ಪೆಪ್ಸಿಕೋ ಅಧ್ಯಕ್ಷೆ ಇಂದಿರಾ ನೂಯಿಗೆ ಕ್ರಿಕೆಟ್ ಸಮಿತಿಯಲ್ಲಿ ಪ್ರಮುಖ ಸ್ಥಾನ

By Suvarna Web deskFirst Published Feb 9, 2018, 4:46 PM IST
Highlights

ಜಾಗತಿಕ ಮಟ್ಟದ ತಂಪು ಪಾನೀಯಗಳಲ್ಲಿ ಒಂದಾಗಿರುವ ಪೆಪ್ಸಿಕೋ ಸಂಸ್ಥೆಗೆ 2006ರಲ್ಲಿ ಸಿಇಒ ಹಾಗೂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು

ದುಬೈ(ಫೆ.09): ಪೆಪ್ಸಿಕೋ ಅಧ್ಯಕ್ಷೆ ಹಾಗೂ ಸಿಇಒ ಕರ್ನಾಟಕ ಮೂಲದ ಇಂದಿರಾ ನೂಯಿ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯಲ್ಲಿ  ಪ್ರಮುಖ ಸ್ಥಾನ ನೀಡಲಾಗಿದ್ದು,ಮೊದಲ ಸ್ವತಂತ್ರ ಮಹಿಳಾ ನಿರ್ದೇಶಕಿಯನ್ನಾಗಿ ಐಸಿಸಿ ಮಂಡಳಿ ನೇಮಿಸಿದೆ.

ನೋಯಿ ಅವರು ಈ ಮಂಡಳಿಗೆ ಜೂನ್ 2018ಕ್ಕೆ ನಿರ್ದೇಶಕಿಯಾಗಿ ನೇಮಕವಾಗಲಿದ್ದು, ಇಂದಿನ ಸಭೆಯಲ್ಲಿ ಮಂಡಳಿ ಅವಿರೋಧವಾಗಿ ಆಯ್ಕೆ ಮಾಡಿದೆ. ಸ್ವತಂತ್ರ ನಿರ್ದೇಶಕರು ಮಹಿಳೆಯರೆ ಆಗಿರಬೇಕೆಂದು ಐಸಿಸಿ ಪೂರ್ಣಾವಧಿ ಮಂಡಳಿ 2017 ಜೂನ್'ನಲ್ಲಿ ಅಂಗಿಕರಿಸಲಾಗಿತ್ತು.

ಜಾಗತಿಕ ನಾಯಕಿಯಾಗಿರುವ ಇಂದಿರಾ ನೂಯಿ ಅವರು ಫಾರ್ಚೂ'ನ್ ನಿಯತಕಾಲಿಕೆಯಲ್ಲಿ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯಾಗಿ ಸತತವಾಗಿ ಸ್ಥಾನಪಡೆದುಕೊಳ್ಳುತ್ತಾ ಬಂದಿದ್ದಾರೆ. ಜಾಗತಿಕ ಮಟ್ಟದ ತಂಪು ಪಾನೀಯಗಳಲ್ಲಿ ಒಂದಾಗಿರುವ  ಪೆಪ್ಸಿಕೋ ಸಂಸ್ಥೆಗೆ 2006ರಲ್ಲಿ ಸಿಇಒ ಹಾಗೂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಿರ್ದೇಶಕಿ ಸ್ಥಾನಕ್ಕೆ ನೇಮಕ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ನಾನು ಕ್ರಿಕೆಟ್'ಅನ್ನು ಪ್ರೀತಿಸುತ್ತೇನೆ. ಯೌವ್ವನದಲ್ಲಿ ಹಾಗೂ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನಾನೂ ಕ್ರಿಕೆಟ್ ಆಡಿದ್ದೇನೆ. ಕ್ರಿಕೆಟ್ ಅಭಿವೃದ್ಧಿಗೆ ತನ್ನ ಕೈಲಾದ ಸೇವೆ ಮಾಡುವುದಾಗಿ' ತಿಳಿಸಿದ್ದಾರೆ.ಸ್ವತಂತ್ರ ನಿರ್ದೇಶಕರ ಅವಧಿ ಎರಡು ವರ್ಷಗಳಾಗಿದ್ದು, ಆದಾಗ್ಯೂ ಅವರು ಆರು ವರ್ಷಗಳವರೆಗೂ ನೇಮಕಗೊಳ್ಳಬಹುದು.

click me!