ಸೋಲಿನ ನಿರಾಸೆಯ ನಡುವಿಯೂ ಕೊಹ್ಲಿ ಪಾಲಿಗಿದು ಸಿಹಿ ಸುದ್ದಿ..!

Published : Jul 19, 2018, 03:52 PM IST
ಸೋಲಿನ ನಿರಾಸೆಯ ನಡುವಿಯೂ ಕೊಹ್ಲಿ ಪಾಲಿಗಿದು ಸಿಹಿ ಸುದ್ದಿ..!

ಸಾರಾಂಶ

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ, ಒಟ್ಟು 191 ರನ್‌ಗಳನ್ನು ಗಳಿಸಿದರು. ಈ ಮೂಲಕ 2 ಅಂಕ ಗಳಿಸಿದ ಕೊಹ್ಲಿ ಖಾತೆಯಲ್ಲಿ ಸದ್ಯ911 ಅಂಕಗಳಿವೆ. ಇದು ಅವರ ವೃತ್ತಿಬದುಕಿನ ಶ್ರೇಷ್ಠ ರೇಟಿಂಗ್ ಅಂಕವಾಗಿದೆ. 

ದುಬೈ[ಜು.19]: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬಿಡುಗಡೆಗೊಳಿಸಿರುವ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡದ ನಾಯಕ ಕೊಹ್ಲಿ, ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಏಕದಿನ ಸರಣಿ ಸೋಲಿನ ನಡುವೆಯೂ ಕೊಹ್ಲಿ ಪಾಲಿಗಿದು ಸಿಹಿ ಸುದ್ದಿಯಾಗಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ, ಒಟ್ಟು 191 ರನ್‌ಗಳನ್ನು ಗಳಿಸಿದರು. ಈ ಮೂಲಕ 2 ಅಂಕ ಗಳಿಸಿದ ಕೊಹ್ಲಿ ಖಾತೆಯಲ್ಲಿ ಸದ್ಯ911 ಅಂಕಗಳಿವೆ. ಇದು ಅವರ ವೃತ್ತಿಬದುಕಿನ ಶ್ರೇಷ್ಠ ರೇಟಿಂಗ್ ಅಂಕವಾಗಿದೆ. ಜತೆಗೆ ಸಾರ್ವಕಾಲಿಕ ಅಧಿಕ ರೇಟಿಂಗ್ ಅಂಕಗಳ ಪಟ್ಟಿಯಲ್ಲಿ ಕೊಹ್ಲಿ 6ನೇ ಸ್ಥಾನಕ್ಕೇರಿದ್ದಾರೆ. 1991ರ (ಆಸ್ಟ್ರೇಲಿಯಾದ ಡೀನ್ ಜೋನ್ಸ್ 918 ಅಂಕ) ಬಳಿಕ ಬ್ಯಾಟ್ಸ್ ಮನ್ ಒಬ್ಬ ಗಳಿಸಿರುವ ಅತ್ಯಧಿಕ ರೇಟಿಂಗ್ ಅಂಕ ಇದಾಗಿದೆ.

ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುಲ್ದೀಪ್ ಯಾದವ್ 8 ಸ್ಥಾನಗಳ ಏರಿಕೆ ಕಂಡು 6ನೇ ಸ್ಥಾನ ಪಡೆದಿದ್ದಾರೆ. ಮೊದಲ ಬಾರಿಗೆ ಅವರು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಜಸ್‌ಪ್ರೀತ್ ಬುಮ್ರಾ ನಂ.1 ಏಕದಿನ ಬೌಲರ್ ಆಗಿ ಮುಂದುವರಿದಿದ್ದಾರೆ.

ಅಗ್ರ 5 ಬ್ಯಾಟ್ಸ್’ಮನ್’ಗಳ ರ‍್ಯಾಂಕಿಂಗ್:
1. ವಿರಾಟ್ ಕೊಹ್ಲಿ [911 ಅಂಕ]
2. ಜೋ ರೂಟ್ [818 ಅಂಕ]
3. ಬಾಬರ್ ಅಜಂ [808 ಅಂಕ]
4. ರೋಹಿತ್ ಶರ್ಮಾ [806 ಅಂಕ]
5. ಡೇವಿಡ್ ವಾರ್ನರ್ [ 803 ಅಂಕ]

ಅಗ್ರ 5 ಬೌಲರ್’ಗಳ ರ‍್ಯಾಂಕಿಂಗ್:
1. ಜಸ್’ಪ್ರೀತ್ ಬುಮ್ರಾ [775 ಅಂಕ]
2. ರಶೀದ್ ಖಾನ್ [763 ಅಂಕ]
3. ಹಸನ್ ಅಲಿ [750 ಅಂಕ]
4. ಟ್ರೆಂಟ್ ಬೌಲ್ಟ್ [699 ಅಂಕ]
5. ಜೋಸ್ ಹ್ಯಾಜಲ್’ವುಡ್ [696]

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