ಇಂಡೋ-ಆಫ್ಘಾನ್ ಟೆಸ್ಟ್: ಎರಡೇ ದಿನಕ್ಕೆ ಆಟ ಮುಗಿಸಿದ ಆಫ್ಘಾನ್..!

 |  First Published Jun 15, 2018, 5:46 PM IST

ಟೀಂ ಇಂಡಿಯಾ ನೀಡಿದ್ದ 474 ರನ್’ಗಳ ಸವಾಲನ್ನು ಬೆನ್ನತ್ತಿದ್ದ ಆಫ್ಘಾನಿಸ್ತಾನ ಮೊದಲ ಇನಿಂಗ್ಸ್’ನಲ್ಲಿ 109 ರನ್’ಗಳಿಗೆ ಸರ್ವಪತನ ಕಂಡು ಫಾಲೋ ಆನ್’ಗೆ ಸಿಲುಕಿತ್ತು. 365 ರನ್’ಗಳ ಭಾರೀ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಆಫ್ಘಾನ್ ಮತ್ತೊಮ್ಮೆ ಪೆವಿಲಿಯನ್ ಪರೇಡ್ ನಡೆಸಿತು.


ಬೆಂಗಳೂರು[ಜೂ.15]: ಟೀಂ ಇಂಡಿಯಾ ಬೌಲರ್’ಗಳ ಮಾರಕ ದಾಳಿಗೆ ತತ್ತರಿಸಿ ಆಫ್ಘಾನಿಸ್ತಾನ ಎರಡನೇ ದಿನವೇ ಸೋಲಿಗೆ ಶರಣಾಗಿದೆ. ಎರಡನೇ ಇನಿಂಗ್ಸ್’ನಲ್ಲಿ ಆಫ್ಘಾನ್ ತಂಡವನ್ನು 103 ರನ್’ಗಳಿಗೆ ಕಟ್ಟಿಹಾಕಿದ ರಹಾನೆ ಪಡೆ ಇನಿಂಗ್ಸ್ ಹಾಗೂ 262 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಆಫ್ಘಾನಿಸ್ತಾನ ಬಲಿಷ್ಠ ಭಾರತದೆದುರು ಹೀನಾಯ ಸೋಲು ಕಂಡಿದೆ. ಈ ದಾಖಲೆಯ ಜಯದೊಂದಿಗೆ ಏಕೈಕ ಟೆಸ್ಟ್ ಪಂದ್ಯದ ಸರಣಿಯನ್ನು ಭಾರತ ಕೇವಲ ಎರಡೇ ದಿನದಲ್ಲಿ ಕೈವಶ ಮಾಡಿಕೊಂಡಿದೆ.
ಟೀಂ ಇಂಡಿಯಾ ನೀಡಿದ್ದ 474 ರನ್’ಗಳ ಸವಾಲನ್ನು ಬೆನ್ನತ್ತಿದ್ದ ಆಫ್ಘಾನಿಸ್ತಾನ ಮೊದಲ ಇನಿಂಗ್ಸ್’ನಲ್ಲಿ 109 ರನ್’ಗಳಿಗೆ ಸರ್ವಪತನ ಕಂಡು ಫಾಲೋ ಆನ್’ಗೆ ಸಿಲುಕಿತ್ತು. 365 ರನ್’ಗಳ ಭಾರೀ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಆಫ್ಘಾನ್ ಮತ್ತೊಮ್ಮೆ ಪೆವಿಲಿಯನ್ ಪರೇಡ್ ನಡೆಸಿತು. ಮೊದಲ ಇನಿಂಗ್ಸ್’ನಲ್ಲಿ ಅಶ್ವಿನ್ 4 ವಿಕೆಟ್ ಕಬಳಿಸಿದರೆ, ಎರಡನೇ ಇನಿಂಗ್ಸ್’ನಲ್ಲಿ ರವೀಂದ್ರ ಜಡೇಜಾ 4 ವಿಕೆಟ್ ಕಬಳಿಸಿ ಆಫ್ಘಾನ್’ಗೆ ಕಂಠಕವಾಗಿ ಪರಿಣಮಿಸಿದರು.
ಒಂದೇ ದಿನ ಒಟ್ಟು 24 ವಿಕೆಟ್’ಗಳು ಬಿದ್ದಿರುವುದು ಮತ್ತೊಂದು ದಾಖಲೆಯೆನಿಸಿದೆ. ಭಾರತದ 4 ಹಾಗೂ ಆಫ್ಘಾನಿಸ್ತಾನದ 20 ವಿಕೆಟ್’ಗಳು ಒಂದೇ ದಿನ ಉರುಳಿದ್ದು ಏಷ್ಯಾ ನೆಲದಲ್ಲಿ ಇದೇ ಮೊದಲು.
ಸಂಕ್ಷಿಪ್ತ ಸ್ಕೋರ್:
ಭಾರತ: 474/10
ಧವನ್: 107
ಯಾಮಿನ್: 51/3
ಆಫ್ಘಾನಿಸ್ತಾನ: 109 
ಮೊಹಮ್ಮದ್ ನಬೀ: 24
ಅಶ್ವಿನ್: 27/4
ಆಫ್ಘಾನ್ ಎರಡನೇ ಇನಿಂಗ್ಸ್: 103
ಶಾಹಿದಿ: 33*
ಜಡೇಜಾ 17/4
ಫಲಿತಾಂಶ: ಭಾರತಕ್ಕೆ ಇನಿಂಗ್ಸ್ ಹಾಗೂ 262 ರನ್’ಗಳ ಜಯಭೇರಿ 

click me!