ಬೆಂಗಳೂರು ಏರ್ ಶೋ: ಆಸಿಸ್ ವಿರುದ್ಧದ ಮೊದಲ ಟಿ20 ಸ್ಥಳಾಂತರ?

By Web DeskFirst Published Feb 1, 2019, 10:24 PM IST
Highlights

ಫೆಬ್ರವರಿ 20 ರಿಂದ 24ವರಗೆ ಬೆಂಗಳೂರಿನಲ್ಲಿ ಏರೋ ಇಂಡಿಯಾ (ಏರ್ ಶೋ) ಆಯೋಜನೆಗೊಳ್ಳುತ್ತಿದೆ. ಹೀಗಾಗಿ ಫೆಬ್ರವರಿ 24 ರಂದು ಆಯೋಜಿಸಲಾಗಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯ ಸ್ಥಳಾಂತರವಾಗೋ ಸಾಧ್ಯತೆ ಹೆಚ್ಚಿದೆ.
 

ಬೆಂಗಳೂರು(ಫೆ.01): ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಫೆಬ್ರವರಿ 24 ರಿಂದ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆರಂಭಿಸಲಿದೆ. ಮೊದಲ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಆದರೆ ಬೆಂಗಳೂರಿನಲ್ಲಿ ಫೆಬ್ರವರಿ 20 ರಿಂದ 24ರ ವರೆಗೆ ಏರ್ ಶೋ ಆಯೋಜನೆಗೊಳ್ಳೋ ಕಾರಣ ಇದೀಗ ಆರಂಭಿಕ ಪಂದ್ಯ ಸ್ಥಳಾಂತರವಾಗೋ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್‌ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?

ಏರ್ ಶೋ ಆಯೋಜನೆ ಕಾರಣ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭದ್ರತೆ ನೀಡಲು ಅಸಾಧ್ಯ ಎಂದು ಪೊಲೀಸ್ ಇಲಾಖೆ ಹೇಳಿದೆ. ಹೀಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೊದಲ ಟಿ20 ಪಂದ್ಯವನ್ನ ವಿಶಾಖಪಟ್ಟಣಂಗೆ ಸ್ಥಳಾಂತರಿಸಿ, 27 ರಂದು ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿರುವ 2ನೇ ಟಿ20 ಪಂದ್ಯವನ್ನ ಬೆಂಗಳೂರಿಗೆ ಶಿಫ್ಟ್ ಮಾಡುವುಂತೆ ಬಿಸಿಸಿಐಗೆ ಮನವಿ ಮಾಡಿದೆ.

ಇದನ್ನೂ ಓದಿ:ನೋ ಡೌಟ್: ’ಭಾರತದಲ್ಲೇ ನಡೆಯುತ್ತೆ 2023ರ ಏಕದಿನ ವಿಶ್ವಕಪ್’

ಬಿಸಿಸಿಐಗೆ ಈಗಾಗಲೇ ಮನವಿ ಮಾಡಿರುವ ಕೆಎಸ್‌ಸಿಎ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 2 ಟಿ20 ಹಾಗೂ 5 ಏಕದಿನ ಪಂದ್ಯ ಆಡಲಿದೆ. ಮಾರ್ಚ್ 13 ರಂದು ಅಂತಿಮ ಹಾಗೂ 5ನೇ ಏಕದಿನ ಪಂದ್ಯದೊಂದಿಗೆ ಆಸಿಸ್ ವಿರುದ್ದದ ಸರಣಿ ಅಂತ್ಯಗೊಳ್ಳಲಿದೆ.

click me!