ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಕಾಂಗರೂ ನೆಲದಲ್ಲಿ 2-1 ಅಂತರದಲ್ಲಿ ಬೇಟೆಯಾಡಿದ್ದ ಕೊಹ್ಲಿ ಹುಡುಗರು, ಇದೀಗ 2015ರ ವಿಶ್ವಕಪ್ ರನ್ನರ್’ಅಪ್ ನ್ಯೂಜಿಲೆಂಡ್ ತಂಡವನ್ನು ಅನಾಯಾಸವಾಗಿ ಮಣಿಸಿ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವೆಂದು ಮತ್ತೊಮ್ಮೆ ಟೀಂ ಇಂಡಿಯಾ ಸಾಬೀತುಪಡಿಸಿದೆ.
ಬೆಂಗಳೂರು[ಫೆ.03]: ಭಾರತ ತಂಡವು ನ್ಯೂಜಿಲೆಂಡ್ ಪಡೆಯನ್ನು ತವರಿನಲ್ಲೇ 4-1 ಅಂತರದಲ್ಲಿ ಮಣಿಸಿ ಸರಣಿ ಕೈವಶ ಮಾಡಿಕೊಂಡಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಕಾಂಗರೂ ನೆಲದಲ್ಲಿ 2-1 ಅಂತರದಲ್ಲಿ ಬೇಟೆಯಾಡಿದ್ದ ಕೊಹ್ಲಿ ಹುಡುಗರು, ಇದೀಗ 2015ರ ವಿಶ್ವಕಪ್ ರನ್ನರ್’ಅಪ್ ನ್ಯೂಜಿಲೆಂಡ್ ತಂಡವನ್ನು ಅನಾಯಾಸವಾಗಿ ಮಣಿಸಿ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವೆಂದು ಮತ್ತೊಮ್ಮೆ ಟೀಂ ಇಂಡಿಯಾ ಸಾಬೀತುಪಡಿಸಿದೆ.
ಕಿವೀಸ್ ವಿರುದ್ಧ ಭಾರತಕ್ಕೆ 35 ರನ್ ಗೆಲುವು- 4-1 ಅಂತರದಲ್ಲಿ ಸರಣಿ ಕೈವಶ
undefined
ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದ್ದ ಭಾರತ ನಾಲ್ಕನೇ ಪಂದ್ಯದಲ್ಲಿ ಕೇವಲ 92 ರನ್’ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತ್ತು. ಹಿಂದಿನ ಪಂದ್ಯದ ತಪ್ಪುಗಳನ್ನು ತಿದ್ದಿಕೊಂಡು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಗೆಲುವಿನೊಂದಿಗೆ ಏಕದಿನ ಸರಣಿ ಮುಕ್ತಾಯಗೊಳಿಸಿದೆ.
ಎಬಿಡಿ ಅಪರೂಪದ ದಾಖಲೆ ಸರಿಗಟ್ಟಿದ ಪಾಂಡ್ಯ..!
ಭಾರತ-ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಸರಣಿಯ ಕೆಲವು ಆಸಕ್ತಿಕರ ದಾಖಲೆ/ ಅಂಕಿ-ಅಂಶಗಳು ನಿಮಗಾಗಿ
* ಭಾರತಕ್ಕೆ 4-1 ಅಂತರದಲ್ಲಿ ಸರಣಿ ಜಯ
* ಈ ಸರಣಿಯಲ್ಲಿ ಉಭಯ ತಂಡದ ಯಾರೊಬ್ಬರು ಶತಕ ಸಿಡಿಸಿಲ್ಲ. [ಭಾರತ ಪರ ಅಂಬಟಿ ರಾಯುಡು 90, ಕಿವೀಸ್ ಪರ ರಾಸ್ ಟೇಲರ್ 93 ರನ್ ಸಿಡಿಸಿದ್ದಾರೆ.]. 2013ರಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಏಕದಿನ ಸರಣಿಯಲ್ಲೂ ಭಾರತದ ಯಾವೊಬ್ಬ ಬ್ಯಾಟ್ಸ್’ಮನ್ ಶತಕ ಸಿಡಿಸಿರಲಿಲ್ಲ.
