ಬಿಸಿಸಿಐಗೆ ಐಸಿಸಿಯಿಂದ 150 ಕೋಟಿ ರುಪಾಯಿ ತೆರಿಗೆ ಹೊರೆ!

By Web DeskFirst Published Mar 4, 2019, 11:09 AM IST
Highlights

ಭಾರತೀಯ ತೆರಿಗೆ ನಿಯಮಗಳ ಪ್ರಕಾರ ತೆರಿಗೆ ವಿನಾಯಿತಿಗೆ ಅವಕಾಶವಿಲ್ಲ. ಇದರಿಂದಲೇ ಫಾರ್ಮುಲಾ 1 ರೇಸ್‌ ಆಯೋಜನೆಯನ್ನು ಭಾರತ ಕಳೆದುಕೊಂಡಿದ್ದು. ವಿಶ್ವಕಪ್‌ನಂತಹ ಜಾಗತಿಕ ಮಟ್ಟದ ಟೂರ್ನಿಗಳ ವೇಳೆ ಆತಿಥ್ಯ ವಹಿಸುವ ರಾಷ್ಟ್ರಗಳಿಂದ ಐಸಿಸಿ ತೆರಿಗೆ ವಿನಾಯಿತಿ ನಿರೀಕ್ಷೆ ಮಾಡುತ್ತದೆ. 

ನವದೆಹಲಿ[ಮಾ.04]: ಜಾಗತಿಕ ಮಟ್ಟದ ಟೂರ್ನಿಗಳಾದ 2021ರ ವಿಶ್ವ ಟಿ20 ಹಾಗೂ 2023ರ ಏಕದಿನ ವಿಶ್ವಕಪ್‌ಗೆ ತೆರಿಗೆ ವಿನಾಯಿತಿ ನೀಡದಿದ್ದರೆ, ಪಂದ್ಯಾವಳಿಗಳನ್ನು ಆಯೋಜಿಸಲು ಬಿಸಿಸಿಐ 150 ಕೋಟಿ ರುಪಾಯಿ ತೆರಿಗೆ ಹೊರೆ ಹೊರಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ತಾಕೀತು ಮಾಡಿದೆ. ಬಿಸಿಸಿಐ ಅಧಿಕಾರಿಗಳು, ಐಸಿಸಿ ಬಳಿ ಲೋಕಸಭಾ ಚುನಾವಣೆ ಮುಗಿಯುವ ವರೆಗೂ ಸಮಯಾವಕಾಶ ಕೋರಿದ್ದು, ಐಸಿಸಿ ಒಪ್ಪಿಗೆ ಸೂಚಿಸಿದೆ.

ಅನಿಲ್ ಕುಂಬ್ಳೆ ಐಸಿಸಿ ಕ್ರಿಕೆಟ್‌ ಸಮಿತಿ ಮುಖ್ಯಸ್ಥ

ಭಾರತೀಯ ತೆರಿಗೆ ನಿಯಮಗಳ ಪ್ರಕಾರ ತೆರಿಗೆ ವಿನಾಯಿತಿಗೆ ಅವಕಾಶವಿಲ್ಲ. ಇದರಿಂದಲೇ ಫಾರ್ಮುಲಾ 1 ರೇಸ್‌ ಆಯೋಜನೆಯನ್ನು ಭಾರತ ಕಳೆದುಕೊಂಡಿದ್ದು. ವಿಶ್ವಕಪ್‌ನಂತಹ ಜಾಗತಿಕ ಮಟ್ಟದ ಟೂರ್ನಿಗಳ ವೇಳೆ ಆತಿಥ್ಯ ವಹಿಸುವ ರಾಷ್ಟ್ರಗಳಿಂದ ಐಸಿಸಿ ತೆರಿಗೆ ವಿನಾಯಿತಿ ನಿರೀಕ್ಷೆ ಮಾಡುತ್ತದೆ. ಆದರೆ 2016ರ ಟಿ20 ವಿಶ್ವಕಪ್‌ ವೇಳೆ ವಿನಾಯಿತಿ ಸಿಕ್ಕಿರಲಿಲ್ಲ. ಈ ವಿಚಾರಕ್ಕೆ ಬಿಸಿಸಿಐ ಮೇಲೆ ಐಸಿಸಿ ಮುನಿಸಿಕೊಂಡಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿ ಇಲ್ಲವೇ ತೆರಿಗೆ ಮೊತ್ತವನ್ನು ಪಾವತಿಸಿ ಎಂದು ಸೂಚಿಸಿದೆ.

ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಹೊಸ ಜರ್ಸಿ ಅನಾವರಣ!

ಲೋಕಸಭಾ ಚುನಾವಣೆ ಬಳಿಕ ನಿಯಮಗಳಲ್ಲಿ ಬದಲಾವಣೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಬಿಸಿಸಿಐ ಇದ್ದು, ಒಂದೊಮ್ಮೆ ಬದಲಾವಣೆ ಆಗದಿದ್ದಲ್ಲಿ ತನ್ನ ಪ್ರಾಯೋಜಕರಿಗೆ ತೆರಿಗೆ ಹೊರೆಯನ್ನು ಹೊರೆಸುವ ಲೆಕ್ಕಾಚಾರದಲ್ಲಿದೆ. ‘ಪ್ರಾಯೋಜಕರೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ತೆರಿಗೆ ಮೊತ್ತದ ಇಂತಿಷ್ಟುಭಾಗವನ್ನು ಪ್ರಾಯೋಜಕತ್ವ ನೀಡುವ ಸಂಸ್ಥೆಗಳು ಪಾವತಿಸಬೇಕು ಎನ್ನುವ ನಿಯಮವಿದೆ. ಹೀಗಾಗಿ ಬಿಸಿಸಿಐ, ಐಸಿಸಿಗೆ 150 ಕೋಟಿ ರುಪಾಯಿ ಪಾವತಿಸಬೇಕಿದ್ದರೂ ಹೆಚ್ಚಿನ ಸಮಸ್ಯೆಯಾಗುವುದಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

click me!