ಸೋಲಿನ ಭೀತಿಯಲ್ಲಿ ಕರ್ನಾಟಕ : ಫಲಿತಾಂಶ ನಾಳೆ ನಿರ್ಧಾರ

Published : Dec 20, 2017, 05:23 PM ISTUpdated : Apr 11, 2018, 01:01 PM IST
ಸೋಲಿನ ಭೀತಿಯಲ್ಲಿ ಕರ್ನಾಟಕ : ಫಲಿತಾಂಶ ನಾಳೆ ನಿರ್ಧಾರ

ಸಾರಾಂಶ

195/4 ರನ್'ನೊಂದಿಗೆ 4ನೇ ದಿನದಾಟ ಆರಂಭಿಸಿದ ವಿದರ್ಭ ತಂಡ ಆದಿತ್ಯ ಸಾರ್ವಾಟೆ (55) ಹಾಗೂ ಅಕ್ಷಯ್ ವಿನೋದ್ ವಾಡ್ಕರ್ (28) ಹಾಗೂ ಕನ್ನಡಿಗ ಗಣೇಶ್ ಸತೀಶ್ (81) ಅವರ ತಾಳ್ಮೆಯ ಆಟದೊಂದಿಗೆ 313 ರನ್ ಕಲೆ ಹಾಕಿ ಕರ್ನಾಟಕಕ್ಕೆ 197 ರನ್ ಗುರಿ ನೀಡಿತು.

ಕೋಲ್ಕತ್ತಾ(ಡಿ.20):  ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದ ಕರ್ನಾಟಕ ರಾಜ್ಯ ತಂಡಕ್ಕೆ ಸೆಮಿಫೈನಲ್'ನಲ್ಲೇ ಮುಗ್ಗರಿಸುವ ಆತಂಕ ಎದುರಾಗಿದೆ.

ಕೋಲ್ಕತ್ತಾದ ಈಡನ್ ಗಾರ್ಡ್'ನ್'ನಲ್ಲಿ ನಡೆಯುತ್ತಿರುವ ವಿದರ್ಭ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ರಾಜ್ಯ ತಂಡದವರಿಗೆ ಗೆಲ್ಲಲು 87 ರನ್ ಬೇಕಾಗಿದ್ದು, ಕೇವಲ 3 ವಿಕೇಟ್ ಮಾತ್ರ ಬಾಕಿಯಿದೆ. ಕಣದಲ್ಲಿ ನಾಯಕ ವಿನಯ್ ಕುಮಾರ್ ಹಾಗೂ ಶ್ರೇಯಸ್ ಗೋಪಾಲ್ ಉಳಿದಿದ್ದಾರೆ. ಸೋಲು ಗೆಲುವಿನ ಅಂತಿಮ ಫಲಿತಾಂಶ ನಾಳೆ ನಿರ್ಧಾರವಾಗಲಿದೆ.

195/4 ರನ್'ನೊಂದಿಗೆ 4ನೇ ದಿನದಾಟ ಆರಂಭಿಸಿದ ವಿದರ್ಭ ತಂಡ ಆದಿತ್ಯ ಸಾರ್ವಾಟೆ (55) ಹಾಗೂ ಅಕ್ಷಯ್ ವಿನೋದ್ ವಾಡ್ಕರ್ (28) ಹಾಗೂ ಕನ್ನಡಿಗ ಗಣೇಶ್ ಸತೀಶ್ (81) ಅವರ ತಾಳ್ಮೆಯ ಆಟದೊಂದಿಗೆ 313 ರನ್ ಕಲೆ ಹಾಕಿ ಕರ್ನಾಟಕಕ್ಕೆ 197 ರನ್ ಗುರಿ ನೀಡಿತು. ರಾಜ್ಯದ ಪರ ವಿನಯ್ ಕುಮಾರ್ 71/3, ಸ್ಟುವರ್ಟ್ ಬಿನ್ನಿ 74/3, ಶ್ರೀನಾಥ್ ಅರವಿಂದ್ 56/2 ವಿಕೇಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು.