1st ODI- ಭಾರತಕ್ಕೆ 8 ವಿಕೆಟ್’ಗಳ ಜಯ
* ಭಾರತ ಪರ ಅತಿವೇಗವಾಗಿ 100 ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಕೀರ್ತಿಗೆ ಮೊಹಮ್ಮದ್ ಶಮಿ[55] ಪಾತ್ರರಾಗಿದ್ದು. ಇದಕ್ಕೂ ಮೊದಲು ಇರ್ಫಾನ್ ಪಠಾಣ್[59 Innings]. ಒಟ್ಟಾರೆ ವಿಶ್ವಕ್ರಿಕೆಟ್’ನಲ್ಲಿ ರಶೀದ್ ಖಾನ್[44] ಮೊದಲ ಸ್ಥಾನದಲ್ಲಿದ್ದಾರೆ.
* ಮೊದಲ ಏಕದಿನ ಪಂದ್ಯವು ಬಿಸಿಲಿನಿಂದ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.
* ಏಕದಿನ ಕ್ರಿಕೆಟ್’ನಲ್ಲಿ ಅತಿವೇಗವಾಗಿ 5 ಸಾವಿರ ರನ್ ಪೂರೈಸಿದ ವಿಶ್ವದ 4ನೇ ಹಾಗೂ ಭಾರತದ ಎರಡನೇ ಬ್ಯಾಟ್ಸ್’ಮನ್ ಎನ್ನುವ ದಾಖಲೆಯನ್ನು ಶಿಖರ್ ಧವನ್ ಬರೆದಿದ್ದಾರೆ. ಹಾಶೀಂ ಆಮ್ಲಾ [101 ಇನ್ನಿಂಗ್ಸ್] ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ಹಾಗೂ ವೀವ್ ರಿಚರ್ಡ್’ಸನ್ [114] ಜಂಟಿ 2ನೇ ಸ್ಥಾನದಲ್ಲಿದ್ದರೆ, ಬ್ರಿಯಾನ್ ಲಾರಾ& ಶಿಖರ್ ಧವನ್[118] ಜಂಟಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಅತಿವೇಗವಾಗಿ 5 ಸಾವಿರ ರನ್ ಪೂರೈಸಿದ ಎಡಗೈ ಬ್ಯಾಟ್ಸ್’ಮನ್ ಎನ್ನುವ ಶ್ರೇಯವೂ ಲಾರಾ-ಧವನ್ ಪಾಲಾಗಿದೆ. ಒಟ್ಟಾರೆ 5 ಸಾವಿರ ರನ್ ಪೂರೈಸಿದ ಭಾರತದ 13ನೇ ಬ್ಯಾಟ್ಸ್’ಮನ್ ಎನ್ನುವ ಶ್ರೇಯವೂ ಗಬ್ಬರ್ ಸಿಂಗ್ ಪಾಲಾಗಿದೆ.
2nd ODI- ಭಾರತಕ್ಕೆ 90 ರನ್’ಗಳ ಜಯ
* 26/01 ಮೊದಲ ಬಾರಿಗೆ ಏಕದಿನ ಕ್ರಿಕೆಟ್’ನಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ.[1986 ಹಾಗೂ 2000ದಲ್ಲಿ ಅಡಿಲೇಡ್’ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. ಇನ್ನು 2015ರಲ್ಲಿ ಸಿಡ್ನಿಯಲ್ಲಿ ಇದೇ ದಿನ ಆಸ್ಟ್ರೇಲಿಯಾ ವಿರುದ್ಧವೇ ನಡೆದ ಪಂದ್ಯದಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ]
* ಟೀಂ ಇಂಡಿಯಾದ ಟಾಪ್ 5 ಬ್ಯಾಟ್ಸ್’ಮನ್’ಗಳು ಮೊದಲ ಬಾರಿಗೆ 40+ ರನ್ ಬಾರಿಸಿದ ಸಾಧನೆ ಮಾಡಿದ್ದರು. ವಿಶ್ವಕ್ರಿಕೆಟ್’ನಲ್ಲಿ ಬೇರೆ-ಬೇರೆ ತಂಡಗಳು 10 ಬಾರಿ ಈ ಸಾಧನೆ ಮಾಡಿದ್ದವು. ಆದರೆ ಭಾರತ ತಂಡದ ಬ್ಯಾಟ್ಸ್’ಮನ್’ಗಳು ಇದೇ ಮೊದಲ ಬಾರಿಗೆ ಈ ಅಪರೂಪದ ಸಾಧನೆ ಮಾಡಿದ್ದಾರೆ.[ರೋಹಿತ್ 87, ಧವನ್ 66, ಕೊಹ್ಲಿ 43, ರಾಯುಡು 47 ಮತ್ತು ಧೋನಿ 48*]
* ರೋಹಿತ್-ಧವನ್ 14 ಬಾರಿ 100+ ಜತೆಯಾಟ ನಿಭಾಯಿಸುವ ಮೂಲಕ ಸಚಿನ್-ಸೆಹ್ವಾಗ್[13] ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿದರು.
