
ದುಬೈ(ಜೂ.23): ಕ್ರಿಕೆಟ್ ರಾಷ್ಟ್ರಗಳಲ್ಲಿ ಈಗ ಎಲ್ಲಿ ನೋಡಿದರೂ ಲೀಗ್ ಟೂರ್ನಿಗಳದ್ದೇ ಮೇಲುಗೈ. ತಮ್ಮ ತಂಡಕ್ಕಿಂತ ಹೆಚ್ಚಾಗಿ ಆಟಗಾರರು ಲೀಗ್ ಟೂರ್ನಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇದೀಗ ಐಪಿಎಲ್ ಸೇರಿದಂತೆ ಇತರ ಲೀಗ್ ಟೂರ್ನಿ ಆಡೋ ಕ್ರಿಕೆಟಿಗರಿಗೆ ಶಾಕ್ ನೀಡಲು ಐಸಿಸಿ ಯೋಜನೆ ರೂಪಿಸುತ್ತಿದೆ.
ಭಾರತದಲ್ಲಿ ಐಪಿಎಲ್, ಆಸ್ಟ್ರೇಲಿಯಾದಲ್ಲಿ ಬಿಗ್‌ಬ್ಯಾಶ್, ವೆಸ್ಟ್ಇಂಡೀಸ್‌ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಹಲವು ಲೀಗ್ ಟೂರ್ನಿಗಳಲ್ಲಿ ವಿವಿದ ದೇಶದ ಕ್ರಿಕೆಟಿಗರು ಸಕ್ರೀಯರಾಗಿದ್ದಾರೆ. ಆದರೆ ಐಸಿಸಿಯ ನೂತನ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ನಿಯದ ಪ್ರಕಾರ, ಒರ್ವ ಕ್ರಿಕೆಟಿಗನಿಗೆ ಒಂದೇ ವಿದೇಶಿ ಲೀಗ್ ಟೂರ್ನಿ ಆಡಲು ಅನುಮತಿ ಸಿಗಲಿದೆ.
ತವರಿನ ಲೀಗ್ ಟೂರ್ನಿ ಹೊರತು ಪಡಿಸಿ, ಎಲ್ಲಾ ವಿದೇಶಿ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುವಂತಿಲ್ಲ. ಸದ್ಯ ಕ್ರಿಕೆಟಿಗರು ಐಪಿಎಲ್, ಪಾಕಿಸ್ತಾನ ಸೂಪರ್ ಲೀಗ್, ಬಿಗ್‌ಬ್ಯಾಶ್ ಸೇರಿದಂತೆ ಯಾವುದೇ ಟೂರ್ನಿಯಲ್ಲಿ ಪಾಲ್ಗೊಳ್ಳೋ ಅವಕಾಶವಿದೆ. ಆದರೆ ನೂತನ ನಿಯಮ ಜಾರಿಯಾದರೆ, ವಿದೇಶಿ ಕ್ರಿಕೆಟಿಗ ಕೇವಲ ಒಂದು ಲೀಗ್ ಟೂರ್ನಿಯನ್ನ ಆಯ್ಕೆ ಮಾಡಬಹುದಾಗಿದೆ.
ವೆಸ್ಟ್ಇಂಡೀಸ್ ಕ್ರಿಕೆಟಿಗ ಕ್ರೀಸ್ ಗೇಲ್ ಸೇರಿದಂತೆ ಹಲವು ಕ್ರಿಕೆಟಿಗರು ಐಪಿಎಲ್, ಪಿಎಸ್‌ಎಲ್, ಬಿಗ್ ಬ್ಯಾಶ್ ಸೇರಿದಂತೆ ಇನ್ನಿತರ ಲೀಗ್ ಟೂರ್ನಿ ಆಡುತ್ತಿದ್ದಾರೆ. ಆದರೆ ನೂತನ ನಿಯಮ ಜಾರಿಯಾದರೆ, ಗೇಲ್ ಯಾವುದಾದರೊಂದು ಲೀಗ್ ಟೂರ್ನಿ ಆಯ್ಕೆ ಮಾಡಬೇಕಾಗಿದೆ.
ಐಸಿಸಿ ನೂತನ ನಿಯಮ ಮುಂದಿನವಾರ ನಡೆಯಲಿರುವ ಐಸಿಸಿ ಸಭೆಯಲ್ಲಿ ಚರ್ಚೆಗೆ ಒಳಪಡಲಿದೆ. ಈ ನಿಯಮಕ್ಕೆ ಹಲವು ಕ್ರಿಕೆಟ್ ಮಂಡಳಿಗಳು ವಿರೋಧ ವ್ಯಕ್ತಪಡಿಸಿದೆ. ಆದರೆ ಇದರಿಂದ ಭಾರತೀಯ ಕ್ರಿಕೆಟಿಗರು ಹಾಗೂ ಐಪಿಎಲ್ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.