ಏರ್ ಶೋ ಎಫೆಕ್ಟ್: ಬೆಂಗ್ಳೂರಲ್ಲಿ 2ನೇ ಟಿ20, ಮೊದಲ ಪಂದ್ಯಕ್ಕೆ ವೈಝಾಗ್ ಆತಿಥ್ಯ!

By Web Desk  |  First Published Feb 2, 2019, 2:44 PM IST

ಫೆಬ್ರವರಿ 20 ರಿಂದ 24ವರಗೆ ಬೆಂಗಳೂರಿನಲ್ಲಿ ಏರೋ ಇಂಡಿಯಾ (ಏರ್ ಶೋ) ಆಯೋಜನೆಗೊಳ್ಳುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯ ಸ್ಥಳಾಂತರಗೊಂಡಿದೆ. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣ 2ನೇ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಇಲ್ಲಿದೆ ನೂತನ ವೇಳಾಪಟ್ಟಿ
 


ಬೆಂಗಳೂರು(ಫೆ.02): ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಳೆ(ಫೆ.03) 5ನೇ ಹಾಗೂ ಅಂತಿಮ ಏಕದಿನ ಪಂದ್ಯ ಆಡಲಿದೆ. ಬಳಿಕ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ದದ ಟಿ20 ಹಾಗೂ ಏಕದಿನ ಸರಣಿ ಆಡಲಿದೆ. ಆಸಿಸ್ ವಿರುದ್ಧದ ಮೊದಲ ಟಿ20 ಪಂದ್ಯ ಫೆಬ್ರವರಿ 24 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣ ಮೊದಲ ಪಂದ್ಯದ ಬದಲು 2ನೇ ಟಿ20 ಪಂದ್ಯಕ್ಕೆ ಆತಿಥ್ಯವಹಿಸಲಿದೆ.

ಇದನ್ನೂ ಓದಿ: ಇಂಡೋ-ಕಿವೀಸ್ ಲಾಸ್ಟ್ ಫೈಟ್: ಯಾರಿಗೆಲ್ಲಾ ಸಿಗಬಹುದು ಚಾನ್ಸ್..?

Tap to resize

Latest Videos

undefined

ಫೆಬ್ರವರಿ 20 ರಿಂದ 24ರ ವರೆಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ ಏರ್ ಶೋ ಆಯೋನೆಗೊಳ್ಳುತ್ತಿದೆ. ಹೀಗಾಗಿ ಫೆ.24ರ ಆಸಿಸ್ ವಿರುದ್ದದ ಮೊದಲ ಟಿ20 ಪಂದ್ಯಕ್ಕೆ ಭದ್ರತೆ ನೀಡಲು ಅಸಾಧ್ಯ ಎಂದು ಪೊಲೀಸ್ ಇಲಾಖೆ ಹೇಳಿತ್ತು. ಹೀಗಾಗಿ ಕರ್ನಾಟರ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಬಿಸಿಸಿಐಗೆ ಪಂದ್ಯ ಸ್ಥಳಾಂತರಿಸಲು ಮನವಿ ಮಾಡಿತ್ತು. KSCA ಮನವಿಗೆ ಸ್ಪಂದಿಸಿರುವ ಬಿಸಿಸಿಐ, ಮೊದಲ ಪಂದ್ಯವನ್ನ ವಿಶಾಖಪಟ್ಟಂಗೆ ಸ್ಥಳಾಂತರಿಸಿದೆ. ಇನ್ನು ಫೆಬ್ರವರಿ 27 ರಂದು ನಡೆಯಲಿರುವ 2ನೇ ಪಂದ್ಯವನ್ನ ಬೆಂಗಳೂರು ಆತಿಥ್ಯ ವಹಿಸಲಿದೆ.

ಇದನ್ನೂ ಓದಿ: KL ರಾಹುಲ್ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು..?

ನೂತನ ವೇಳಾಪಟ್ಟಿ

ಫೆ.24 1ನೇ ಟಿ20  ವೈಝಾಗ್
ಫೆ.27 2ನೇ ಟಿ20 ಬೆಂಗಳೂರು

ಬೆಂಗಳೂರು ಪಂದ್ಯವನ್ನ ವೈಝಾಗ್ ಹಾಗೂ ವೈಝಾಗ್ ಪಂದ್ಯವನ್ನ ಬೆಂಗಳೂರಿಗೆ ಅದಲು ಬದಲು ಮಾಡೋ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಮನವಿಗೆ ಸ್ಪಂಧಿಸಿದ ಬಿಸಿಸಿಐಗೆ, ಕರ್ನಾಟ ರಾಜ್ಯ ಕ್ರಿಕೆಟ್ ಸಂಸ್ಥೆ ಧನ್ಯವಾದ ಹೇಳಿದೆ.  ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 2 ಟಿ20 ಹಾಗೂ 5 ಏಕದಿನ ಪಂದ್ಯ ಆಡಲಿದೆ. ಮಾರ್ಚ್ 13 ರಂದು ಅಂತಿಮ ಹಾಗೂ 5ನೇ ಏಕದಿನ ಪಂದ್ಯದೊಂದಿಗೆ ಆಸಿಸ್ ವಿರುದ್ದದ ಸರಣಿ ಅಂತ್ಯಗೊಳ್ಳಲಿದೆ.

click me!