* ಇಂಡೋ-ಕಿವೀಸ್ ಏಕದಿನ ಪಂದ್ಯಗಳಲ್ಲಿ ಗರಿಷ್ಠ ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದರು. ಮೊದಲ ಸ್ಥಾನದಲ್ಲಿ ಸಚಿನ್ ತೆಂಡುಲ್ಕರ್[1750 ರನ್], ವಿರಾಟ್ [1242+] ಇದೀಗ ನಾಥನ್ ಆ್ಯಶ್ಲೆ[1207] ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
* ಭಾರತ ವಿರುದ್ಧ ತವರಿನಲ್ಲಿ ಕೇನ್ ವಿಲಿಯಮ್ಸನ್ ಸತತ ಬಾರಿ 50+ ರನ್ ಸಿಡಿಸಿದ್ದರು. ಆ ನಾಗಾಲೋಟಕ್ಕೆ ಎರಡನೇ ಪಂದ್ಯದಲ್ಲಿ ಬ್ರೇಕ್ ಬಿದ್ದಿತು.
3rd ODI- ಭಾರತಕ್ಕೆ 7 ವಿಕೆಟ್’ಗಳ ಜಯ
* 2 ಪಂದ್ಯ ಬಾಕಿಯಿರುವಾಗಲೇ ಭಾರತಕ್ಕೆ ಸರಣಿ ಜಯ. ವಿರಾಟ್ 63 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 47 ಬಾರಿ ಗೆಲುವಿನ ಸಿಹಿ ಕಂಡಿದ್ದಾರೆ. 63 ಪಂದ್ಯಗಳ ಬಳಿಕ ಅತಿ ಹೆಚ್ಚು ಪಂದ್ಯ ಜಯಿಸಿದ ದಾಖಲೆ ರಿಕಿ ಪಾಂಟಿಂಗ್& ಕ್ಲೈವ್ ಲಾಯ್ಡ್[50] ಹೆಸರಿನಲ್ಲಿದೆ.
* ಮೊದಲೆರಡು ಪಂದ್ಯಗಳಲ್ಲಿ ನರ್ವಸ್ 40 ರನ್’ಗೆ ಔಟ್ ಆಗಿದ್ದ ಕೊಹ್ಲಿ ಕೊನೆಗೂ ಅರ್ಧಶತಕ ಸಿಡಿಸಿದರು. ಈ ಮೂಲಕ ಭಾರತ ಪರ ’ಲಿಸ್ಟ್ ಎ’ ಕ್ರಿಕೆಟ್’ನಲ್ಲಿ 100 ಅರ್ಧಶತಕ ಪೂರೈಸಿದ ಸಾಧನೆ ಮಾಡಿದರು.
* ರೋಹಿತ್ ಶರ್ಮಾ ಹಾಗೂ ರಾಸ್ ಟೇಲರ್ ಲಿಸ್ಟ್ ಎ ಕ್ರಿಕೆಟ್’ನಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.
* ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ 16 ಬಾರಿ ಶತಕದ ಜತೆಯಾಟವಾಡುವ ಮೂಲಕ ಗಿಲ್’ಕ್ರಿಸ್ಟ್-ಹೇಡನ್ ದಾಖಲೆ ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್-ಗಂಗೂಲಿ[26] ಮೊದಲ ಸ್ಥಾನದಲ್ಲಿದ್ದರೆ, ದಿಲ್ಷ್ಯಾನ್-ಸಂಗಕ್ಕರ[20]ರ ಬಳಿಕ ರೋಹಿತ್-ಕೊಹ್ಲಿ ಜೋಡಿ ಜಂಟಿ ಮೂರನೇ ಸ್ಥಾನಕ್ಕೇರಿದೆ.
