ಟಿ20 ಆಯ್ತು, ಇದೀಗ ಟಿ10 ಸರದಿ; ಮಿಂಚು ಹರಿಸಲು ರೆಡಿಯಾದ ವೀರೂ, ಗೇಲ್, ಅಫ್ರೀದಿ

By naveena -First Published Oct 5, 2017, 2:29 PM IST
Highlights

ಶಾರ್ಜಾದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಮಾಜಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಕುಮಾರ್ ಸಂಗಕ್ಕಾರ, ಶಾಹೀದ್ ಅಫ್ರೀದಿ ಟೂರ್ನಿಯ ಬ್ರ್ಯಾಂಡ್ ಅಂಬಾಸಿಡರ್'ಗಳಾದರೆ, ಶಕೀಬ್ ಅಲ್ ಹಸನ್, ಇಯಾನ್ ಮಾರ್ಗನ್ ಹಾಗೂ ಕ್ರಿಸ್ ಗೇಲ್ ಐಕಾನ್ ಆಟಗಾರರಾಗಿ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದುಬೈ(ಅ.05): ಟಿ20 ಕ್ರಿಕೆಟ್ ವಿಶ್ವದಾದ್ಯಂತ ಜನಪ್ರಿಯಗೊಳ್ಳುತ್ತಿರುವಾಗಲೇ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಟಿ10 (ಟೆನ್-ಟೆನ್) ಕ್ರಿಕೆಟ್ ಲೀಗ್ ಆರಂಭಗೊಳ್ಳುತ್ತಿದೆ.

ಡಿಸೆಂಬರ್ 21ರಿಂದ 24ರ ವರೆಗೂ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಕೇವಲ 10 ಓವರ್‌'ಗಳ ಆಟ ನಡೆಯಲಿದ್ದು, 90 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಳ್ಳಲಿದೆ.

ಶಾರ್ಜಾದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಮಾಜಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಕುಮಾರ್ ಸಂಗಕ್ಕಾರ, ಶಾಹೀದ್ ಅಫ್ರೀದಿ ಟೂರ್ನಿಯ ಬ್ರ್ಯಾಂಡ್ ಅಂಬಾಸಿಡರ್'ಗಳಾದರೆ, ಶಕೀಬ್ ಅಲ್ ಹಸನ್, ಇಯಾನ್ ಮಾರ್ಗನ್ ಹಾಗೂ ಕ್ರಿಸ್ ಗೇಲ್ ಐಕಾನ್ ಆಟಗಾರರಾಗಿ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಸಾಕಷ್ಟು ಸ್ಫೋಟಕ ಬ್ಯಾಟ್ಸ್'ಮನ್'ಗಳು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಪಂದ್ಯಾವಳಿಯಲ್ಲಿ ಒಟ್ಟು 4 ತಂಡಗಳು ಸೆಣಸಾಡಲಿವೆ ಎನ್ನಲಾಗಿದೆ. ಈ ಟೂರ್ನಿಯು ಮಾಸ್ಟರ್ಸ್ ಚಾಂಪಿಯನ್ಸ್ ಟ್ರೋಫಿಯ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದೆ ಎನ್ನಲಾಗುತ್ತಿದೆ.

click me!