
ಈಗ ಮಹೇಂದ್ರ ಸಿಂಗ್ ಧೋನಿ ಇಲ್ಲದ ಭಾರತ ಸೀಮಿತ ಓವರ್ಗಳ ತಂಡವನ್ನ ನೋಡಲು ಸಾಧ್ಯವಿಲ್ಲ. ಒಂದು ತಿಂಗಳ ಹಿಂದೆಯಷ್ಟೇ ಮಹಿ ಬೇಡ ಎಂದವರೆಲ್ಲಾ ಈಗ ಬೇಕು ಅನ್ನುತ್ತಿದ್ದಾರೆ. ಅವರು 2019 ಒಂಡೇ ವರ್ಲ್ಡ್ಕಪ್ ಆಡ್ಲೇಬೇಕು. ಅವರಿಲ್ಲದೆ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲೋದು ಕನಸಿನ ಮಾತು ಅಂತಿದ್ದಾರೆ. ಯಾಕೆ ಗೊತ್ತಾ..? ಈ ಒಂದು ತಿಂಗಳಲ್ಲಿ ಮಹಿ ಹಾಗೆ ಮೋಡಿ ಮಾಡಿದ್ದಾರೆ.
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಧೋನಿ ಮಾಡಿದ ಮೋಡಿಗೆ ವರ್ಲ್ಡ್ಕ್ರಿಕೆಟ್ ಫಿದಾ ಆಗಿದೆ. ಅವರ ವಿರುದ್ಧ ಮಾತನಾಡಿಕೊಳ್ಳುತ್ತಿದ್ದವರು, ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ. ಈಗ ಎಲ್ಲರೂ ಧೋನಿ-ಧೋನಿ ಅಂತಿದ್ದಾರೆ. ಬ್ಯಾಟಿಂಗ್ ಮತ್ತು ಕೀಪಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಇನ್ನು ರಣತಂತ್ರ ರೂಪಿಸೋದ್ರಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಸಾಥ್ ನೀಡ್ತಿದ್ದಾರೆ. ಡಿಆರ್ಎಸ್ ತೆಗೆದುಕೊಳೋದ್ರಲ್ಲಿ ಅವರೇ ಪಂಟರ್. ಅಲ್ಲಿಗೆ ಧೋನಿ 2019ರ ವರ್ಲ್ಡ್ಕಪ್ ಆಡೋದು ಫಿಕ್ಸ್.
ಪದೇಪದೇ ಬದಲಾಗ್ತಿದೆ ಧೋನಿ ಬ್ಯಾಟಿಂಗ್ ಕ್ರಮಾಂಕ
ಈ ವರ್ಷ ಧೋನಿ ಬ್ಯಾಟಿಂಗ್ ಕ್ರಮಾಂಕ ಪದೇಪದೇ ಬದಲಾಗಿದೆ. ಇದೇ ವರ್ಷ ಆಡಿರೋ ಐದು ಏಕದಿನ ಸರಣಿಯಲ್ಲೇ ಮೂರು ವಿವಿಧ ಕ್ರಮಾಂಕದಲ್ಲಿ ಆಡಿದ್ದಾರೆ. 5, 6 ಮತ್ತು 7ನೇ ಕ್ರಮಾಂಕದಲ್ಲಿ ಆಡಿರುವ ಅವರು, ಯಾವ್ದೇ ಸರಣಿಯಲ್ಲೂ ಒಂದೇ ಕ್ರಮಾಂಕದಲ್ಲಿ ಆಡಿಲ್ಲ. ಇದರ ನಡ್ವೆಯೂ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ವಿಶ್ವಕಪ್ ಹತ್ತಿರ ಬರುತ್ತಿದ್ದರೂ ಅವರ ಬ್ಯಾಟಿಂಗ್ ಆರ್ಡರ್ ಫಿಕ್ಸ್ ಆಗೋದು ಯಾವಾಗ ಅನ್ನೋದು ಅವರ ಅಭಿಮಾನಿಗಳ ಪ್ರಶ್ನೆ.
ವಿಶ್ವಕಪ್'ನಲ್ಲಿ ಧೋನಿಗೆ ಯಾವ ಕ್ರಮಾಂಕ..?
