ವಿಶ್ವಕಪ್ ಕಬಡ್ಡಿ: ಪ್ರಶಸ್ತಿಗಾಗಿ ಭಾರತ, ಇರಾನ್ ಸೆಣಸು

By Web DeskFirst Published Oct 22, 2016, 7:48 AM IST
Highlights

ಇಲ್ಲಿನ ಟ್ರಾನ್ಸ್‌ ಸ್ಟಾಡಿಯಾ ಅರೇನಾದಲ್ಲಿ ಶುಕ್ರವಾರ ನಡೆದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ರೈಡಿಂಗ್‌ ಮತ್ತು ಟ್ಯಾಕಲ್‌ ಮೂಲಕ ಅದ್ಭುತ ಆಟ ಪ್ರದರ್ಶಿಸಿದ ಆತಿಥೇಯ ಭಾರತ ತಂಡ 73​​-20 ಅಂಕಗಳಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿತು. ಈ ಪಂದ್ಯಕ್ಕೂ ಮುನ್ನ ನಡೆದಿದ್ದ ಮೊದಲ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಇರಾನ್‌ ತಂಡ, ದಕ್ಷಿಣ ಕೊರಿ​ಯೊ ವಿರುದ್ಧ ಜಯ ಗಳಿಸಿ ಫೈನಲ್‌ಗೆ ಕಾಲಿ​ಟ್ಟಿದ್ದು, ಇಂದು ನಡೆ​ಯ​ಲಿ​ರುವ ಫೈನಲ್‌ ಪಂದ್ಯ​ದಲ್ಲಿ ಭಾರ​ತದ ವಿರುದ್ಧ ಸೆಣ​ಸ​ಲಿದೆ. 

ಅಹ್ಮದಾಬಾದ್(ಅ.22): ಏಕಪಕ್ಷೀಯವಾಗಿ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಪ್ರಭಾವಿ ಆಟದೊಂದಿಗೆ ಥಾಯ್ಲೆಂಡ್‌ ತಂಡದ ಎದುರು ಭರ್ಜರಿ ಗೆಲುವು ಸಾಧಿಸಿ ಸತತ 3ನೇ ಬಾರಿ ಫೈನಲ್‌ ಪ್ರವೇಶಿಸಿತು. 
ಇಲ್ಲಿನ ಟ್ರಾನ್ಸ್‌ ಸ್ಟಾಡಿಯಾ ಅರೇನಾದಲ್ಲಿ ಶುಕ್ರವಾರ ನಡೆದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ರೈಡಿಂಗ್‌ ಮತ್ತು ಟ್ಯಾಕಲ್‌ ಮೂಲಕ ಅದ್ಭುತ ಆಟ ಪ್ರದರ್ಶಿಸಿದ ಆತಿಥೇಯ ಭಾರತ ತಂಡ 73​​-20 ಅಂಕಗಳಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿತು. ಈ ಪಂದ್ಯಕ್ಕೂ ಮುನ್ನ ನಡೆದಿದ್ದ ಮೊದಲ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಇರಾನ್‌ ತಂಡ, ದಕ್ಷಿಣ ಕೊರಿ​ಯೊ ವಿರುದ್ಧ ಜಯ ಗಳಿಸಿ ಫೈನಲ್‌ಗೆ ಕಾಲಿ​ಟ್ಟಿದ್ದು, ಇಂದು ನಡೆ​ಯ​ಲಿ​ರುವ ಫೈನಲ್‌ ಪಂದ್ಯ​ದಲ್ಲಿ ಭಾರ​ತದ ವಿರುದ್ಧ ಸೆಣ​ಸ​ಲಿದೆ. 
