ಫಿಫಾ ವಿಶ್ವಕಪ್ 2018: ಅರ್ಜೆಂಟೀನಾ ವೈಫಲ್ಯಕ್ಕೆ ಮೆಸ್ಸಿ ಕಾರಣವಲ್ಲ,ಮತ್ಯಾರು?

Published : Jun 23, 2018, 03:20 PM ISTUpdated : Jun 23, 2018, 03:21 PM IST
ಫಿಫಾ ವಿಶ್ವಕಪ್ 2018: ಅರ್ಜೆಂಟೀನಾ ವೈಫಲ್ಯಕ್ಕೆ ಮೆಸ್ಸಿ ಕಾರಣವಲ್ಲ,ಮತ್ಯಾರು?

ಸಾರಾಂಶ

ಫಿಫಾ ವಿಶ್ವಕಪ್ ಟೂರ್ನಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡಗಳಲ್ಲಿ ಅರ್ಜೆಂಟೀನಾ ಮುಂಚೂಣಿಯಲ್ಲಿದೆ. ಲಿಯೋನಲ್ ಮೆಸ್ಸಿ ಸೇರಿದಂತೆ ಸ್ಟಾರ್ ಪ್ಲೇಯರ್‌ಗಳ ದಂಡೇ ಅರ್ಜೆಂಟೀನಾ ತಂಡದಲ್ಲಿದೆ. ಇಷ್ಟಾದರೂ ತಂಡ ಮಾತ್ರ ಗೆಲುವಿನ ದಡ ಸೇರುತ್ತಿಲ್ಲ. ಇದಕ್ಕೆ ಕಾರಣ ಮೆಸ್ಸಿ ಅಲ್ಲಾ. ಹಾಗಾದರೆ ಮತ್ಯಾರು? ಇಲ್ಲಿದೆ ವಿವರ 

ರಷ್ಯಾ(ಜೂ.23): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಪ್ರದರ್ಶನ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಮೊದಲ ಪಂದ್ಯದಲ್ಲಿ ಐಸ್‌ಲೆಂಡ್ ವಿರುದ್ದ 1-1 ಅಂತರದಲ್ಲಿ ಡ್ರಾ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಕ್ರೋವೇಶಿಯಾ ವಿರುದ್ಧ 0-3 ಅಂತರದಲ್ಲಿ ಸೋಲು ಅನುಭವಿಸಿತ್ತು. 

ಅರ್ಜೆಂಟೀನಾ ಸೋಲಿಗೆ ಲಿಯೋನಲ್ ಮೆಸ್ಸಿ ಕಾರಣ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಮೊದಲ ಪಂದ್ಯದಲ್ಲಿ ಪೆನಾಲ್ಟಿ ಅವಕಾಶ ಕಳೆದುಕೊಂಡ ಮೆಸ್ಸಿ, ದ್ವಿತೀಯ ಪಂದ್ಯದಲ್ಲಿ ಮೆಸ್ಸಿ ಸಪ್ಪೆಯಾಗಿದ್ದರು. ಇದೇ ಅರ್ಜೆಂಟೀನಾ ಸೋಲಿಗೆ ಕಾರಣ ಅನ್ನೋ ವಾದವೂ ಹುಟ್ಟಿಕೊಂಡಿದೆ.

ಅಸಲಿಗೆ ಅರ್ಜೆಂಟೀನಾ ಸೋಲಿಗೆ ಮೆಸ್ಸಿ ಕಾರಣವಲ್ಲ, ತಂಡದ ಮಿಡ್‌ಫೀಲ್ಡ್ ಕಾರಣ. ಮಿಡ್‌ಫೀಲ್ಡರ್‌ಗಳು  ಮೆಸ್ಸಿಗೆ ಸರಿಯಾಗಿ ಬಾಲ್ ಪಾಸ್ ಮಾಡಿಲ್ಲ. ಇಡಿ ಟೂರ್ನಿಯಲ್ಲಿ ಮೆಸ್ಸಿ ಬಾಲ್‌ಗಾಗಿ ಕಾಯುಬೇಕಾಯಿತೇ ಹೊರತು ಸೂಕ್ತ ಸಂದರ್ಭದಲ್ಲಿ ಅಕ್ಯೂರೆಸಿ ಪಾಸ್‌ಗಳು ಮಾತ್ರ ಬರಲೇ ಇಲ್ಲ. 

ಅರ್ಜೆಂಟೀನಾ ಮಿಡ್‌ಫೀಲ್ಡ್ ವೈಫಲ್ಯವೇ, ತಂಡದ ಸೋಲಿಗೆ ಕಾರಣ. ಹೀಗಾಗಿ ಲಿಯೋನಲ್ ಮೆಸ್ಸಿ ಮೇಲೆ ಆರೋಪ ಹೊರಿಸಿ ಪ್ರಯೋಜನವಿಲ್ಲ ಎಂದು  ಭಾರತದ ಮಾಜಿ ನಾಯಕ ಬೈಚುಂಗ್ ಭುಟಿಯಾ ಹೇಳಿದ್ದಾರೆ. ಮುಂದಿನ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ನೈಜೀರಿಯಾ ಮುಖಾಮುಖಿಯಾಗಲಿದೆ. ಈ ಪಂದ್ಯ ಅರ್ಜೆಂಟೀನಾದ ಫಿಫಾ ಭವಿಷ್ಯ ನಿರ್ಧರಿಸಲಿದೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!