ಪಾಕಿಸ್ತಾನಿಯರಿಗೆ ವಿಸಾ ನಿರಾಕರಣೆ - ಬೆಂಗಳೂರು ಸ್ನೂಕರ್ ಟೂರ್ನಿ ಮುಂದೂಡಿಕೆ!

By Web DeskFirst Published Feb 25, 2019, 9:32 PM IST
Highlights

ಪುಲ್ವಾಮಾ ದಾಳಿಯಿಂದ ಶೂಟಿಂಗ್ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಶೂಟರ್ಸ್‌ಗೆ ವೀಸಾ ನಿರಾಕರಿಸಿದ ಭಾರತ ಇದೀಗ ಸ್ನೂಕರ್ ಟೂರ್ನಿಗೂ ಪಾಕ್ ಕ್ರೀಡಾಪಟುಗಳಿ ವೀಸಾ ನಿರಾಕರಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಟೂರ್ನಿ ಬೇರೆ ದೇಶಕ್ಕೆ ಸ್ಥಳಾಂತರವಾಗೋ ಸಾಧ್ಯತೆ ಹೆಚ್ಚಿದೆ.

ಬೆಂಗಳೂರು(ಫೆ.25): ಪುಲ್ವಾಮಾ ದಾಳಿಯಿಂದ ಪಾಕಿಸ್ತಾನ ಜೊತೆಗಿನ ಯಾವುದೇ ಸಂಬಂಧಕ್ಕೂ ಭಾರತ ತಯಾರಿಲ್ಲ. ಈಗಾಗಲೇ ಶೂಟಿಂಗ್ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಶೂಟರ್ಸ್‌ಗೆ ವೀಸಾ ನಿರಾಕರಿಸಿರುವ ಭಾರತ, ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಏಷ್ಯಾ ರೆಡ್ಸ್ ಸ್ನೂಕರ್ ಸ್ಪರ್ಧೆಗೂ ಪಾಕ್ ಕ್ರೀಡಾಪಟುಗಳಿಗೆ ವೀಸಾ ನೀಡಲು ಭಾರತ ಹಿಂದೇಟು ಹಾಕಿದೆ. ಹೀಗಾಗಿ ಇದೀಗ ಟೂರ್ನಿಯನ್ನು ಮುಂದೂಡಲಾಗಿದೆ.

ಇದನ್ನೂ ಓದಿ: ಪಾಕ್ ಶೂಟರ್ಸ್‌ಗೆ ವೀಸಾ ನಿರಾಕರಣೆ- ಭಾರತಕ್ಕೆ ಶಾಕ್ ನೀಡಿದ IOC!

ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡಯಬೇಕಿದ್ದ 10 ರೆಡ್ಸ್ ಏಷ್ಯನ್ ಸ್ನೂಕರ್ ಸ್ಪರ್ಧೆ ಮುಂದೂಡಲಾಗಿದೆ. 3 ಲೆಗ್ ಟೂರ್ನಮೆಂಟ್‌ನ ಆರಂಭಿಕ 2 ಲೆಗ್ ಖತಾರ್ ಹಾಗೂ ಚೀನಾದಲ್ಲಿ ನಡೆದಿತ್ತು. ಇದೀಗ ಬೆಂಗಳೂರಿನಲ್ಲಿ 3ನೇ ಲೆಗ್ ಆಯೋಜಿಸಲಾಗಿತ್ತು. ಆದರೆ ಪುಲ್ವಾಮಾ ದಾಳಿಯಿಂದ ಪಾಕಿಸ್ತಾನದ ಯಾರಿಗೂ ಭಾರತ ಪ್ರವೇಶಿಸಲು ನಿರಾಕರಿಸಲಾಗುತ್ತಿದೆ. ಹೀಗಾಗಿ ಇದೀಗ ಎಷ್ಯನ್ ಕಾನ್‌ಫೆಡರೇಶನ್ ಆಫ್ ಬಿಲಿಯರ್ಡ್ಸ್ ಸ್ಪೋರ್ಟ್(ACBS) ಟೂರ್ನಿಯನ್ನ ಭಾರತದಿಂದ ಬೇರೆ ದೇಶಕ್ಕೆ ಸ್ಥಳಾಂತರಿಸಲು ಮುಂದಾಗಿದೆ.

ಇದನ್ನೂ ಓದಿ: ಐಸಿಸಿಗೆ ಬಿಸಿಸಿಐ ಪತ್ರ - ಪಾಕಿಸ್ತಾನಕ್ಕೆ ಶುರುವಾಯ್ತು ಆತಂಕ!

ರೆಡ್ಸ್ ಏಷ್ಯನ್ ಸ್ನೂಕರ್ ಟೂರ್ನಿಯ 24 ಕ್ರೀಡಾಪಟುಗಳ ಪೈಕಿ 6 ಮಂದಿ ಪಾಕ್ ಮೂಲದವರು. ಈ 6 ಕ್ರೀಡಾಪಟುಗಳಿಗೆ ವೀಸಾ ನೀಡಲು ಭಾರತ ಹಿಂದೇಟು ಹಾಕಿದೆ. ಪಾಕಿಸ್ತಾನ  ACBSಗೆ ದೂರು ನೀಡಿದೆ. ಈಗಾಗಲೇ ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳೋ ಪಾಕಿಸ್ತಾನ ಶೂಟರ್ಸ್‌ಗೆ ವೀಸಾ ನಿರಾಕರಿಸಿರುವ ಭಾರತಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಎಚ್ಚರಿಕೆ ನೀಡಿದೆ. ಎಲ್ಲಾ ಕ್ರೀಡಾಪಟುಗಳಿಗೆ ವೀಸಾ, ಭದ್ರತೆ ಹಾಗೂ ಅತ್ಯುತ್ತಮ ಆತಿಥ್ಯ ನೀಡೋ ಜವಾಬ್ದಾರಿ ಹೊತ್ತುಕೊಳ್ಳೋವರೆಗೂ ಭಾರತಕ್ಕೆ ಯಾವುದೇ ಟೂರ್ನಿ ಆಯೋಜಿಸುವ ಹಕ್ಕು ನೀಡುವುದಿಲ್ಲ ಎಂದಿದೆ.

click me!