
ಟ್ರಿನಿಡಾಡ್(ಆ.4): ವೆಸ್ಟ್ ಇಂಡೀಸ್ ವಿರುದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಶುಭಾರಂಭ ಮಾಡಿದ್ದರೆ, ಅತ್ತ ಭಾರತ ಎ ತಂಡ ಸರಣಿ ಗೆದ್ದುಕೊಂಡಿದೆ. ವೆಸ್ಟ್‌ಇಂಡೀಸ್ ‘ಎ’ ವಿರುದ್ಧ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ‘ಎ’ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಅಜೇಯ ಮುನ್ನಡೆ ಪಡೆದು, ಸರಣಿ ವಶಪಡಿಸಿಕೊಂಡಿದೆ.
ಇದನ್ನೂ ಓದಿ: INDvWI:ಭಾರತದ ಬೌಲರ್ಸ್ ಕಮಾಲ್; 95 ರನ್‌ಗೆ ವಿಂಡೀಸ್ ಸುಸ್ತು!
ಮೊದಲ ಇನ್ನಿಂಗ್ಸಲ್ಲಿ 318 ರನ್ ಗಳಿಸಿದ್ದ ವಿಂಡೀಸ್, ಭಾರತವನ್ನು 190 ರನ್‌ಗೆ ಕಟ್ಟಿಹಾಕಿತ್ತು. 2ನೇ ಇನ್ನಿಂಗ್ಸಲ್ಲಿ 149 ರನ್‌ಗೆ ಆಲೌಟ್ ಆದ ವಿಂಡೀಸ್ ಭಾರತ ‘ಎ’ಗೆ 281 ರನ್ ಗುರಿ ನೀಡಿತ್ತು. ಮಯಾಂಕ್(81), ಪ್ರಿಯಾಂಕ್ (68), ಅಭಿಮನ್ಯು(62) ಅರ್ಧಶತಕಗಳ ನೆರವಿನಿಂದ ಭಾರತ ಸುಲಭ ಗೆಲುವು ಪಡೆಯಿತು.
ಸ್ಕೋರ್: ವಿಂಡೀಸ್ ‘ಎ’ 318, 149, ಭಾರತ ‘ಎ’ 190, 281/3
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.