ಮೇ 12ಕ್ಕೆ ಐಪಿಎಲ್‌ ಫೈನಲ್‌?

Published : Mar 21, 2019, 11:53 AM ISTUpdated : Mar 22, 2019, 05:45 PM IST
ಮೇ 12ಕ್ಕೆ ಐಪಿಎಲ್‌ ಫೈನಲ್‌?

ಸಾರಾಂಶ

ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಗುಂಪು ಹಂತದ ವೇಳಾಪಟ್ಟಿ ಪ್ರಕಟಗೊಂಡಿದ್ದು, ಪ್ಲೇ ಆಫ್ ಹಾಗೂ ಫೈನಲ್ ಪಂದ್ಯದ ಅಧಿಕೃತ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಚೆನ್ನೈನಲ್ಲಿ ಫೈನಲ್ ಪಂದ್ಯ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಮುಂಬೈ[ಮಾ.21]: ಐಪಿಎಲ್‌ 12ನೇ ಆವೃತ್ತಿಯ ಫೈನಲ್‌ ಪಂದ್ಯ ಮೇ 12ರಂದು ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಿಸಿಸಿಐ ಇನ್ನೂ ಪ್ಲೇ-ಆಫ್‌ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಬಿಸಿಸಿಐ ಮೂಲಗಳು ಪ್ಲೇ-ಆಫ್‌ ದಿನಾಂಕಗಳನ್ನು ಸ್ಪಷ್ಟಪಡಿಸಿವೆ. ಸಾಮಾನ್ಯವಾಗಿ ಹಾಲಿ ಚಾಂಪಿಯನ್‌ ತಂಡದ ತವರು ಮೈದಾನದಲ್ಲಿ ಫೈನಲ್‌ ಪಂದ್ಯವನ್ನು ಆಯೋಜಿಸಲಾಗುತ್ತದೆ.

IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!

ಇದೇ ವೇಳೆ ಮೇ 7ರಿಂದ ಪ್ಲೇ-ಆಫ್‌ ಆರಂಭಗೊಳ್ಳಲಿದ್ದು, ಹೈದರಾಬಾದ್‌ನಲ್ಲಿ ಮೇ 7ರಂದು ಮೊದಲ ಕ್ವಾಲಿಫೈಯರ್‌, ಮೇ 8ರಂದು ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಮೇ 10ರಂದು ಚೆನ್ನೈನಲ್ಲಿ 2ನೇ ಕ್ವಾಲಿಫೈಯರ್‌ ಪಂದ್ಯವನ್ನು ನಡೆಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಮಂಗಳವಾರವಷ್ಟೇ ಬಿಸಿಸಿಐ, ಗುಂಪು ಹಂತದ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿತ್ತು.

ಐಪಿಎಲ್ 2019: ಸಂಪೂರ್ಣ ವೇಳಾ ಪಟ್ಟಿ ಬಿಡುಗಡೆ!

ವಿಶಾಖಪಟ್ಟಣಂ ಮೀಸಲು ತಾಣ

ಎಲ್ಲಾ 8 ತಂಡಗಳು ತನ್ನ ತವರು ಪಂದ್ಯಗಳನ್ನು ನಿಗದಿತ ತವರು ಮೈದಾನಗಳಲ್ಲೇ ಆಡಲಿವೆ. ಆದರೆ ಒಂದೊಮ್ಮೆ ಕೊನೆ ಕ್ಷಣದಲ್ಲಿ ಯಾವುದೇ ಪಂದ್ಯದ ವೇಳಾಪಟ್ಟಿ ಬದಲಿಸಬೇಕಾದ ಪರಿಸ್ಥಿತಿ ಎದುರಾದರೆ ಎನ್ನುವ ಕಾರಣಕ್ಕೆ ವಿಶಾಖಪಟ್ಟಣಂ ಕ್ರೀಡಾಂಗಣವನ್ನು ಮೀಸಲು ಕ್ರೀಡಾಂಗಣವಾಗಿ ಸಿದ್ಧವಿರಿಸಲು ಬಿಸಿಸಿಐ ಸೂಚಿಸಿದೆ. ಯಾವುದೇ ಪಂದ್ಯ ಸ್ಥಳಾಂತರಗೊಂಡರೂ ಅದು ವಿಶಾಖಪಟ್ಟಣಂನಲ್ಲಿ ನಡೆಯಲಿದೆ ಎನ್ನಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

John Cena ಕೊನೆಯ ಮ್ಯಾಚ್ ಯಾವಾಗ? ಎದುರಾಳಿ ಯಾರು? ಲೈವ್ ಸ್ಟ್ರೀಮಿಂಗ್ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