ಆರಂಭಿಕನಿಂದ ಹಿಡಿದು 8ನೇ ಕ್ರಮಾಂಕದವರೆಗೂ ಧೋನಿ ಬ್ಯಾಟಿಂಗ್ ಮಾಡಿದ್ದಾರೆ. ಬಹುತೇಕ ಎಲ್ಲ ಆರ್ಡರ್ನಲ್ಲೂ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದ್ರೆ ಕಳೆದೊಂದು ವರ್ಷದಲ್ಲಿ ಅವರಿಗೆ ಬ್ಯಾಟಿಂಗ್ ಕ್ರಮಾಂಕ ಫಿಕ್ಸ್ ಆಗಿಲ್ಲ. ಪ್ರತಿ ಪಂದ್ಯಕ್ಕೂ ಅವರ ಬ್ಯಾಟಿಂಗ್ ಆರ್ಡರ್ ಬದಲಾಗಿದೆ. ಹೀಗಾಗಿ ವಿಶ್ವಕಪ್ನಲ್ಲಿ ಅವರು ಯಾವ ಕ್ರಮಾಂಕದಲ್ಲಿ ಆಡ್ತಾರೆ. ಅವರಿಗೆ ಯಾವ ಕ್ರಮಾಂಕವನ್ನ ಟೀಮ್ ಮ್ಯಾನೇಜ್ಮೆಂಟ್ ಫಿಕ್ಸ್ ಮಾಡುತ್ತೆ ಅನ್ನೋದು ಸದ್ಯಕ್ಕಿರುವ ಪ್ರಶ್ನೆ.
ಧೋನಿ ಹೆಚ್ಚಾಗಿ ಆಡಿರುವ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ಹೀಗಿದೆ. 4ನೇ ಕ್ರಮಾಂದಲ್ಲಿ 26 ಪಂದ್ಯಗಳನ್ನಾಡಿದ್ದು 58.23ರ ಸರಾಸರಿಯಲ್ಲಿ 1223 ರನ್ ಹೊಡೆದಿದ್ದಾರೆ. ಇದರಲ್ಲಿ 1 ಶತಕ, 11 ಅರ್ಧಶತಕಗಳಿವೆ. 5ನೇ ಕ್ರಮಾಂಕದಲ್ಲಿ 67 ಮ್ಯಾಚ್ಗಳನ್ನಾಡಿರುವ ಮಹಿ, 53.86ರ ಸರಾಸರಿಯಲ್ಲಿ 2693 ರನ್ ಬಾರಿಸಿದ್ದಾರೆ. 4 ಸೆಂಚುರಿ, 15 ಹಾಫ್ ಸೆಂಚುರಿ ದಾಖಲಿಸಿದ್ದಾರೆ. ಇನ್ನು ಅವರ ನೆಚ್ಚಿನ 6ನೇ ಕ್ರಮಾಂಕದಲ್ಲಿ 118 ಪಂದ್ಯಗಳನ್ನಾಡಿದ್ದು 46.62ರ ಸರಾಸರಿಯಲ್ಲಿ 3823 ರನ್ ಕಲೆಹಾಕಿದ್ದಾರೆ. 1 ಶತಕ, 28 ಅರ್ಧಶತಗಳೂ ಇವೆ. 7ನೇ ಕ್ರಮಾಂಕದಲ್ಲಿ 31 ಮ್ಯಾಚ್ ಆಡಿದ್ದು 48.72ರ ಸರಾಸರಿಯಲ್ಲಿ 877 ರನ್ ಹೊಡೆದಿದ್ದಾರೆ. 2 ಶತಕ, 5 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ.
ಇಲ್ಲ ತಮ್ಮ ನೆಚ್ಚಿನ 6ನೇ ಕ್ರಮಾಂಕದಲ್ಲೇ ಆಡ್ತಾರಾ..?
4ನೇ ಕ್ರಮಾಂಕಕ್ಕೆ ಪ್ರಯೋಗದ ಮೇಲೆ ಪ್ರಯೋಗ ಮಾಡಲಾಗ್ತಿದೆ. ಆದ್ರೂ ಯಾರೂ ಸೆಟ್ ಆಗ್ತಿಲ್ಲ. ಹಳೆಯ ಹೆಂಡತಿಯ ಪಾದವೇ ಗತಿ ಅನ್ನೋ ಹಾಗೆ ಧೋನಿಯನ್ನೇ ಆ ಕ್ರಮಾಂಕಕ್ಕೆ ಫಿಕ್ಸ್ ಮಾಡ್ತಾರಾ..? ಇಲ್ಲ ಗ್ರೇಟ್ ಫಿನಿಶರ್ ಅಂತ 6ನೇ ಕ್ರಮಾಂಕದಲ್ಲೇ ಆಡ್ತಾರಾ ಅನ್ನೋದು ಗೊತ್ತಿಲ್ಲ. ಆದ್ರೂ ಇನ್ನೊಂದೆರಡು ಸರಣಿ ಮುಗಿಯುವ ವೇಳೆಗೆ ಧೋನಿ ಬ್ಯಾಟಿಂಗ್ ಕ್ರಮಾಂಕವನ್ನ ಫಿಕ್ಸ್ ಮಾಡಿರೆ ಒಳಿತು. ಪದೇಪದೇ ಬ್ಯಾಟಿಂಗ್ ಆರ್ಡರ್ ಬದಲಿಸಿ ಅವರು ವಿಫಲವಾದ್ರೆ ಅದಕ್ಕೆ ನೇರ ಹೊಳೆ ಟೀಮ್ ಮ್ಯಾನೇಜ್ಮೆಂಟ್ ಆಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.