ಇಲ್ಲಿದೆ ನೋಡಿ ಅಂತಿಮ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

By Web DeskFirst Published Feb 9, 2019, 5:45 PM IST
Highlights

ಇದೇ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಟಿ20 ಗೆಲುವು ಕಂಡಿರುವ ರೋಹಿತ್ ಶರ್ಮಾ ಪಡೆ ಫೆಬ್ರವರಿ 10ರಂದು ನಡೆಯುವ ಪಂದ್ಯದಲ್ಲೂ ಅಂತಹದ್ದೇ ಪ್ರದರ್ಶನ ತೋರುವ ಉತ್ಸಾಹದಲ್ಲಿದೆ. ಇನ್ನು ಎರಡನೇ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡ ನ್ಯೂಜಿಲೆಂಡ್ ತವರಿನಲ್ಲಿ ಕಮ್’ಬ್ಯಾಕ್ ಮಾಡಲು ಹಾತೊರೆಯುತ್ತಿದೆ.

ಹ್ಯಾಮಿಲ್ಟನ್[ಫೆ.09]: ಭಾರತ-ನ್ಯೂಜಿಲೆಂಡ್ ನಡುವಿನ ಅಂತಿಮ ಹಾಗೂ ನಿರ್ಣಾಯಕ ಟಿ20 ಪಂದ್ಯಕ್ಕೆ ಹ್ಯಾಮಿಲ್ಟನ್ ಮೈದಾನ ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ತಲಾ ಒಂದೊಂದು ಪಂದ್ಯವನ್ನು ಗೆದ್ದಿರುವ ಉಭಯ ತಂಡಗಳು ಅಂತಿಮ ಪಂದ್ಯವನ್ನು ಜಯಿಸಿ ಸರಣಿ ಕೈವಶ ಮಾಡಿಕೊಳ್ಳುವ ಇರಾದೆಯಲ್ಲಿವೆ.

ಟಿ20 ಕ್ರಿಕೆಟ್’ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು

ಇದೇ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಟಿ20 ಗೆಲುವು ಕಂಡಿರುವ ರೋಹಿತ್ ಶರ್ಮಾ ಪಡೆ ಫೆಬ್ರವರಿ 10ರಂದು ನಡೆಯುವ ಪಂದ್ಯದಲ್ಲೂ ಅಂತಹದ್ದೇ ಪ್ರದರ್ಶನ ತೋರುವ ಉತ್ಸಾಹದಲ್ಲಿದೆ. ಇನ್ನು ಎರಡನೇ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡ ನ್ಯೂಜಿಲೆಂಡ್ ತವರಿನಲ್ಲಿ ಕಮ್’ಬ್ಯಾಕ್ ಮಾಡಲು ಹಾತೊರೆಯುತ್ತಿದೆ.

ಕಿವೀಸ್ ನೆಲದಲ್ಲಿ ಚೊಚ್ಚಲ ಟಿ20 ಗೆಲುವಿನ ಸಿಹಿ ಕಂಡ ಭಾರತ

ಮೊದಲ ಪಂದ್ಯದಲ್ಲಿ ಮುಖಭಂಗ ಅನುಭವಿಸಿದರೂ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕಿಳಿದಿತ್ತು. ಎರಡನೇ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ಸರಣಿಯಲ್ಲಿ ಕಮ್’ಬ್ಯಾಕ್ ಮಾಡಿತ್ತು. ಅದರೆ ಮೂರನೇ ಪಂದ್ಯದಲ್ಲಿ ಒಂದೆರಡು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.

ಅಂತಾರಾಷ್ಟ್ರೀಯ ಟಿ20 - ಸಿಕ್ಸರ್‌ನಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ

ಆರಂಭಿಕರಾಗಿ: ಟೀಂ ಇಂಡಿಯಾ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಶಿಖರ್ ಧವನ್ ಕಣಕ್ಕಿಳಿಯಲಿದ್ದಾರೆ. ಎರಡನೇ ಪಂದ್ಯದಲ್ಲಿ 79 ರನ್’ಗಳ ಜತೆಯಾಟ ನಿಭಾಯಿಸಿದ್ದ ಈ ಜೋಡಿ ಟೀಂ ಇಂಡಿಯಾಗೆ ಉತ್ತಮ ಆರಂಭ ಒದಗಿಸಿಕೊಟ್ಟಿತ್ತು.

