ಗಿಲ್‌ಗಿರುವ 10% ರಷ್ಟು ಕೌಶಲ್ಯ ನನ್ನಲ್ಲಿರಲಿಲ್ಲ: ವಿರಾಟ್ ಕೊಹ್ಲಿ!

By Web DeskFirst Published Jan 29, 2019, 9:04 AM IST
Highlights

ಟೀಂ ಇಂಡಿಯಾ ಯುವ ಪ್ರತಿಭೆಗಳಿಂದ ನಾಯಕ ವಿರಾಟ್ ಕೊಹ್ಲಿ ಪ್ರಭಾವಿತರಾಗಿದ್ದಾರೆ. ನ್ಯೂಜಿಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ಸೇರಿಕೊಂಡಿರುವ ಶುಭ್‌ನಮ್ ಗಿಲ್ ಕುರಿತು ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಹೇಳಿದ್ದೇನು? ಇಲ್ಲಿದೆ ವಿವರ.

ಮೌಂಟ್‌ಮ್ಯಾಂಗುನಯಿ(ಜ.29): ಟೀಂ ಇಂಡಿಯಾ ಸೇರಿಕೊಂಡಿರುವ ಯುವ ಬ್ಯಾಟ್ಸ್‌ಮನ್ ಶುಭ್‌ಮಾನ್  ಗಿಲ್ ನೆಟ್ಸ್‌ನಲ್ಲಿ ಪ್ರಾಕ್ಟೀಸ್ ಮಾಡುವುದನ್ನು ಗಮನಿಸಿದ್ದೇನೆ. ನಾನು 19 ವರ್ಷದವನಿದ್ದಾಗ ಗಿಲ್‌ಗಿರುವ ಕೌಶಲ್ಯ ಶೇ.10 ರಷ್ಟು ನನ್ನಲ್ಲಿರಲಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಯುವರ್ ಇಂಗ್ಲೀಷ್ ಬಹುತ್ ಅಚ್ಚಾ- ಶಮಿ ಶ್ಲಾಘಿಸಿದ ಸೈಮನ್ !

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ. ಪೃಥ್ವಿ ಶಾ ಅವರಂತೆ ಶುಭ್‌ಮಾನ್ ಅಧ್ಬುತ ಪ್ರತಿಭೆಯಾಗಿದ್ದಾರೆ. ಅವರ ಬ್ಯಾಟಿಂಗ್ ಕೌಶಲ್ಯ ನೋಡಿ ಅದ್ಬುತ ಎನಿಸಿತು. ಗಿಲ್ ಟೀಂ ಇಂಡಿಯಾದ ಭವಿಷ್ಯ ಸ್ಟಾರ್ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ವಯಸ್ಸೂ 35 ದಾಟಿದರೂ ಕ್ರಿಕೆಟ್‌ನಲ್ಲಿ ಇವರದ್ದೇ ದರ್ಬಾರ್!

ಕಿವೀಸ್ ವಿರುದ್ಧದ ಕೊನೆಯ 2 ಏಕದಿನ, ಟಿ20 ಸರಣಿಗೆ ಕೊಹ್ಲಿ ಅಲಭ್ಯರಾಗಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಯುವ ಬ್ಯಾಟ್ಸ್‌ಮನ್ ಶುಭ್‌ಮಾನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.  

click me!