ರಾಜ್'ನೀಶ್, ನೆರಲ್ ದಾಳಿಗೆ ಕುಸಿದ ವಿನಯ್ ಪಡೆ

197 ರನ್ ಸಾಧಾರಣ ಗುರಿಯನ್ನು ಬೆನ್ನಟ್ಟಿದ್ದ ಕರ್ನಾಟಕದ ವಿನಯ್ ಕುಮಾರ್ ಪಡೆಗೆ ನೆರೇಲ್ ಹಾಗೂ ರಾಜ್'ನೀಶ್ ಆರಮಭದಲ್ಲೇ ಕಡಿವಾಣ ಹಾಕಿದರು. ಈ ಋತುವಿನಲ್ಲಿ ಹೆಚ್ಚು ರನ್ ಗಳಿಸಿ ಭರವಸೆ ಮೂಡಿಸಿದ್ದ ಮಾಯಾಂಕ್ ಅಗರ್'ವಾಲ್  3ನೇ ಓವರ್'ನಲ್ಲಿಯೇ 3 ರನ್ ಗಳಿಸಿ ಉಮೆಶ್ ಯಾದವ್'ಗೆ ಬೌಲಿಂಗ್'ನಲ್ಲಿ ಅವರಿಗೆ ಕ್ಯಾಚಿತ್ತು ಔಟಾದರು.

ಉದಯೋನ್ಮುಖ ಆಟಗಾರ ಡಿ. ನಿಶ್ಚಲ್  ಒಂದಷ್ಟು ಹೊತ್ತು ಇದ್ದರೂ 7 ರನ್ ಗಳಿಸಿ ನೆರಾಲ್ ದಾಳಿಗೆ ಬಲಿಯಾದರು. ಸಮರ್ಥ್ (24), ಕರುಣಾ ನಾಯರ್ (30) ಹಾಗೂ ಗೌತಮ್(24) ರನ್ ಗಳಿಸಿ ಭರವಸೆ ಮೂಡಿಸಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅನಂತರ ಆಗಮಿಸಿದ ಬಿನ್ನಿ(0), ಕೆ. ಗೌತಮ್(1) ಬಂದ ಹಾಗೆಯೇ ನಿರ್ಗಮಿಸಿದರು. ದಿನದಾಟ ಮುಗಿಯುವ ಹೊತ್ತಿಗೆ ನಾಯಕ ವಿನಯ್ ಕುಮಾರ್ (19) ಹಾಗೂ ಶ್ರೇಯಸ್ ಗೋಪಾಲ್(1) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ರಾಜ್'ನೀಶ್ 35/4 ಹಾಗೂ ಸಿದ್ಧೇಶ್ ನೆರಲ್ 37/2 ವಿಕೇಟ್ ಕಿತ್ತು ರಾಜ್ಯ ತಂಡಕ್ಕೆ ಸೋಲಿನ ಭಯ ಮೂಡಿಸಿದ್ದಾರೆ. ಎರಡೂ ತಂಡಗಳ ಫೈನಲ್ ಕನಸು ನಾಳೆ ನಿರ್ಧಾರವಾಗಲಿದೆ.

ಸ್ಕೋರ್

ವಿದರ್ಭ 185 ಹಾಗೂ 2ನೇ ಇನ್ನಿಂಗ್ಸ್ 313

(ಗಣೇಶ್ ಸತೀಶ್ 81, ಆದಿತ್ಯ ಸಾರ್ವಾಟೆ 55, ಆಪೂರ್ವ್ ವಾಂಕೇಡೆ 49, ವಿನಯ್ 71/3, ಸ್ಟುವರ್ಟ್ ಬಿನ್ನಿ 56/3 )

ಕರ್ನಾಟಕ 301 ಹಾಗೂ 111/7

(ಕರುಣ್ ನಾಯರ್ 30, ರಾಜ್'ನೀಶ್ 35/4)

4ನೇ ದಿನದಾಟದ ಅಂತ್ಯಕ್ಕೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!
ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!