ಮಕ್ಕಳೆಂದು ಪರಿಗಣಿಸಬೇಡಿ- ಸೆಹ್ವಾಗ್‌ಗೆ ವಿಡೀಯೋ ಮೂಲಕ ಹೇಡನ್ ತಿರುಗೇಟು!

By Web Desk  |  First Published Feb 16, 2019, 3:49 PM IST

ಆಸ್ಟ್ರೇಲಿಯಾದ ಭಾರತ ಪ್ರವಾಸವನ್ನ ತಮಾಷೆ ವಿಡಿಯೋ ಜಾಹೀರಾತು ಮಾಡಿದ್ದ ವಿರೇಂದ್ರ ಸೆಹ್ವಾಗ್‌ಗೆ ಇದೀಗ ಮ್ಯಾಥ್ಯೂ ಹೇಡನ್ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ಹೇಡನ್ ನೂತನ ಜಾಹೀರಾತು ಹೇಗಿದೆ? ಇಲ್ಲಿದೆ ನೋಡಿ.
 


ಸಿಡ್ನಿ(ಫೆ.16): ಭಾರತ ಪ್ರವಾಸ ಮಾಡುತ್ತಿರುವ ಆಸ್ಟ್ರೇಲಿಯಾ ತಂಡವನ್ನ ತಮಾಷೇ ಮಾಡಿದ ವಿರೇಂದ್ರ ಸೆಹ್ವಾಗ್ ಜಾಹೀರಾತಿಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದ ಆಸಿಸ್ ಮಾಜಿ ಕ್ರಿಕೆಟಿಗ ಮಾಥ್ಯೂ ಹೇಡನ್ ಇದೀಗ ವಿಡೀಯೋ ಮೂಲಕ ತಿರುಗೇಟು ನೀಡಿದ್ದಾರೆ. ಆಸ್ಟ್ರೇಲಿಯಾವನ್ನ ಮಕ್ಕಳೆಂದು ಲಘುವಾಗಿ ಪರಿಗಣಿಸಬೇಡಿ ಎಂದು ಸೂಚಿಸಿದ್ದಾರೆ.

 

I do not want to say 'I told you so' but guess what, I TOLD YOU SO, ! 😜

The Aussies are up for the challenge from Feb 24 on Star Sports. 😏 pic.twitter.com/46knNAenlB

— Matthew Hayden AM (@HaydosTweets)

Tap to resize

Latest Videos

 

ಇದನ್ನೂ ಓದಿ: ವಿಶ್ವಕಪ್ 2019: 15 ಸದಸ್ಯರ ಸಂಭವನೀಯ ಟೀಂ ಇಂಡಿಯಾ ಇಲ್ಲಿದೆ!

ಭಾರತ-ಆಸ್ಪ್ರೇಲಿಯಾ ನಡುವಿನ ಟಿ20 ಮತ್ತು ಏಕದಿನ ಸರಣಿಯ ಪ್ರಚಾರಕ್ಕಾಗಿ ಸ್ಟಾರ್‌ ಸ್ಪೋರ್ಟ್ಸ್ ವಾಹಿನಿ ಹೊಸ ಜಾಹೀರಾತೊಂದನ್ನು ಪ್ರಸಾರ ಮಾಡಿದೆ. ಈ ಜಾಹೀರಾತಿನಲ್ಲಿ ‘ನಾವು ಆಸ್ಪ್ರೇಲಿಯಾಗೆ ಹೋಗಿದ್ದಾಗ ನಮಗೆ ಮಕ್ಕಳನ್ನು ನೋಡಿಕೊಳ್ಳುವಂತೆ ಹೇಳಲಾಯಿತು. ಈಗ ಆಸ್ಪ್ರೇಲಿಯನ್ನರು ಭಾರತ ಪ್ರವಾಸ ಕೈಗೊಳ್ಳುತ್ತೇವೆ ಎಂದಾಗ ಕುಟುಂಬ ಸಮೇತ ಬನ್ನಿ, ನಾವು ನಿಮ್ಮ ಮಕ್ಕಳನ್ನು ನೋಡಿಕೊಳ್ಳುತ್ತೇವೆ ಎಂದು ಆಹ್ವಾನ ನೀಡಿದ್ದೇವೆ’ ಎಂದು ಸೆಹ್ವಾಗ್‌ ಜಾಹೀರಾತಿನಲ್ಲಿ ತಮಾಷೆ ಮಾಡಿದ್ದರು.

 

Every baby needs a babysitter - 🇦🇺 and 🇮🇳 would remember this well! 😉

The Aussies are on their way and here's how is welcoming 'em! Watch Paytm Feb 24 onwards LIVE on Star Sports to know who will have the last laugh. pic.twitter.com/t5U8kBj78C

— Star Sports (@StarSportsIndia)

 

ಇದನ್ನೂ ಓದಿ: ವಿಶ್ವಕಪ್ 2019: ತಂಡದ ಯಶಸ್ಸಿಗೆ ಕಾರಣರಾಗೋ 5 ಆರಂಭಿಕರು!

ಇದೀಗ ಇದಕ್ಕೆ ಪ್ರತಿಯಾಗಿ ಮತ್ತೊಂದು ವಿಡಿಯೋ ರಿಲೀಸ್ ಮಾಡಲಾಗಿದ್ದು, ಇದರಲ್ಲಿ ಮ್ಯಾಥ್ಯೂ ಹೇಡನ್ ತಿರುಗೇಟು ನೀಡಿದ್ದಾರೆ. ಆಸ್ಟ್ರೇಲಿಯಾ ಮಕ್ಕಳಿಗೆ ಹಾಲಿನ ಬಾಟಲಿ ನೀಡುತ್ತಾ ಸೆಹ್ವಾಗ್, ಹಾಲು ಕುಡಿಯಿರಿ ಇಲ್ಲ ಕೊಹ್ಲಿ ಬರುತ್ತಾನೆ ಎಂದು ಹೆದರಿಸುತ್ತಾರೆ. ಇದೇ ವೇಳೆ ಮ್ಯಾಥ್ಯೂ ಹೇಡನ್ ಆಸ್ಟ್ರೇಲಿಯಾವನ್ನ ಮಕ್ಕಳೆಂದು ಪರಿಣಗಣಿಸಬೇಡಿ ವೀರೂ ಎಂದು ಹೇಳೋ ಮೂಲಕ ತಿರುಗೇಟು ನೀಡಿದ್ದಾರೆ.

click me!