ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಯುವ ಶಟ್ಲರ್‌ಗಳು ಮಿಂಚಿನ ಪ್ರದರ್ಶನದ ಮೂಲಕ ಫೈನಲ್ ತಲುಪಿದ್ದಾರೆ. ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಇದೀಗ ಪ್ರಶಸ್ತಿ ಗೆಲುವಿನ ವಿಶ್ವಾಸದಲ್ಲಿದೆ.
ಬ್ಯಾಂಕಾಕ್(ಆ.04): ಭಾರತದ ಯುವ ಶಟ್ಲರ್‌ಗಳಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಯಶಸ್ಸಿನ ಓಟ ಮುಂದುವರಿಸಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಈ ಜೋಡಿ ಫೈನಲ್ ಪ್ರವೇಶಿಸಿದೆ.
ಇದನ್ನೂ ಓದಿ:ಥಾಯ್ಲೆಂಡ್ ಓಪನ್ : ಸೈನಾ, ಶ್ರೀಕಾಂತ್‌ಗೆ ಆಘಾತ
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿ, ಕೊರಿಯಾದ ಕೊ ಸಂಗ್ ಯೂನ್ ಹಾಗೂ ಶಿನ್ ಬೆಕ್ ಕೊಲ್ ಜೋಡಿ ವಿರುದ್ಧ 22-20, 22-24, 21-9 ಗೇಮ್‌ಗಳಲ್ಲಿ ಜಯಗಳಿಸಿತು. 63 ನಿಮಿಷಗಳ ಕಾಲ ನಡೆದ ರೋಚಕ ಪಂದ್ಯದಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಮೊದಲ ಗೇಮ್‌ನಲ್ಲಿ ಜಯಿಸಿದ ಬಳಿಕ 2ನೇ ಗೇಮ್‌ನಲ್ಲಿ 2 ಮ್ಯಾಚ್ ಪಾಯಿಂಟ್ ಅಂಕಗಳನ್ನು ಕೈಚೆಲ್ಲಿದರು. ಆದರೆ 3ನೇ ಗೇಮ್‌ನಲ್ಲಿ ನಿರಾಯಾಸವಾಗಿ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು.
2019ರಲ್ಲಿ ಈ ಜೋಡಿ ಮೊದಲ ಬಾರಿಗೆ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸಾತ್ವಿಕ್ ಹಾಗೂ ಚಿರಾಗ್, 3ನೇ ಶ್ರೇಯಾಂಕಿತ ಚೀನಾದ ಲಿ ಜುನ್ ಹುಯಿ ಮತ್ತು ಲಿ ಯು ಚೆನ್ ಅವರನ್ನು ಎದುರಿಸಲಿದ್ದಾರೆ.