ಲಂಕಾವನ್ನು ಧೂಳಿಪಟ ಮಾಡಿದ ಚಾಹಲ್ : ಭಾರತಕ್ಕೆ 1-0 ಮುನ್ನಡೆ

Published : Dec 20, 2017, 11:02 PM ISTUpdated : Apr 11, 2018, 12:47 PM IST
ಲಂಕಾವನ್ನು ಧೂಳಿಪಟ ಮಾಡಿದ ಚಾಹಲ್  : ಭಾರತಕ್ಕೆ 1-0 ಮುನ್ನಡೆ

ಸಾರಾಂಶ

ತರಂಗ(23) ಹಾಗೂ ಪೆರೇರಾ(19) ಕೆಲ ಸಮಯ ಆಟವಾಡಿದ್ದು ಬಿಟ್ಟರೆ ಉಳಿದವರೆಲ್ಲ ಚಾಹಲ್ 23/4, ಪಾಂಡ್ಯ29/3  ಹಾಗೂ ಕುಲ್ದಿಪ್ ಯಾದವ್ 18/2 ದಾಳಿಗೆ ಪರೇಡ್ ನಡೆಸಿದರು.

ಕಟಕ್(ಡಿ.20): ಚಲಾಲ್ ದಾಳಿಗೆ ಧೂಳಿಪಟವಾದ ಲಂಕಾ ಬ್ಯಾಟ್ಸ್'ಮೆನ್'ಗಳು 87 ರನ್'ಗಳಿಗೆ ಸರ್ವಪತನ ಕಂಡು 93 ರನ್'ಗಳಿಂದ ಸೋಲನ್ನನುಭವಿಸಿದೆ.

ಭಾರತ ನೀಡಿದ 180 ಸವಾಲನ್ನು ಬೆನ್ನತ್ತಿದ್ದ ಪೆರೇರಾ ಪಡೆ ಭಾರತೀಯ ಬೌಲರ್'ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. 2ನೇ ಓವರ್'ನಲ್ಲೇ ಜೆ. ಉನಾಡ್ಕಾಟ್ ದಾಳಿಗೆ ಆರಂಭಿಕ ಆಟಗಾರ ಡಿಕ್'ವೆಲ್ಲಾ ರಾಹುಲ್'ಗೆ ಕ್ಯಾಚಿತ್ತು ಔಟಾದರು. ತರಂಗ(23) ಹಾಗೂ ಪೆರೇರಾ(19) ಕೆಲ ಸಮಯ ಆಟವಾಡಿದ್ದು ಬಿಟ್ಟರೆ ಉಳಿದವರೆಲ್ಲ ಚಾಹಲ್ 23/4, ಪಾಂಡ್ಯ29/3  ಹಾಗೂ ಕುಲ್ದಿಪ್ ಯಾದವ್ 18/2 ದಾಳಿಗೆ ಪರೇಡ್ ನಡೆಸಿದರು. ಅಂತಿಮವಾಗಿ 16 ಓವರ್'ಗಳಲ್ಲಿ  87 ರನ್'ಗಳಿಗೆ ಆಲ್ಔಟ್ ಆದರು.    

ರಾಹುಲ್ ಅರ್ಧಶತಕ   

ಕಟಕ್'ನ ಬಾರಬತ್ತಿ ಕ್ರೀಡಾಂಗಣದಲ್ಲಿ ಇದಕ್ಕೂ ಮುನ್ನ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಪರೇರಾ ರೋಹಿತ್ ಶರ್ಮಾ ಪಡೆಯನ್ನು ಬ್ಯಾಟಿಂಗ್ ಆಹ್ವಾನಿಸಿದರು.

ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಹೆಚ್ಚು ಹೊತ್ತು ಕ್ರೀಸ್'ನಲ್ಲಿ ನಿಲ್ಲದೆ 13 ಎದುರಿಸಿ 2 ಬೌಂಡರಿಗಳೊಂದಿಗೆ 17 ರನ್ ಬಾರಿಸಿ ಮ್ಯಾಥ್ಯೂಸ್ ಬೌಲಿಂಗ್'ನಲ್ಲಿ ಚಮೀರಾಗೆ ಕ್ಯಾಚಿತ್ತು ಔಟಾದರು.

2ನೇ ವಿಕೇಟ್'ಗೆ ಶ್ರೇಯಸ್ ಅಯ್ಯರ್'ನೊಂದಿಗೆ ಜೊತೆಯಾಟವಾಡಿದ ಕೆ.ಎಲ್. ರಾಹುಲ್ ಅರ್ಧ ಶತಕ ದಾಖಲಿಸಿದರು. 48 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 61 ರನ್ ಗಳಿಸುವುದರೊಂದಿಗೆ ವೃತ್ತಿ ಜೀವನದ 2ನೇ ಅರ್ಧ ಶತಕ ದಾಖಲಿಸಿದರು.

ಅಯ್ಯರ್ 3 ಬೌಂಡರಿಯೊಂದಿಗೆ 24 ರನ್ ಬಾರಿಸಿ  ಪ್ರದೀಪ್ ಬೌಲಿಂಗ್'ನಲ್ಲಿ ಸ್ಟಂಪ್ ಔಟ್ ಆದರು. ವಿಕೇಟ್ ಕೀಪರ್ ಧೋನಿ(39: 22 ಎಸೆತ 4 ಬೌಂಡರಿ, 1 ಸಿಕ್ಸ್'ರ್ ) ಹಾಗೂ ಮತ್ತೊಬ್ಬ ಕನ್ನಡಿಗ ಮನೀಶ್ ಪಾಂಡೆ (32: 18 ಎಸೆತ 2 ಬೌಂಡರಿ, 2 ಸಿಕ್ಸ್'ರ್) ಅವರೊಂದಿಗೆ 4ನೇ ವಿಕೇಟ್ ಮುರಿಯದ ಜೊತೆಯಾಟಕ್ಕೆ 68 ರನ್  ಪೇರಿಸಿದರು.

 

ಸ್ಕೋರ್

ಭಾರತ 20 ಓವರ್'ಗಳಲ್ಲಿ 180/3

(ಕೆ.ಎಲ್. ರಾಹುಲ್ 61, ಧೋನಿ ಅಜೇಯ 39, ಮನೀಶ್ ಪಾಂಡೆ ಅಜೇಯ 32 )            

ಶ್ರೀಲಂಕಾ 16 ಓವರ್'ಗಳಲ್ಲಿ 87

(ತರಂಗ 23, ಪರೇರಾ 19, ಚಲಾಲ್23/4,ಪಾಂಡ್ಯ29/3 ಹಾಗೂ ಕುಲ್ದಿಪ್ ಯಾದವ್ 18/2)

ಪಂದ್ಯ ಶ್ರೇಷ್ಠ: ವೈ. ಚಾಹಲ್

--

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!
ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!