
ಕಟಕ್(ಡಿ.20): ಶ್ರೀಲಂಕಾ ವಿರುದ್ಧದ ಮೊದಲ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಉತ್ತಮ ಮೊತ್ತ ದಾಖಲಿಸಿದೆ.
ಕಟಕ್'ನ ಬಾರಬತ್ತಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಪರೇರಾ ರೋಹಿತ್ ಶರ್ಮಾ ಪಡೆಯನ್ನು ಬ್ಯಾಟಿಂಗ್ ಆಹ್ವಾನಿಸಿದರು. ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಹೆಚ್ಚು ಹೊತ್ತು ಕ್ರೀಸ್'ನಲ್ಲಿ ನಿಲ್ಲದೆ 13 ಎದುರಿಸಿ 2 ಬೌಂಡರಿಗಳೊಂದಿಗೆ 17 ರನ್ ಬಾರಿಸಿ ಮ್ಯಾಥ್ಯೂಸ್ ಬೌಲಿಂಗ್'ನಲ್ಲಿ ಚಮೀರಾಗೆ ಕ್ಯಾಚಿತ್ತು ಔಟಾದರು.
2ನೇ ವಿಕೇಟ್'ಗೆ ಶ್ರೇಯಸ್ ಅಯ್ಯರ್'ನೊಂದಿಗೆ ಜೊತೆಯಾಟವಾಡಿದ ಕೆ.ಎಲ್. ರಾಹುಲ್ ಅರ್ಧ ಶತಕ ದಾಖಲಿಸಿದರು. 48 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 61 ರನ್ ಗಳಿಸುವುದರೊಂದಿಗೆ ವೃತ್ತಿ ಜೀವನದ 2ನೇ ಅರ್ಧ ಶತಕ ದಾಖಲಿಸಿದರು.
ಅಯ್ಯರ್ 3 ಬೌಂಡರಿಯೊಂದಿಗೆ 24 ರನ್ ಬಾರಿಸಿ ಪ್ರದೀಪ್ ಬೌಲಿಂಗ್'ನಲ್ಲಿ ಸ್ಟಂಪ್ ಔಟ್ ಆದರು. ವಿಕೇಟ್ ಕೀಪರ್ ಧೋನಿ(39: 22 ಎಸೆತ 4 ಬೌಂಡರಿ, 1 ಸಿಕ್ಸ್'ರ್ ) ಹಾಗೂ ಮತ್ತೊಬ್ಬ ಕನ್ನಡಿಗ ಮನೀಶ್ ಪಾಂಡೆ (32: 18 ಎಸೆತ 2 ಬೌಂಡರಿ, 2 ಸಿಕ್ಸ್'ರ್) ಅವರೊಂದಿಗೆ 4ನೇ ವಿಕೇಟ್ ಮುರಿಯದ ಜೊತೆಯಾಟಕ್ಕೆ 68 ರನ್ ಪೇರಿಸಿದರು. ಅಂತಿಮವಾಗಿ ಭಾರತ 180/3 ಪೇರಿಸಿ ಶ್ರೀಲಂಕಾ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಶ್ರೀಲಂಕಾ ಪರ ಮ್ಯಾಥ್ಯೂಸ್, ಪೆರೇರಾ ಹಾಗೂ ಫೆರ್ನಾಂಡೋ ತಲಾ ಒಂದು ವಿಕೆಟ್ ಪಡೆದರು.
ಸ್ಕೋರ್
ಭಾರತ 20 ಓವರ್'ಗಳಲ್ಲಿ 180/3
(ಕೆ.ಎಲ್. ರಾಹುಲ್ 61, ಧೋನಿ ಅಜೇಯ 39, ಮನೀಶ್ ಪಾಂಡೆ ಅಜೇಯ 32 )
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.