ಅಂಬಾಟಿ ರಾಯುಡುಗೆ ಬೌಲಿಂಗ್ ಮಾಡದಂತೆ ಐಸಿಸಿ ತಾಕೀತು

By Web Desk  |  First Published Jan 29, 2019, 9:57 AM IST

ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಅನುಮಾನಾಸ್ಪದ ಬೌಲಿಂಗ್ ಶೈಲಿಗೆ ಆರೋಪಕ್ಕೆ ಗುರಿಯಾದ ಟೀಂ ಇಂಡಿಯಾ ಕ್ರಿಕೆಟಿಗ ಅಂಬಾಟಿ ರಾಯುಡುಗೆ ಐಸಿಸಿ ನಿರ್ಬಂಧ ಹೇರಿದೆ. 


ದುಬೈ(ಜ.29): ಅನುಮಾನಸ್ವದ ಬೌಲಿಂಗ್ ಆರೋಪಕ್ಕೆ ಗುರಿಯಾಗಿದ್ದ ಭಾರತ ತಂಡದ ಅಂಬಾಟಿ ರಾಯುಡುಗೆ ಐಸಿಸಿ ಬೌಲಿಂಗ್ ಮಾಡದಂತೆ ತಾಕೀತು ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು ಬೌಲಿಂಗ್ ಅನುಮಾನಸ್ಪದ ಬೌಲಿಂಗ್ ಆರೋಪಕ್ಕೆ ಗುರಿಯಾಗಿತ್ತು.

ಇದನ್ನೂ ಓದಿ: ಗಿಲ್‌ಗಿರುವ 10% ರಷ್ಟು ಕೌಶಲ್ಯ ನನ್ನಲ್ಲಿರಲಿಲ್ಲ: ವಿರಾಟ್ ಕೊಹ್ಲಿ!

Latest Videos

undefined

ರಾಯುಡು ಬೌಲಿಂಗ್ ಶೈಲಿ ಅನುಮಾನ ಮೂಡಿಸಿದ ಕಾರಣ ಐಸಿಸಿ 14 ದಿನದೊಳಗೆ ಪರೀಕ್ಷೆ ಒಳಪಡುವಂತೆ ಸೂಚಿಸಿತ್ತು. ಆದರೆ ಸತತ ಸರಣಿಯಿಂದ ರಾಯುಡು ಪರೀಕ್ಷೆ ಒಳಪಟ್ಟಿರಲಿಲ್ಲ. ಹೀಗಾಗಿ ರಾಯುಡುಗೆ ಬೌಲಿಂಗ್ ಮಾಡದಂತೆ ಐಸಿಸಿ ನಿರ್ಬಂಧ ಹೇರಿದೆ.

ಇದನ್ನೂ ಓದಿ: ಕ್ರಿಕೆಟಿಗನ ನಿಂದಿಸಿದ ಪಾಕಿಸ್ತಾನ ನಾಯಕ ಸರ್ಫರಾಜ್ ಅಮಾನತು!

ಸಿಡ್ನಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು 2 ಓವರ್‌ ಬೌಲಿಂಗ್‌ ಮಾಡಿದ್ದರು. ಅವರ ಬೌಲಿಂಗ್‌ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ ಪಂದ್ಯದ ಅಧಿಕಾರಿಗಳು, ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ವರದಿ ಮಾಡಿದ್ದಾರೆ. ತಮ್ಮ 50 ಏಕದಿನ ಪಂದ್ಯಗಳ ವೃತ್ತಿ ಬದುಕಿನಲ್ಲಿ ಕೇವಲ 20.1 ಓವರ್‌ ಬೌಲ್‌ ಮಾಡಿರುವ ರಾಯುಡು 3 ವಿಕೆಟ್‌ ಕಬಳಿಸಿದ್ದಾರೆ. ತಾವಾಡಿರುವ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅವರು ಒಮ್ಮೆಯೂ ಬೌಲಿಂಗ್‌ ಮಾಡಿಲ್ಲ.

click me!