ಟಿ20 ಕ್ರಿಕೆಟ್’ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು

Published : Feb 08, 2019, 08:47 PM IST
ಟಿ20 ಕ್ರಿಕೆಟ್’ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು

ಸಾರಾಂಶ

2018ರ ಫೆಬ್ರವರಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ನ್ಯೂಜಿಲೆಂಡ್’ನ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್ ಪಾತ್ರರಾಗಿದ್ದರು. ಇದೀಗ ಸರಿಯಾಗಿ ಒಂದು ವರ್ಷದ ಬಳಿಕ ಗಪ್ಟಿಲ್ ಹಿಂದಿಕ್ಕಿ ರೋಹಿತ್ ಶರ್ಮಾ ನಂ.1 ಸ್ಥಾನಕ್ಕೇರಿದ್ದಾರೆ.

ಬೆಂಗಳೂರು[ಫೆ.08]: ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿ ರೋಹಿತ್ ಹೊಸ ದಾಖಲೆ ಬರೆದಿದ್ದಾರೆ.

ಟೆಸ್ಟ್, ಒನ್ ಡೇ ಕ್ರಿಕೆಟ್’ನಲ್ಲಿ ಸಚಿನ್ ಬಾಸ್, ಟಿ20 ರನ್ ಬೇಟೆಯಲ್ಲಿ ರೋಹಿತ್ ಕಿಂಗ್..!

2018ರ ಫೆಬ್ರವರಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ನ್ಯೂಜಿಲೆಂಡ್’ನ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್ ಪಾತ್ರರಾಗಿದ್ದರು. ಇದೀಗ ಸರಿಯಾಗಿ ಒಂದು ವರ್ಷದ ಬಳಿಕ ಗಪ್ಟಿಲ್ ಹಿಂದಿಕ್ಕಿ ರೋಹಿತ್ ಶರ್ಮಾ ನಂ.1 ಸ್ಥಾನಕ್ಕೇರಿದ್ದಾರೆ. ಇದೀಗ 84 ಇನ್ನಿಂಗ್ಸ್’ನಲ್ಲಿ ರೋಹಿತ್ ಶರ್ಮಾ 4 ಶತಕ ಹಾಗೂ 16 ಅರ್ಧಶತಕಗಳ ನೆರವಿನೊಂದಿಗೆ 2,288 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ಮಾರ್ಟಿನ್ ಗಪ್ಟಿಲ್ 74 ಇನ್ನಿಂಗ್ಸ್’ಗಳಲ್ಲಿ 2,272 ರನ್ ಬಾರಿಸಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಟಿ20 - ಸಿಕ್ಸರ್‌ನಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗುವ ಮೂಲಕ ಮೂರೂ ಮಾದರಿಯ ಕ್ರಿಕೆಟ್’ನಲ್ಲೂ ಅತಿ ರನ್ ಬಾರಿಸಿದ ಆಟಗಾರರು ಎನ್ನುವ ಕೀರ್ತಿಗೆ ಭಾರತೀಯರು ಭಾಜನರಾಗಿದ್ದಾರೆ. ಸಚಿನ್ ತೆಂಡುಲ್ಕರ್ ಏಕದಿನ ಹಾಗೂ ಟೆಸ್ಟ್’ನಲ್ಲಿ ಕ್ರಮವಾಗಿ 18426 ಹಾಗೂ 15921 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.

ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳ ಪಟ್ಟಿ ನಿಮ್ಮ ಮುಂದೆ....

ಸ್ಥಾನಬ್ಯಾಟ್ಸ್’ಮನ್ಪಂದ್ಯಇನ್ನಿಂಗ್ಸ್  ರನ್
1ರೋಹಿತ್ ಶರ್ಮಾ(Ind)92842288
2ಮಾರ್ಟಿನ್ ಗಪ್ಟಿಲ್(NZ)76742272
3ಶೊಯೆಬ್ ಮಲಿಕ್(Pak)1111042263
4ವಿರಾಟ್ ಕೊಹ್ಲಿ(Ind)65602167
5ಬ್ರೆಂಡನ್ ಮೆಕ್ಕಲಂ(NZ)71702140
6ಮೊಹಮ್ಮದ್ ಶೆಹಜಾದ್(Afg)65651936
7ಮೊಹಮ್ಮದ್ ಹಫೀಜ್(Pak)89861908
8ತಿಲಕರತ್ನೆ ದಿಲ್ಯ್ಷಾನ್(SL)80791889
9ಜೆಪಿ ಡುಮಿನಿ(SA)78721858
10ಡೇವಿಡ್ ವಾರ್ನರ್(Aus)70701792    

(*ಫೆಬ್ರವರಿ 08/2019ರ ವೇಳೆಗೆ]

ಅಂಕಿ-ಅಂಶ ಕೃಪೆ: ಕ್ರಿಕ್ ಇನ್ಫೊ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!