2019ರ ವಿಶ್ವಕಪ್ ಟೂರ್ನಿ ಯಾರ ಪಾಲಾಗುತ್ತೆ ಅನ್ನೋ ಚರ್ಚೆ ಶುರುವಾಗಿದೆ. ಪ್ರಶಸ್ತಿಗಾಗಿ ಈ ಭಾರಿ ಪೈಪೋಟಿ ಹೆಚ್ಚಿದೆ. ಅದರಲ್ಲೂ ಸೆಮಿಫೈನಲ್ ಹಂತದಲ್ಲಿ ಭರ್ಜರಿ ಹೋರಾಟ ಎದುರಾಗಲಿದೆ. ಈ ಸೆಮೀಸ್ ಹಂತಕ್ಕೆ ಲಗ್ಗೆ ಇಡೋ 4 ತಂಡಗಳು ಯಾವುದು? ಇಲ್ಲಿದೆ ವಿವರ.
ಬೆಂಗಳೂರು(ಫೆ.01): ಇಂಗ್ಲೆಂಡ್ ಪ್ರಸಕ್ತ ವಿಶ್ವಕಪ್ ಟೂರ್ನಿ ಆಯೋಜಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಮೇ 31, 2019ರಿಂದ ಪ್ರತಿಷ್ಠಿತ ವಿಶ್ವಕಪ್ ಆರಂಭಗೊಳ್ಳಲಿದೆ. ಅಗ್ರಸ್ಥಾನದಲ್ಲಿರುವ 8 ತಂಡಗಳು ನೇರವಾಗಿ ಅರ್ಹತೆ ಪಡೆದಿದ್ದರೆ, ಇನ್ನೆರಡು ತಂಡಗಳು ಅರ್ಹತಾ ಸುತ್ತಿನ ಪಂದ್ಯ ಆಡಿ ಟೂರ್ನಿಗೆ ಎಂಟ್ರಿಕೊಡಲಿದೆ. ಸದ್ಯ ಟಾಪ್ 8 ತಂಡಗಳಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಡಬಹುದಾದ ತಂಡದ ವಿವರ ಇಲ್ಲಿದೆ.
ಟೀಂ ಇಂಡಿಯಾ
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಆಸ್ಟ್ರೇಲಿಯಾ, ಸೌತ್ಆಫ್ರಿಕಾ, ನ್ಯೂಜಿಲೆಂಡ್ ವಿರುದ್ದ ಸರಣಿ ಗೆಲುವು ಸಾಧಿಸಿರುವ ಭಾರತ, ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ಇದೇ ಮೊದಲ ಬಾರಿಗೆ ಭಾರತದ ಬೌಲಿಂಗ್ ವಿಭಾಗವೂ ಅಷ್ಟೇ ಉತ್ತಮವಾಗಿದೆ. ಹೀಗಾಗಿ ಭಾರತ ಸೆಮಿಫೈನಲ್ ಲಗ್ಗೆ ಇಡೋದರಲ್ಲಿ ಯಾವುದೇ ಅನುಮಾನವಿಲ್ಲ.
undefined
ಇಂಗ್ಲೆಂಡ್
ವಿಶ್ವಕಪ್ ಟೂರ್ನಿಗೆ ಆತಿಥ್ಯವಹಿಸಿರುವ ಇಂಗ್ಲೆಂಡ್ ತಂಡ ಬಲಿಷ್ಠ ತಂಡ ಅನ್ನೋದನ್ನ ಅಲ್ಲಗೆಳೆಯುವಂತಿಲ್ಲ. ಜೊತೆಗೆ ತವರಿನ ಕಂಡೀಷನ್ ಕೂಡ ಇಂಗ್ಲೆಂಡ್‌ಗೆ ನೆರವಾಗಲಿದೆ. ಹೀಗಾಗಿ ಇಂಗ್ಲೆಂಡ್ ಸೆಮಿಫೈನಲ್‌ಗೆ ಲಗ್ಗೆ ಇಡುವ ಸಾಧ್ಯತೆ ಹೆಚ್ಚು.
ಪಾಕಿಸ್ತಾನ
ಯುವ ಆಟಗಾರರನ್ನೊಳಗೊಂಡಿರುವ ಪಾಕಿಸ್ತಾನ ತಂಡ ಕೂಡ ಈ ಬಾರಿ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸೋ ತಂಡವಾಗಿ ಗುರುತಿಸಿಕೊಂಡಿದೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತವನ್ನ ಸೋಲಿಸಿ ಪ್ರಶಸ್ತಿ ಗೆದ್ದ ಪಾಕಿಸ್ತಾನದ ಆತ್ಮವಿಶ್ವಾಸ ಹೆಚ್ಚಿದೆ. ಫಕರ್ ಜಮಾನ್ ಸೇರಿದ ಪಾಕ್ ಬ್ಯಾಟಿಂಗ್ ವಿಭಾಗ ಹಾಗೂ ಎಂದಿನಂತೆ ಬೌಲಿಂಗ್ ವಿಭಾಗ ಉತ್ತಮವಾಗಿದೆ.
ನ್ಯೂಜಿಲೆಂಡ್
ನ್ಯೂಜಿಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡ ಕೂಡ ಸೆಮಿಫೈನಲ್ ಪ್ರವೇಶಿಸೋ ನೆಚ್ಚಿನ ತಂಡಗಳಾಗಿವೆ. ಆದರೆ ಇವೆರಡು ತಂಡದಲ್ಲಿ ನ್ಯೂಜಿಲೆಂಡ್ ಬಲಿಷ್ಠವಾಗಿ ಹೊರಹೊಮ್ಮಿದೆ. 2018ರಲ್ಲಿ ಆಡಿದ 14 ಏಕದಿನ ಪಂದ್ಯದಲ್ಲಿ ಕೇವಲ 4 ಪಂದ್ಯ ಸೋತಿದೆ. 2019ರಲ್ಲಿ ಭಾರತ ವಿರುದ್ದ 3 ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದೆ. ಆದರೆ ನ್ಯೂಜಿಲೆಂಡ್ ಬಲಿಷ್ಠ ತಂಡ ಅನ್ನೋದು ಮರೆಯುವಂತಿಲ್ಲ.