
ಢಾಕಾ(ಅ.15): ಭಾರತ ತಂಡ ಏಷ್ಯಾಕಪ್ ಹಾಕಿ ಪಂದ್ಯಾವಳಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1 ಗೋಲುಗಳ ಜಯ ಸಾಧಿಸಿದೆ.
ಸತತ ಮೂರು ಗೆಲುವಿನೊಂದಿಗೆ ಮನ್‌ಪ್ರೀತ್ ಸಿಂಗ್ ಪಡೆ ‘ಸೂಪರ್ 4’ ಹಂತ ಪ್ರವೇಶಿಸಿದೆ. ಈ ಮೊದಲು ಜಪಾನ್, ಬಾಂಗ್ಲಾದೇಶ ವಿರುದ್ಧ ಗೆಲುವು ಪಡೆದಿತ್ತು. 17ನೇ ನಿಮಿಷದಲ್ಲಿ ಚಿಂಗ್ಲೆನ್‌ಸಾನಾ ಸಿಂಗ್, 44 ನಿಮಿಷದಲ್ಲಿ ರಮಣ್‌ದೀಪ್ 45ನೇ ನಿಮಿಷದಲ್ಲಿ ಹರ್ಮನ್ ದೀಪ್ ಗೋಲು ಬಾರಿಸಿ ತಂಡವು 3-0 ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಪಾಕ್ ಪರ ಅಲಿ ಶಾನ್ 49ನೇ ನಿಮಿಷದಲ್ಲಿ ಗೋಲು ಹೊಡೆದು ಒಂಚೂರು ಆಶಾಭಾವನೆ ಮೂಡಿಸಿದರೂ ನಂತರದ ಸಮಯದಲ್ಲಿ ಗೋಲು ಬಾರಿಸಲು ವಿಫಲವಾಯಿತು.
3 ಪಂದ್ಯಗಳಲ್ಲಿ 3 ಜಯದೊಂದಿಗೆ ‘ಎ’ ಗುಂಪಿನಲ್ಲಿ ಭಾರತ ಅಗ್ರಸ್ಥಾನ ಪಡೆದರೆ,2 ಗೆಲುವು 1 ಸೋಲಿನೊಂದಿಗೆ ಪಾಕಿಸ್ತಾನ 2ನೇ ಸ್ಥಾನ ಪಡೆದ ‘ಸೂಪರ್ 4’ ಹಂತ ಪ್ರವೇಶಿಸಿತು. ‘ಬಿ’ ಗುಂಪಿನಿಂದ ದಕ್ಷಿಣ ಕೊರಿಯಾ ಹಾಗೂ ಮಲೇಷ್ಯಾ 2ನೇ ಸುತ್ತಿಗೆ ಪ್ರವೇಶಿಸಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.