ಹಾಕಿ: ಬೆಲ್ಜಿಯಂ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ

By Suvarna Web DeskFirst Published Jun 6, 2017, 11:08 AM IST
Highlights

ಭಾರತ ಹಾಕಿ ತಂಡ ಈ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋತಿತ್ತು. ಬಳಿಕ, 2ನೇ ಪಂದ್ಯದಲ್ಲಿ ಜರ್ಮನಿ ವಿರುದ್ಧ 2-2ರಲ್ಲಿ ಡ್ರಾ ಸಾಧಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಗೆದ್ದ ಉತ್ಸಾಹದಲ್ಲಿರುವ ಭಾರತ ತಂಡವು ತನ್ನ 4ನೇ ಪಂದ್ಯದಲ್ಲಿ ಜರ್ಮನಿಯೊಂದಿಗೆ ಮತ್ತೊಮ್ಮೆ ಮುಖಾಮುಖಿಯಾಗಲಿದೆ.

ಡುಸೆಲ್‌'ಡಾರ್ಫ್, ಜರ್ಮನಿ: ಇಲ್ಲಿ ನಡೆಯುತ್ತಿರುವ ಆಹ್ವಾನಿತ ತ್ರಿಕೋನ ಸರಣಿ ಹಾಕಿ ಪಂದ್ಯಾವಳಿಯಲ್ಲಿ ಭಾರತ ಮೊದಲ ಗೆಲುವು ಸಾಧಿಸಿದೆ. ಸೋಮವಾರ ಬೆಲ್ಜಿಯಂ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಸಂಭ್ರಮಿಸಿತು. ಈ ಮೂಲಕ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು.

ಈ ಪಂದ್ಯದಲ್ಲಿ 13ನೇ ನಿಮಿಷದಲ್ಲೇ ಬೆಲ್ಜಿಯಂ ಗೋಲಿನ ಖಾತೆ ತೆರೆಯಿತು. ಮೊದಲಾರ್ಧದ ಮುಕ್ತಾಯಕ್ಕೆ 1-0 ಮುನ್ನಡೆ ಪಡೆಯಿತು. ಹರ್ಮನ್‌'ಪ್ರೀತ್‌ ಪೆನಾಲ್ಟಿಕಾರ್ನರ್‌ ಮೂಲಕ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು. 37ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್‌ ತಂಡಕ್ಕೆ 2-1 ಮುನ್ನಡೆ ಒದಗಿಸಿದರು. 45ನೇ ನಿಮಿಷದಲ್ಲಿ ಬೆಲ್ಜಿಯಂ ಸಮಬಲ ಸಾಧಿಸಿತು. 49ನೇ ನಿಮಿಷದಲ್ಲಿ ರಮಣ್‌'ದೀಪ್‌ ಗೋಲು ಬಾರಿಸಿ ಮುನ್ನಡೆಯನ್ನು 3-2ಕ್ಕೇರಿಸಿದರು.

ಭಾರತ ಹಾಕಿ ತಂಡ ಈ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋತಿತ್ತು. ಬಳಿಕ, 2ನೇ ಪಂದ್ಯದಲ್ಲಿ ಜರ್ಮನಿ ವಿರುದ್ಧ 2-2ರಲ್ಲಿ ಡ್ರಾ ಸಾಧಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಗೆದ್ದ ಉತ್ಸಾಹದಲ್ಲಿರುವ ಭಾರತ ತಂಡವು ತನ್ನ 4ನೇ ಪಂದ್ಯದಲ್ಲಿ ಜರ್ಮನಿಯೊಂದಿಗೆ ಮತ್ತೊಮ್ಮೆ ಮುಖಾಮುಖಿಯಾಗಲಿದೆ.

ಜರ್ಮನಿ ಕೂಡ ತನ್ನ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಮುಗ್ಗರಿಸಿ, ಬಳಿಕ ಭಾರತದ ಎದುರು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

epaper.kannadaprabha.in
(ಸಂಗ್ರಹ ಚಿತ್ರ)

click me!