
ನವದೆಹಲಿ(ಸೆ.12): ಬುಧವಾರ ಇಲ್ಲಿ ಮುಕ್ತಾಯವಾದ ಟ್ರ್ಯಾಕ್ ಏಷ್ಯಾಕಪ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸೈಕ್ಲಿಸ್ಟ್‌ಗಳು ಪ್ರಾಬಲ್ಯ ಮೆರೆದಿದ್ದಾರೆ.
ಏಷ್ಯಾ ಕಪ್ ಸೈಕ್ಲಿಂಗ್ ಚಾಂಪಿಯನ್‌ಶಿಪ್: ರಾಜ್ಯದ ವೆಂಕಪ್ಪಗೆ ಬೆಳ್ಳಿ
3ನೇ ಹಾಗೂ ಕೊನೆಯ ದಿನವಾದ ಬುಧವಾರ ಭಾರತದ ಸೈಕ್ಲಿಸ್ಟ್‌ಗಳು 2 ಚಿನ್ನ, 1 ಕಂಚಿನ ಪದಕ ಜಯಿಸಿದ್ದಾರೆ. ಒಟ್ಟಾರೆ ಭಾರತ 10 ಚಿನ್ನ, 8 ಬೆಳ್ಳಿ ಹಾಗೂ 7 ಕಂಚಿನೊಂದಿಗೆ 25 ಪದಕ ಗೆದ್ದಿದ್ದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಏಷ್ಯಾ ಸೈಕ್ಲಿಂಗ್: ಭಾರತದ ರೋನಾಲ್ಟೋ ಏಷ್ಯಾ ದಾಖಲೆ
ಕಿರಿಯ ಪುರುಷರ ಕಿರೆನ್ ಸ್ಪರ್ಧೆಯಲ್ಲಿ ರೋನಾಲ್ಡೊ ಲೈಟೊನ್ಜಾಮ್, ಚಿನ್ನ ಗೆದ್ದರು. ಇದಕ್ಕೂ ಮುನ್ನ 1 ಕಿ.ಮೀ. ಟೈಮ್ ಟ್ರಯಲ್ ಹಾಗೂ ಸ್ಪ್ರಿಂಟ್ ಸ್ಪರ್ಧೆಯಲ್ಲಿ ರೋನಾಲ್ಡೊ ಚಿನ್ನಕ್ಕೆ ಮುತ್ತಿಟ್ಟರು. 2ನೇ ದಿನದ ಸ್ಪರ್ಧೆಯಲ್ಲಿ ರೋನಾಲ್ಡೊ ದಾಖಲೆ ನಿರ್ಮಿಸಿದ್ದರು. ಒಟ್ಟಾರೆ ರೋನಾಲ್ಡೊ 4 ಚಿನ್ನ ಗೆದ್ದರು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.