ಕೊಹ್ಲಿ-ರೋಹಿತ್‌ ಜಗಳದ ಸುದ್ದಿ ನಿಲ್ಲಲ್ಲ..!

By Web Desk  |  First Published Aug 10, 2019, 9:22 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವಿನ ಜಗಳ ಸದ್ಯಕ್ಕೆ ಮುಗಿಯುವುದಿಲ್ಲ ಎಂದು ಸುನಿಲ್ ಗವಾಸ್ಕರ್ ಎಂದು ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ನವದೆಹಲಿ(ಆ.10): ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮಾ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದೆ. ಇಬ್ಬರ ನಡುವೆ ಮನಸ್ತಾಪ ಶುರುವಾಗಿದೆ ಎನ್ನುವ ಸುದ್ದಿಗಳು ಸದ್ಯಕ್ಕೆ ನಿಲ್ಲುವುದಿಲ್ಲ. ಇನ್ನೂ ಕೆಲ ವರ್ಷಗಳ ಕಾಲ ಇಂತಹ ವದಂತಿಗಳು ಹಬ್ಬುತ್ತಲೇ ಇರುತ್ತವೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಹೇಳಿದ್ದಾರೆ. 

ಮನಸ್ತಾಪ ಬದಿಗಿಟ್ಟು ದಾಖಲೆ ಬರೆಯಲು ಕೊಹ್ಲಿ-ರೋಹಿತ್ ರೆಡಿ!

Tap to resize

Latest Videos

undefined

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಕೊಹ್ಲಿ-ರೋಹಿತ್ ನಡುವೆ ಮನಸ್ತಾಪ ಉಂಟಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಕೊಹ್ಲಿಯನ್ನು ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ಸೀಮಿತಗೊಳಿಸಿ, ರೋಹಿತ್ ಅವರಿಗೆ ಏಕದಿನ ಹಾಗೂ ಟಿ20 ತಂಡದ ನಾಯಕನಾಗಿ ಪಟ್ಟಕಟ್ಟಲಾಗುತ್ತದೆ ಎಂದೆಲ್ಲಾ ವರದಿಯಾಗಿತ್ತು.

ಯೋಧರಿಗೆ ಹಾಡಿನ ಮೂಲಕ ಸ್ಫೂರ್ತಿ ತುಂಬಿದ ಸೈನಿಕ ಧೋನಿ!

ಇಂತಹ ಸುದ್ದಿಗಳನ್ನು ತಂಡದಲ್ಲಿರುವ ಹತಾಶೆಗೊಂಡ ಆಟಗಾರರೇ ಹಬ್ಬಿಸುತ್ತಾರೆ ಎಂದು ಗವಾಸ್ಕರ್‌ ಗಂಭೀರ ಆರೋಪ ಮಾಡಿದ್ದಾರೆ. ಇದರೊಂದಿಗೆ ಇದೆಲ್ಲಾ ಡ್ರೆಸ್ಸಿಂಗ್ ರೂಂನವರದ್ದೇ ಕಿತಾಪತಿ ಎನ್ನುವ ರಹಸ್ಯವನ್ನು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

click me!