2ನೇ ಸೆಮಿ​ಫೈ​ನಲ್‌ ಪಂದ್ಯದ ಆರಂಭ​ದಿಂದಲೂ ಅಂಕ ಗಳಿಕೆಗೆ ಹೆಚ್ಚಿನ ಒತ್ತು ನೀಡಿದರು. ರೈಡಿಂಗ್‌ ಮತ್ತು ಟ್ಯಾಕಲ್‌ನಲ್ಲಿ ಪ್ರಭುತ್ವ ಸಾಧಿಸಿದ ಭಾರತ ತಂಡ, ಥಾಯ್ಲೆಂಡ್‌ ತಂಡವನ್ನು 8ನೇ ನಿಮಿಷದಲ್ಲಿ ಆಲೌಟ್‌ಗೆ ಗುರಿಪಡಿಸಿ 11-2ರಿಂದ ಮುನ್ನಡೆ ಪಡೆಯಿತು. ನಂತರ ಇದೇ ಆಟವನ್ನು ಮುಂದುವರೆಸಿದ ಭಾರತ 13ನೇ ನಿಮಿಷದಲ್ಲಿ ಥಾಯ್ಲೆಂಡ್‌ ತಂಡವನ್ನು ಮತ್ತೊಮ್ಮೆ ಆಲೌಟ್‌ ಮಾಡಿ 23-3ಅಂಕಗಳಿಂದ ಮುನ್ನಡೆ ಸಾಧಿಸಿತು. ನಂತರದ ಆಟದಲ್ಲಿ ಪ್ರದೀಪ್‌ ನರ್ವಾಲ್‌ ಸೂಪರ್‌ ರೈಡ್‌ ನಡೆಸಿ ತಂಡಕ್ಕೆ ಹೆಚ್ಚಿನ ಅಂಕ ತಂದುಕೊಟ್ಟರು. 18ನೇ ನಿಮಿಷದಲ್ಲಿ ಮತ್ತೊಂದು ಬಾರಿ ಥಾಯ್ಲೆಂಡ್‌ ಆಟಗಾರರನ್ನೆಲ್ಲಾ ಔಟ್‌ ಮಾಡಿ ಲೋನಾ ಅಂಕದೊಂದಿಗೆ 33-6ರಿಂದ ಭಾರಿ ಅಂತರ ಪಡೆಯಿತು. 
ಮೊದಲಾರ್ಧದ ಅಂತ್ಯಕ್ಕೆ ಭಾರತ 36-8ರಿಂದ ಮುನ್ನಡೆ ಕಾಯ್ದುಕೊಂಡಿತ್ತು. ಮೊದಲ ಅವಧಿಯಲ್ಲಿ ಭಾರತ, ಎದುರಾಳಿ ಥಾಯ್ಲೆಂಡ್‌ ತಂಡವನ್ನು ಮೂರು ಬಾರಿ ಆಲೌಟ್‌ಗೆ ಗುರಿಪಡಿ ಸಿತ್ತು.ದ್ವಿತೀಯಾರ್ಧದ ಆಟದಲ್ಲಿ ಇದೇ ಪ್ರದರ್ಶನವನ್ನು ತೋರಿದ ಭಾರತದ ಆಟಗಾರರು ಥಾಯ್ಲೆಂಡ್‌ನ್ನು ಮತ್ತೊಮ್ಮೆ 3 ಬಾರಿ ಆಲೌಟ್‌ಗೆ ಗುರಿಪಡಿಸಿ ಲೋನಾ ಅಂಕದೊಂದಿಗೆ ಭಾರೀ ಅಂತರವನ್ನು ಕಾಯ್ದುಕೊಂಡರು. 
