆಸ್ಟ್ರೇಲಿಯಾ ವಿರುದ್ದದ ಅಂತಿಮ ಏಕದಿನ ಪಂದ್ಯದ ಗೆಲುವಿನ ಬಳಿಕ ಎಂ.ಎಸ್.ಧೋನಿ ಅಂಪೈರ್ ಬಳಿಯಿಂದ ಬಾಲ್ ಕೇಳಿ ಪಡೆದುಕೊಂಡರು. ಈ ಹಿಂದೆ ನ್ಯೂಜಿಲೆಂಡ್ ವಿರುದ್ದ ಇದೇ ರೀತಿ ಮಾಡಿದಾಗ ಧೋನಿ ನಿವೃತ್ತಿ ನೀಡ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಇದೀಗ ಸ್ವತಃ ಧೋನಿಯೇ ನಿವೃತ್ತಿ ಕುರಿತು ಕೋಚ್ ಸಂಜಯ್ ಬಾಂಗರ್ ಜೊತೆ ಮಾತನಾಡಿದ್ದಾರೆ.

ಮೆಲ್ಬರ್ನ್‌(ಜ.20): ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಸದ್ಯಕ್ಕೆ ನಿವೃತ್ತಿಯ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಆಸ್ಪ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯ ಗೆದ್ದ ಬಳಿಕ ಅಂಪೈರ್‌ಗಳಿಂದ ಚೆಂಡನ್ನು ಪಡೆದ ಧೋನಿ ಅದನ್ನು ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ಗೆ ಹಸ್ತಾಂತರಿಸಿದರು. 

ಇದನ್ನೂ ಓದಿ: ಇಲ್ಲಿದೆ ಭಾರತ-ನ್ಯೂಜಿಲೆಂಡ್ ಏಕದಿನ,ಟಿ20 ಸರಣಿ ವೇಳಾಪಟ್ಟಿ!

‘ಚೆಂಡನ್ನು ತೆಗೆದುಕೊಳ್ಳಿ, ಇಲ್ಲವಾದಲ್ಲಿ ನಾನು ನಿವೃತ್ತಿ ಪಡೆಯಲಿದ್ದೇನೆ ಎನ್ನುವ ಸುದ್ದಿ ಮತ್ತೊಮ್ಮೆ ಹಬ್ಬಲಿದೆ’ ಎಂದು ಧೋನಿ, ಬಾಂಗರ್‌ಗೆ ಹೇಳಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಸೋಲು ಕಂಡ ಬಳಿಕ ಧೋನಿ, ಅಂಪೈರ್‌ಗಳಿಂದ ಚೆಂಡನ್ನು ಪಡೆದಿದ್ದರು. 

 

to Bangar, handing over the match ball: Bolenge retirement ke liye utaaya hai 😂

And WTF is doing to Shami? 🙈 pic.twitter.com/VrcsO6ZY78

— Harsha ‏ہرشا (@Hramblings)

 

ಇದನ್ನೂ ಓದಿ: ರೋಜರ್ ಫೆಡರರ್ ಭೇಟಿಯಾದ ವಿರುಷ್ಕಾ ಜೋಡಿ!

ಚೆಂಡು ಪಡೆದ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದ ಧೋನಿ, ಸ್ವಿಂಗ್‌ ಏಕೆ ಆಗಲಿಲ್ಲ ಎನ್ನುವುದನ್ನು ಪರೀಕ್ಷಿಸಲು ಚೆಂಡನ್ನು ಅಂಪೈರ್‌ಗಳಿಂದ ಪಡೆದಿದ್ದಾಗಿ ಹೇಳಿದ್ದರು.
 

click me!