ಗರಿಷ್ಠ ವಿಕೆಟ್ ಪತನದಲ್ಲಿ ದಾಖಲೆ ಬರೆದ ಭಾರತ-ಅಫ್ಘಾನ್ ಟೆಸ್ಟ್

First Published Jun 15, 2018, 5:29 PM IST
Highlights

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿನೂತನ ದಾಖಲೆ ರಚನೆಯಾಗಿದೆ. ಭಾತದ ಬೌಲಿಂಗ್ ದಾಳಿಗೆ ನಲುಗಿದ ಅಫ್ಘಾನಿಸ್ತಾನ ಪೆವಿಲಿಯನ್ ಪರೇಡ್ ನಡೆಸುತ್ತಿದೆ. ಭಾರತದ  ಅದ್ಬುತ ದಾಳಿಗೆ ನಿರ್ಮಾಣವಾದ ದಾಖಲೆ ಏನು?
 

ಬೆಂಗಳೂರು(ಜೂ.15): ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ವಿಶೇಷ ದಾಖಲೆಯೊಂದು ನಿರ್ಮಾಣವಾಗಿದೆ. ಏಷ್ಯಾದಲ್ಲಿ ಒಂದೇ ದಿನ ಗರಿಷ್ಠ ವಿಕೆಟ್ ಪತನದ ಪಟ್ಟಿಯಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ಟೆಸ್ಟ್ ಮೊದಲ ಸ್ಥಾನ ಪಡೆದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ-ಆಫ್ಘಾನಿಸ್ತಾನ ಟೆಸ್ಟ್ ಪಂದ್ಯದ ದ್ವಿತೀಯ ದಿನ ಬರೋಬ್ಬರಿ 24 ವಿಕೆಟ್ ಪತನಗೊಂಡಿದೆ. ದ್ವಿತೀಯ ದಿನದ ಆರಂಭದಲ್ಲಿ ಭಾರತ ಅಂತಿಮ 4 ವಿಕೆಟ್ ಕಳೆದುಕೊಂಡಿತು. ಇನ್ನು ಆಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಆಯಿತು. ಇನ್ನು ಫಾಲೋ ಆನ್ ಪಡೆದು ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನ್ ಮತ್ತೆ ಆಲೌಟ್ ಆಗೋ ಮೂಲಕ ಒಂದೇ ದಿನ ಓಟ್ಟು 24 ವಿಕೆಟ್ ಕಳೆದುಕೊಂಡಿದೆ.

ಇಂಡೋ-ಅಫ್ಘಾನ್ ಏಷ್ಯಾದಲ್ಲಿ ಗರಿಷ್ಠ ವಿಕೆಟ್ ಪತನವಾದ ಪಂದ್ಯವಾಗಿದೆ. ಇದಕ್ಕೂ ಮೊದಲು 2001ರಲ್ಲಿ ಕೊಲೊಂಬೊದಲ್ಲಿ ನಡೆದ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ 3ನೇ ದಿನ 22 ವಿಕೆಟ್ ಪತನಗೊಂಡಿತ್ತು. 

ಒಂದೇ ದಿನದಾಟದಲ್ಲಿ ಗರಿಷ್ಠ ವಿಕೆಟ್ ಪತನ(ಏಷ್ಯಾ)

ಪಂದ್ಯ ವಿಕೆಟ್ ದಿನದಾಟ ವರ್ಷ
ಭಾರತ-ಅಫ್ಘಾನಿಸ್ತಾನ 24 2 2018
ಶ್ರೀಲಂಕ-ಇಂಗ್ಲೆಂಡ್ 22 3 2001
ಶ್ರೀಲಂಕಾ-ಆಸ್ಟ್ರೇಲಿಯಾ 21 2 2016

ಏಷ್ಯಾ ಮಾತ್ರವಲ್ಲ,  ಭಾರತದದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲೂ ಗರಿಷ್ಠ ವಿಕೆಟ್ ಪತನವಾದ ಪಂದ್ಯವಾಗಿ ಮಾರ್ಪಟ್ಟಿದೆ.

ಒಂದೇ ದಿನದಾಟದಲ್ಲಿ ಗರಿಷ್ಠ ವಿಕೆಟ್ ಪತನ(ಭಾರತ)

ಪಂದ್ಯ ವಿಕೆಟ್ ದಿನದಾಟ ವರ್ಷ
ಭಾರತ-ಅಫ್ಘಾನ್ 24 2 2018
ಭಾರತ-ಆಸ್ಟ್ರೇಲಿಯಾ 20 3 2004
ಭಾರತ--ಸೌತ್ಆಫ್ರಿಕಾ 20 2 2015

 

click me!