ಏಷ್ಯನ್ ವಾಲಿಬಾಲ್: ಭಾರತ ಫೈನಲ್ ಪ್ರವೇಶ

By Web Desk  |  First Published Aug 11, 2019, 12:13 PM IST

ಭಾರತ ವಾಲಿಬಾಲ್ ತಂಡ ಏಷ್ಯನ್ ಅಂಡರ್ -23 ಪುರುಷರ ವಾಲಿಬಾಲ್ ಚಾಂಪಿಯನ್ ಶಿಪ್‌ನಲ್ಲಿ ಇತಿಹಾಸ ನಿರ್ಮಿಸಿದ್ದು, ಪಾಕಿಸ್ತಾನ ತಂಡವನ್ನು ಮಣಿಸಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಕುರಿತಾದ ವರದಿ ಇಲ್ಲಿದೆ 


ಮ್ಯಾನ್ಮಾರ್(ಆ.11): ಏಷ್ಯನ್ ಅಂಡರ್ -23 ಪುರುಷರ ವಾಲಿಬಾಲ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. 

ಏಷ್ಯಾ ವಾಲಿಬಾಲ್‌: ಸೆಮೀಸ್ ಪ್ರವೇಶಿಸಿದ ಭಾರತ

Tap to resize

Latest Videos

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನ ವಿರುದ್ಧ 3-1 ಸೆಟ್‌ಗಳಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಭಾನುವಾರ ಫೈನಲ್‌ನಲ್ಲಿ ಭಾರತ ತಂಡ, ಚೈನೀಸ್ ತೈಪೆ ಎದುರು ಸೆಣಸಲಿದೆ. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ವಾಲಿಬಾಲ್ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಾಕಿಸ್ತಾನ ವಿರುದ್ಧದ ಮೊದಲ ಸೆಟ್ ಅನ್ನು 21-25 ರಿಂದ ಸೋತಿದ್ದ ಭಾರತ, ನಂತರದ ಆಟದಲ್ಲಿ 3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿತು. 2ನೇ ಸೆಟ್‌ನ್ನು 25-16 ರಿಂದ ಪಾಕಿಸ್ತಾನ ವನ್ನು ಹಿಂದಿಕ್ಕಿದ ಭಾರತ ಸಮಬಲ ಸಾಧಿಸಿತು. 

A terrific victory for as they came from a set behind to beat 21-25,25-16,25-22,25-18 & reach the final of the Asian U-23 C’ships in Myanmar.🏐🇮🇳

Congratulations & best wishes for the final.👍🏻 | | | pic.twitter.com/LkQd49IuCG

— SAIMedia (@Media_SAI)

3ನೇ ಸೆಟ್‌ನಲ್ಲಿ ಪಾಕಿಸ್ತಾನದ ಸವಾಲನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದ ಭಾರತದ ಆಟಗಾರರು 25-22 ರಿಂದ ಸೆಟ್ ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿತು. ಇನ್ನೂ ಕೊನೆಯ ಹಾಗೂ 4ನೇ ಸೆಟ್‌ನಲ್ಲಿ ಭಾರತದ ಆಟಗಾರರು 25-18 ರಿಂದ ಮುನ್ನಡೆದು ಜಯದ ನಗೆ ಬೀರಿತು.

click me!