ಫಿಫಾ ವಿಶ್ವಕಪ್ 2018: ಸ್ಪೇನ್-ಪೋರ್ಚುಗಲ್ ಹೋರಾಟಕ್ಕೆ ಸಜ್ಜಾಗಿದೆ ಫಿಫಾ ವೇದಿಕೆ

First Published Jun 15, 2018, 4:41 PM IST
Highlights

ಫಿಫಾ ವಿಶ್ವಕಪ್ ಟೂರ್ನಿಯ ದ್ವಿತೀಯ ದಿನದ ಹೋರಾಟ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಇಂದಿನ 3ನೇ ಪಂದ್ಯದಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ತಂಡ ಮುಖಾಮುಖಿಯಾಗುತ್ತಿದೆ. ಹಾಗಾದರೆ ಈ ಪಂದ್ಯದಲ್ಲಿ ಗೆಲುವು ಯಾರಿಗೆ. ಈ ಸ್ಟೋರಿ ಓದಿ.

ರಷ್ಯಾ(ಜೂ.15): ಫಿಫಾ ವಿಶ್ವಕಪ್ ಟೂರ್ನಿಯ ಎರಡನೇ ದಿನ ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿದೆ. ಇವತ್ತಿನ 3 ಪಂದ್ಯಗಳ ಪೈಕಿ ಫಿಷ್ಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ಪೇನ್ ಹಾಗೂ ಪೋರ್ಚುಗಲ್‌ ಪಂದ್ಯ ಬಾರಿ ಕುತೂಹಲ ಕೆರಳಿಸಿದೆ. ಕ್ರಿಸ್ಟಿಯಾನೋ ರೋನಾಲ್ಡೋ ನಾಯಕತ್ವದ ಪೋರ್ಚುಗಲ್ , 2010ರ ಸೋಲಿಗೆ ಸೇಡು ತೀರಿಸಿಕೊಳ್ಳೋ ವಿಶ್ವಾಸದಲ್ಲಿದೆ.

2010ರ ಫಿಫಾ ವಿಶ್ವಕಪ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಸ್ಪೇನ್ ಗೆಲುವು ಸಾಧಿಸಿತ್ತು. ಫುಟ್ಬಾಲ್ ಹೋರಾಟದಲ್ಲಿ ಪೋರ್ಚುಗಲ್ ಎದುರು ಸ್ಪೇನ್ ಅತ್ಯುತ್ತಮ ಹೋರಾಟವನ್ನೇ ನೀಡಿದೆ. ಆದರೆ ಕೋಚ್ ಜುಲೆನ್ ಲೊಪೆಟಿಗೆ ವಜಾದಿಂದ ಫರ್ನಾಂಡೋ ಹೇರೋ ಮಾರ್ಗದರ್ಶನಲ್ಲಿ ಸ್ಪೇನ್ ಇಂದು ಕಣಕ್ಕಿಳಿಯುತ್ತಿದೆ. ಇದು ತಂಡಕ್ಕೆ ಹಿನ್ನಡೆಯಾಗೋ ಸಾಧ್ಯತೆ ಇದೆ.

ರಷ್ಯಾದಲ್ಲಿ ಆರಂಭವಾಗುತ್ತಿರುವ ಫಿಫಾ ವಿಶ್ವಕಪ್ 2018 ಸಂಪೂರ್ಣ ವೇಳಾಪಟ್ಟಿ ನಿಮ್ಮ ಮುಂದೆ

ಪೋರ್ಚುಗಲ್ ಸ್ಟಾರ್ ರೋನಾಲ್ಡೋಗಿದು ಕೊನೆಯ ವಿಶ್ವಕಪ್ ಎಂದೇ ಬಿಂಬಿತವಾಗಿದೆ. ನಾಲ್ಕನೇ ವಿಶ್ವಕಪ್ ಟೂರ್ನಿ ಆಡುತ್ತಿರುವ ರೋನಾಲ್ಡೋ ಈ ಬಾರಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡಲು ನಿರ್ಧರಿಸಿದ್ದಾರೆ. ಹೀಗಾಗಿ ಸ್ಪೇನ್ ಹಾಗೂ ಪೋರ್ಚುಗಲ್ ಹೋರಾಟ ರೋಚಕ  ಘಟ್ಟ ತಲಪುವುದರಲ್ಲಿ ಅನುಮಾನವಿಲ್ಲ.

 

click me!