
ಓವಲ್[ಸೆ.11]: ವೃತ್ತಿ ಬದುಕಿನ ವಿದಾಯದ ಪಂದ್ಯವಾಡುತ್ತಿರುವ ಅಲಿಸ್ಟರ್ ಕುಕ್ ಅಂತಿಮ ಇನ್ನಿಂಗ್ಸ್’ನಲ್ಲಿ 147 ರನ್ ಸಿಡಿಸುವುದರೊಂದಿಗೆ ಆಟ ಮುಗಿಸಿದ್ದಾರೆ. 2006ರಲ್ಲಿ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ ಶತಕದೊಂದಿಗೆ ವೃತ್ತಿಜೀವನ ಆರಂಭಿಸಿದ್ದ ಕುಕ್, ವಿದಾಯದ ಪಂದ್ಯದಲ್ಲೂ ಭಾರತ ವಿರುದ್ಧವೇ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ಪರ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಪಾತ್ರರಾಗಿರುವ ಕುಕ್ ವಿದಾಯದ ಪಂದ್ಯದಲ್ಲಿ ಹಲವು ದಾಖಲೆಗಳ ಮೈಲಿಗಲ್ಲನ್ನು ನೆಟ್ಟಿದ್ದಾರೆ.
5ನೇ ಟೆಸ್ಟ್’ನ ನಾಲ್ಕನೇ ದಿನ ಕುಕ್ ನಿರ್ಮಿಸಿದ ದಾಖಲೆಗಳ ಪಟ್ಟಿ ನಿಮ್ಮ ಮುಂದೆ..
1. ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಸಿಡಿಸಿದ ಎಡಗೈ ಬ್ಯಾಟ್ಸ್’ಮನ್ ಎಂಬ ದಾಖಲೆ ಕುಕ್[12472] ಪಾಲಾಗಿದೆ. ಈ ಮೊದಲು ಶ್ರೀಲಂಕಾ ಬ್ಯಾಟ್ಸ್’ಮನ್ ಕುಮಾರ ಸಂಗಕ್ಕರ[12400] ಹೆಸರಿನಲ್ಲಿ ಈ ದಾಖಲೆಯಿತ್ತು.
4. ಅತಿಹೆಚ್ಚು ಶತಕದ ಜತೆಯಾಟವಾಡಿದ ನಾಲ್ಕನೇ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಕುಕ್ ಖಾತೆಗೆ:
ಟೆಸ್ಟ್ ಕ್ರಿಕೆಟ್’ನಲ್ಲಿ ಜತೆಯಾಟ ಪಂದ್ಯದ ದಿಕ್ಕನ್ನೇ ಬದಲಾಯಿಸಿ ಬಿಡುತ್ತದೆ. ಜೋ ರೂಟ್ ಅವರೊಂದಿಗೆ ಶತಕದ ಜತೆಯಾಟದಲ್ಲಿ ಪಾಲ್ಗೊಳ್ಳುವ ಅತಿಹೆಚ್ಚು ಶತಕದ ಜತೆಯಾಟವಾಡಿದ ಆಟಗಾರರ ಪಟ್ಟಿಯಲ್ಲಿ ಕುಕ್ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್[88] ಮೊದಲ ಸ್ಥಾನದಲ್ಲಿದ್ದರೆ, ಸಚಿನ್ ತೆಂಡುಲ್ಕರ್[86] ಹಾಗೂ ರಿಕಿ ಪಾಂಟಿಂಗ್[85] ಮೊದಲ ಮೂರು ಸ್ಥಾನದಲ್ಲಿದ್ದರೆ, ಕುಕ್[77] ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ಇದನ್ನು ಓದಿ: ವಿದಾಯದ ಪಂದ್ಯದಲ್ಲಿ ಇತಿಹಾಸ ಬರೆದ ಕುಕ್
5. ಮೊದಲ ಹಾಗೂ ಕೊನೆಯ ಟೆಸ್ಟ್’ನಲ್ಲಿ ಶತಕ ಸಿಡಿಸಿದ 5ನೇ ಕ್ರಿಕೆಟಿಗ ಕುಕ್
ಆಟಗಾರ ಪದಾರ್ಪಣಾ ಪಂದ್ಯ ವಿದಾಯದ ಪಂದ್ಯ
ರೆಗ್ಗಿ ಡೆಪ್ 104 146
ಬಿಲ್ ಪೋನ್ಸ್’ಪೋರ್ಡ್ 110 266
ಗ್ರೇಗ್ ಚಾಪೆಲ್ 108 182
ಮೊಹಮ್ಮದ್ ಅಜರುದ್ದೀನ್ 110 102
ಅಲಿಸ್ಟರ್ ಕುಕ್ 104* 147
13. ಟೆಸ್ಟ್ ಕ್ರಿಕೆಟ್’ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಸಿಡಿಸಿರುವ ಎಲ್ಲಾ 13 ಬ್ಯಾಟ್ಸ್’ಮನ್’ಗಳು ನಿವೃತ್ತಿಯಾದಂತೆ ಆಗಿದೆ. ಈಗಿರುವ ಆಟಗಾರರಲ್ಲಿ ಗರಿಷ್ಠ ರನ್ ಸಿಡಿಸಿದ ಆಟಗಾರನೆಂದರೆ ಅದು ಹಾಶೀಂ ಆಮ್ಲಾ[9022 ರನ್].
13. ಮೂರನೇ ಇನ್ನಿಂಗ್ಸ್’ನಲ್ಲಿ ಗರಿಷ್ಠ ಶತಕ ಸಿಡಿಸಿದ ಆಟಗಾರ ಎನ್ನುವ ಖ್ಯಾತಿಗೆ ಕುಕ್ ಪಾತ್ರರಾಗಿದ್ದಾರೆ. ಕುಕ್ ಮೂರನೇ ಇನ್ನಿಂಗ್ಸ್’ನಲ್ಲಿ 13 ಶತಕ ಸಿಡಿಸುವ ಮೂಲಕ ಸಂಗಕ್ಕರ[12] ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.