ಫಾರ್ಮುಲಾ ರೇಸ್‌ನಲ್ಲಿ ಎಲ್ಲವೂ ಸೆಕೆಂಡುಗಳ ಲೆಕ್ಕಾಚಾರ. ರೇಸ್ ಮಾತ್ರವಲ್ಲ, ಸಣ್ಣ ವಿರಾಮದಲ್ಲಿ ಕಾರಿನ ಚಕ್ರ ಬದಲಿಸಿವುದು ಕೂಡ ಸೆಕೆಂಡ್‌ಗಳಲ್ಲಿ ಇದೀಗ ಕಾರಿನ ಚಕ್ರ ಬದಲಿಸಿ ದಾಖಲೆ ನಿರ್ಮಾಣವಾಗಿದೆ. ಇಲ್ಲಿದೆ ಹೆಚ್ಚಿನ ವಿವರ.
ಪ್ಯಾರಿಸ್(ಆ.04): ಫಾರ್ಮುಲಾ 1 ಕಾರ್ ರೇಸ್‌ನಲ್ಲಿ ಪ್ರತಿ ಸೆಕೆಂಡ್‌ಗೂ ಮಹತ್ವವಿದೆ. ಈ ವಿಶ್ಲೇಷಣೆಯನ್ನು ರೆಡ್ ಬುಲ್ ರೇಸಿಂಗ್ ತಂಡ ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಕಳೆದ ತಿಂಗಳು ರೆಡ್ ಬುಲ್ ತಂಡ ತನ್ನ ಚಾಲಕ ಪೀಯರ್ ಗ್ಯಾಸ್ಲೆ, ಪಿಟ್ ಸ್ಟಾಪ್ (ರೇಸ್ ನಡುವೆ ತೆಗೆದುಕೊಳ್ಳುವ ಸಣ್ಣ ವಿರಾಮ)ಗೆ ಆಗಮಿಸಿದ್ದಾಗ ಕೇವಲ 1.91 ಸೆಕೆಂಡ್‌ಗಳಲ್ಲಿ ಕಾರಿನ ನಾಲ್ಕೂ ಚಕ್ರಗಳನ್ನು ಬದಲಿಸಿ ದಾಖಲೆ ಬರೆದಿತ್ತು.
FASTEST F1 PIT STOP EVER! ⏱😮 take the Fastest Pit Stop Award in Germany 👀
With a new F1 world record time of 1.88s 🥳 pic.twitter.com/XvJBADylUg
ಕಳೆದ ವಾರ ಜರ್ಮನ್ ಗ್ರ್ಯಾನ್ ಪ್ರಿಯಲ್ಲಿ ರೆಡ್ ಬುಲ್ ತನ್ನ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ. ಮ್ಯಾಕ್ಸ್ ವೆರ್‌ಸ್ಟಾಪ್ಪೆನ್ ಪಿಟ್ ಸ್ಟಾಪ್‌ಗೆ ಬಂದ ವೇಳೆ ಕೇವಲ 1.88 ಸೆಕೆಂಡ್‌ಗಳಲ್ಲಿ ನಾಲ್ಕೂ ಚಕ್ರ ಬದಲಿಸಿ ಅತ್ಯಂತ ಕಡಿಮೆ ಸಮಯದಲ್ಲಿ ಮುಕ್ತಾಯಗೊಂಡ ಪಿಟ್‌ಸ್ಟಾಪ್ ಎನ್ನುವ ವಿಶ್ವ ದಾಖಲೆ ನಿರ್ಮಿಸಿದೆ.