* ನ್ಯೂಜಿಲೆಂಡ್ ಪರ ಗರಿಷ್ಠ ಕ್ಯಾಚ್ ಹಿಡಿದ ಫೀಲ್ಡರ್ ಎನ್ನುವ ಶ್ರೇಯಕ್ಕೆ ರಾಸ್ ಟೇಲರ್[134] ಪಾತ್ರರಾಗಿದ್ದಾರೆ. ಈ ಮೊದಲು ಸ್ಟಿಪನ್ ಫ್ಲೆಮಿಂಗ್ 133 ಕ್ಯಾಚ್ ಹಿಡಿದಿದ್ದರು.
4th ODI- ನ್ಯೂಜಿಲೆಂಡ್’ಗೆ 8 ವಿಕೆಟ್’ಗಳ ಜಯ
* ಭಾರತ 92 ರನ್’ಗಳಿಗೆ ಆಲೌಟ್. ಇದು ಏಕದಿನ ಕ್ರಿಕೆಟ್’ನಲ್ಲಿ ಭಾರತದ 7ನೇ ಅತಿ ಕಳಪೆ ಮೊತ್ತ. ಈ ಮೊದಲು ಭಾರತ ತಂಡವು 2000ರಲ್ಲಿ ಶ್ರೀಲಂಕಾ ವಿರುದ್ಧ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಕೇವಲ 54 ರನ್’ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತ್ತು.
* ಭಾರತ ವಿರುದ್ಧ ನ್ಯೂಜಿಲೆಂಡ್ ಅತಿ ಹೆಚ್ಚು ಬಾಲ್[212] ಅಂತರದ ಗೆಲುವು ದಾಖಲಿತು.
* ಭಾರತದ 10ನೇ ಕ್ರಮಾಂಕದ ಬ್ಯಾಟ್ಸ್’ಮನ್ ಯುಜುವೇಂದ್ರ ಚೆಹಲ್[18 ರನ್] ಭಾರತ ಪರ ಗರಿಷ್ಠ ರನ್ ಸಿಡಿಸಿದ ಸಾಧನೆ ಮಾಡಿದ್ದರು.
5th ODI- ಭಾರತಕ್ಕೆ 35 ರನ್’ಗಳ ಜಯ
* ರೋಹಿತ್ ಶರ್ಮಾ 10 ಸರಣಿಗಳಲ್ಲಿ ಶತಕ ಸಿಡಿಸಿ ಮನ್ನುಗ್ಗುತ್ತಿದ್ದರು. ರೋಹಿತ್ ಸರಣಿ ಶತಕದ ನಾಗಾಲೋಟಕ್ಕೆ ತೆರೆಬಿದ್ದಿದೆ.
* ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್’ನಲ್ಲಿ 4ನೇ ಬಾರಿಗೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಕಳೆದೆರಡು ದಶಕಗಳಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಶ್ರೇಯ ಪಾಂಡ್ಯ ಪಾಲಾಗಿದೆ. ಈ ಮೊದಲು ಎಬಿ ಡಿವಿಲಿಯರ್ಸ್ ಈ ಸಾಧನೆ ಮಾಡಿದ್ದರು.
* ತಂಡದ ಮೊತ್ತ 20 ರನ್’ಗಳಾಗುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡು ಬಳಿಕ 250+ರನ್ ಮೊತ್ತವನ್ನು ಎರಡನೇ ಬಾರಿಗೆ ಬಾರಿಸಿದ ಸಾಧನೆ ಮಾಡಿದೆ. ಈ ಮೊದಲು 1983ರ ಏಕದಿನ ವಿಶ್ವಕಪ್’ನಲ್ಲಿ ಭಾರತ ತಂಡವು ಜಿಂಬಾಬ್ವೆ ಎದುರು ಕೇವಲ 9 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ಕಪಿಲ್ ದೇವ್ ಶತಕದ ನೆರವಿನಿಂದ ಭಾರತ 8 ವಿಕೆಟ್ ನಷ್ಟಕ್ಕೆ 266 ರನ್ ಬಾರಿಸಿತ್ತು. ಇಂದಿನ ಪಂದ್ಯದಲ್ಲಿ ಭಾರತ 18 ರನ್’ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ಟೀಂ ಇಂಡಿಯಾ 252 ರನ್ ಬಾರಿಸಿ ಸರ್ವಪತನ ಕಂಡಿತು.