ಮಿಂಚಿದ ಪ್ರದೀಪ್‌-ಅಜಯ್‌: ಸ್ಟಾರ್‌ ಆಟಗಾರರಾದ ಪ್ರದೀಪ್‌ ನರ್ವಾಲ್‌ (14 ಅಂಕ)ಮತ್ತು ಅಜಯ್‌ ಠಾಕೂರ್‌ (10ಕ್ಕೂ ಹೆಚ್ಚು) ರೈಡಿಂಗ್‌ನಲ್ಲಿ ಜುಗಲ್‌ಬಂದಿ ಆಟ ತೋರಿದರು. ಇದರ ಪರಿಣಾಮವಾಗಿ ಥಾಯ್ಲೆಂಡ್‌ ಮೊದಲಾರ್ಧದ ಆಟದಲ್ಲಿ 3 ಬಾರಿ ಆಲೌಟ್‌ಗೆ ಗುರಿಯಾಗಿ ಹೀನಾಯ ಪ್ರದರ್ಶನ ತೋರಿತು. ಥಾಯ್ಲೆಂಡ್‌ ಆಟಗಾರರ ವೀಕ್ನೆಸ್‌ನ್ನು ಬಳಸಿಕೊಂಡ ಭಾರತದ ಆಟಗಾರರು ಪ್ರತಿ ನಿಮಿಷದಲ್ಲೂ ರೈಡಿಂಗ್‌ ಮತ್ತು ಟ್ಯಾಕಲ್‌ನಲ್ಲಿ ಅಂಕಗಳಿಸಿದರು. ಅದರಲ್ಲೂ ಪ್ರದೀಪ್‌ ನರ್ವಾಲ್‌ ಮತ್ತು ಅಜಯ್‌ ಠಾಕೂರ್‌ ಪ್ರತಿ ರೈಡಿಂಗ್‌ನಲ್ಲೂ ಅಂಕಗಳಿಸಿ ತಂಡಕ್ಕೆ ಉತ್ತಮ ಮುನ್ನಡೆ ತಂದುಕೊಟ್ಟರು. ಆಗೊಮ್ಮೆ-ಈಗೊಮ್ಮೆ ರೈಡಿಂಗ್‌ಗೆ ಇಳಿದ ಸಂದೀಪ್‌ ನರ್ವಾಲ್‌, ನಾಯಕ ಅನೂಪ್‌ ಕುಮಾರ್‌ ಅವರ ಯಶಸ್ವಿ ರೈಡಿಂಗ್‌ ಮತ್ತು ಮಂಜೀತ್‌ ಚಿಲ್ಲಾರ್‌, ಸುರೇಂದ್ರ ನಾಡಾ ಅವರ ಟ್ಯಾಕಲ್‌ಗೆ ಅಂಕಗಳಿಕೆಯಲ್ಲಿ ತಂಡಕ್ಕೆ ಮುನ್ನಡೆ ನೀಡಿದರು. ದ್ವಿತೀಯಾರ್ಧದ ಆಟದಲ್ಲಿ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಿ ನಿತಿನ್‌ ತೋಮರ್‌, ಧರ್ಮರಾಜ್‌ ಚೇರ್ಲಾಥನ್‌, ಕಿರಣ್‌ ಪಾರ್ಮರ್‌, ರಾಹುಲ್‌ ಚೌಧರಿ, ಮೋಹಿತ್‌ ಚ್ಲಿಲಾರ್‌ ಅವರನ್ನು ಆಡಿಸಲಾಗಿತ್ತು. ಈ ಆಟಗಾರರ ಅದ್ಭುತ ಆಟದೊಂದಿಗೆ ತಂಡಕ್ಕೆ ನೆರವಾದರು. 
ಸಚಿನ್‌ ಅಭಿಮಾನಿ ಪ್ರತ್ಯ​ಕ್ಷ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸಚಿನ್‌ ತೆಂಡುಲ್ಕರ್‌ ಅವರ ಅಭಿಮಾನಿ ಸುಧೀರ್‌ ಚೌಧರಿ, ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡರು. ಎಂದಿನಂತೆ ಭಾರತದ ತ್ರಿವರ್ಣ ಧ್ವಜದ ಬಣ್ಣವನ್ನು ಬಳಿದುಕೊಂಡಿದ್ದ ಸುಧೀರ್‌ ತೆಂಡುಲ್ಕರ್‌ ಜೆರ್ಸಿ ಸಂಖ್ಯೆ 10ನ್ನು ನಮೂದಿಸಿಕೊಂಡು, ಬಾವುಟವನ್ನು ಹಿಡಿದು, ಶಂಕು ಊದುತ್ತ ಅಭಿಮಾನಿಗಳನ್ನು ಹುರಿದುಂಬಿಸಿದರು.
ಗಾಯಗೊಂಡ ಥಾಯ್ಲೆಂಡ್‌ ಆಟಗಾರ: 29ನೇ ನಿಮಿಷದಲ್ಲಿ ಪ್ರದೀಪ್‌ ನರ್ವಾಲ್‌ ರೈಡಿಂಗ್‌ ಅವರ ರೈಡಿಂಗ್‌ನಲ್ಲಿ ಥಾಯ್ಲೆಂಡ್‌ ಆಟಗಾರ ಜಂಟಾ​ಜಮ್‌ ಪೀರ​ಡಾಕ್‌ ಅವರು ಗಾಯಗೊಂಡು ಪಂದ್ಯದಿಂದ ಹೊರಗುಳಿದರು. 

click me!