ಮಧ್ಯಮ ಕ್ರಮಾಂಕ: ಟೀಂ ಇಂಡಿಯಾ ಮಧ್ಯಮಕ್ರಮಾಂಕದಲ್ಲಿ ಒಂದು ಬದಲಾವಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ರಿಷಭ್ ಪಂತ್ ಕಳೆದ ಪಂದ್ಯದಲ್ಲಿ 40 ರನ್ ಸಿಡಿಸಿ ಮಿಂಚಿದ್ದರು. ಮಾಜಿ ನಾಯಕ ಧೋನಿ ವಿಕೆಟ್’ಕೀಪಿಂಗ್ ಹಾಗೆಯೇ ಬ್ಯಾಟಿಂಗ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇನ್ನು ಆಲ್ರೌಂಡರ್ ವಿಜಯ್ ಶಂಕರ್ ಬದಲಿಗೆ ಶುಭ್’ಮನ್ ಗಿಲ್ ಕಣಕ್ಕಿಳಿಯುವ ಸಾಧ್ಯತೆಯಿದೆ. ದಿನೇಶ್ ಕಾರ್ತಿಕ್, ಪಾಂಡ್ಯ ಬ್ರದರ್ಸ್ ತಮ್ಮ ಸ್ಥಾನ ಉಳಿಸಿಕೊಳ್ಳುವುದು ಖಚಿತ.

ಬೌಲಿಂಗ್’ನಲ್ಲಿ ಒಂದು ಬದಲಾವಣೆ: ಬೌಲಿಂಗ್’ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಖಲೀಲ್ ಅಹಮ್ಮದ್ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಕಳೆದೆರಡು ಪಂದ್ಯಗಳಲ್ಲಿ ನಿಭಾಯಿಸಿದ್ದಾರೆ. ಹೀಗಾಗಿ ಇವರಿಬ್ಬರು ವೇಗದ ದಾಳಿ ಸಂಘಟಿಸಲಿದ್ದಾರೆ. ಆದರೆ ಎರಡನೇ ಪಂದ್ಯದಲ್ಲಿ ಚಹಲ್ 4 ಓವರ್’ಗಳಲ್ಲಿ 9.25ರ ಸರಾಸರಿಯಂತೆ 37 ರನ್ ನೀಡಿ ಒಂದೂ ವಿಕೆಟ್ ಪಡೆಯದೆ ದುಬಾರಿಯಾಗಿದ್ದ ಅವರನ್ನು ಹೊರಗಿಟ್ಟು ಕುಲ್ದೀಪ್ ಯಾದವ್’ಗೆ ಅವಕಾಶ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 

ಹೀಗಿದೆ ನೋಡಿ ಟೀಂ ಇಂಡಿಯಾ ಸಂಭಾವ್ಯ ತಂಡ:
ರೋಹಿತ್ ಶರ್ಮಾ
ಶಿಖರ್ ಧವನ್
ರಿಷಭ್ ಪಂತ್
ಶುಭ್’ಮನ್ ಗಿಲ್/ ವಿಜಯ್ ಶಂಕರ್
ಎಂ.ಎಸ್ ಧೋನಿ
ದಿನೇಶ್ ಕಾರ್ತಿಕ್
ಹಾರ್ದಿಕ್ ಪಾಂಡ್ಯ
ಕೃನಾಲ್ ಪಾಂಡ್ಯ
ಭುವನೇಶ್ವರ್ ಕುಮಾರ್
ಯುಜುವೇಂದ್ರ ಚಹಲ್/ ಕುಲ್ದೀಪ್ ಯಾದವ್
ಖಲೀಲ್ ಅಹಮ್ಮದ್

ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ

click me!