
ವೈಝಾಗ್(ಫೆ.25): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸೋ ಮೂಲಕ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಇನ್ನೇನಿದ್ದರೂ ಬೆಂಗಳೂರು ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡೋ ಅವಕಾಶ ಮಾತ್ರ ಟೀಂ ಇಂಡಿಯಾ ಮುಂದಿದೆ. ವಿಶಾಖಪ್ಪಟಣಂ ಪಂದ್ಯದಲ್ಲಿ ಕೊಹ್ಲಿ ಸೈನ್ಯದ ಮೂರು ತಪ್ಪುಗಳೇ ಸೋಲಿಗೆ ಕಾರಣವಾಗಿದೆ.
ಇದನ್ನೂ ಓದಿ: ಧೋನಿ ಪ್ಲೀಸ್ ನಿವೃತ್ತಿಯಾಗ್ಬಿಡಿ: ಗೋಗರೆದ ಟ್ವಿಟರಿಗರು..!
1 ರಿಷಬ್ ಪಂತ್ ರನೌಟ್
ನಾಯಕ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತ್ತು. ಆದರೆ ಕೊಹ್ಲಿ ವಿಕೆಟ್ ಪತನ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ರನ್ ಕದಿಯಲು ಹೋದ ರಿಷಬ್ ಪಂತ್ ರನೌಟ್ ಪಂದ್ಯಕ್ಕೆ ಬಹುದೊಡ್ಡ ಹೊಡೆತ ನೀಡಿತು. ಬಾಲ್ ಇನ್ನೂ ಫೀಲ್ಡರ್ ದಾಟಿರಲಿಲ್ಲ. ಅಷ್ಟರಲ್ಲೇ ರಿಷಬ್ ಪಿತ್ ಅರ್ಧಭಾಗ ತಲುಪಿದ್ದರು. ಪಂತ್ ವಿಕೆಟ್ ಪತನದ ಬಳಿಕ ಭಾರತ ರನ್ ವೇಗಕ್ಕೆ ಕಡಿವಾಣ ಬಿತ್ತು.
"
ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಟಿ20, ಏಕದಿನ ಸರಣಿ ವೇಳಾಪಟ್ಟಿ ಇಲ್ಲಿದೆ!
2 ಸ್ಟ್ರೈಕ್ ರೊಟೇಟ್ ಮಾಡಲು ಧೋನಿ ವಿಫಲ
ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸ್ಟ್ರೈಕ್ ರೊಟೇಟ್ ಮಾಡಲುವಲ್ಲಿ ವಿಫಲರಾಗಿದ್ದು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಚುಟುಕು ಕ್ರಿಕೆಟ್‌ನಲ್ಲಿ ಸ್ಟ್ರೈಕ್ ರೊಟೇಟ್ ಅಷ್ಟೇ ಮುಖ್ಯ. ಆದರೆ ಧೋನಿ ರನ್ ಗಳಿಸಲು ತಿಣುಕಾಡಿದರು. ಧೋನಿ 37 ಎಸೆತದಲ್ಲಿ ಕನಿಷ್ಠ 40 ರಿಂದ 45 ರನ್ ಸಿಡಿಸಿದ್ದರೆ ಆಸಿಸ್‌ಗೆ ಚೇಸಿಂಗ್ ಕಷ್ಟವಾಗುತ್ತಿತ್ತು.
ಇದನ್ನೂ ಓದಿ: ಉಗ್ರರನ್ನು ಬೆಂಬಲಿಸುವ ಪಾಕ್ ತಂಡವನ್ನು ಬಹಿಷ್ಕರಿಸಿ: ವಿನೋದ್ ರಾಯ್
3 ಉಮೇಶ್ ಯಾದವ್‌ಗೆ ಡೆತ್ ಓವರ್
ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಉಮೇಶ್ ಯಾದವ್ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಹೀಗಿರುವಾಗಿ ಉಮೇಶ್ ಯಾದವ್‌ಗೆ ಡೆತ್ ಓವರ್ ನೀಡಿ ಗೆಲ್ಲೋ ಪಂದ್ಯವನ್ನೂ ಕೈಚೆಲ್ಲಬೇಕಾಯಿತು. ಆದದರೆ ಉಮೇಶ್ ಯಾದವ್‌ಗೆ ಡೆತ್ ಓವರ್ ನೀಡೋ ಬದಲು ಬೇರೆ ಅವಕಾಶ ತಂಡಕ್ಕಿರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.