2 ಬಾರಿ ದ್ವಿಶತಕ ಸಿಡಿಸಿದ ರೋಹಿತ್ ಶರ್ಮಾ ಮುಂದಿನ ಟಾರ್ಗೆಟ್ ಏನು ಗೊತ್ತಾ.?

By Suvarna Web DeskFirst Published Nov 14, 2017, 4:04 PM IST
Highlights

ನಾನು 264 ರನ್ ಬಾರಿಸಿದ ಬಳಿಕ ಕೋಚ್ ಡಂಕನ್ ಫ್ಲೆಚರ್ 'ನೀವು ಆರಾಮವಾಗಿ ಒನ್'ಡೇಯಲ್ಲಿ ತ್ರಿಶತಕ ಸಿಡಿಸಬಹುದು' ಎಂದಿದ್ದರು.

ಏಕದಿನ ಕ್ರಿಕೆಟ್'ನಲ್ಲಿ ಎರಡೆರಡು ಬಾರಿ ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್'ಮನ್ ಎನಿಸಿಕೊಂಡಿರುವ ರೋಹಿತ್ ಶರ್ಮಾ ತಮ್ಮ ಮುಂದಿನ ಟಾರ್ಗೆಟ್ ಬಗ್ಗೆ ತುಟಿಬಿಚ್ಚಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ ಹಾಗೂ 2014ರಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಬಾರಿಸಿರುವ ರೋಹಿತ್ ಬ್ರೇಕ್'ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಇದುವರೆಗೆ ನೀವು ಬಾರಿಸಿರುವ 2 ದ್ವಿಶತಕಗಳಲ್ಲಿ ನಿಮಗಿಷ್ಟವಾದದ್ದು ಯಾವುದು ಎಂಬ ಪ್ರಶ್ನಗೆ, ಎರಡೂ ದ್ವಿಶತಕಗಳು ನನ್ನ ಪಾಲಿಗೆ ಮಹತ್ವದೆನಿಸಿದೆ. ಮೊದಲನೆಯದ್ದು ವಿರಾಟ್ ಹಾಗೂ ಧವನ್ ಔಟ್ ಆಗಿದ್ದಾಗ ಆ ದ್ವಿಶತಕ ಮೂಡಿಬಂದಿತ್ತು. ಎರಡನೆಯದ್ದು ನಾನು ಗಾಯದಿಂದ ಸುಧಾರಿಸಿಕೊಂಡ ಬಳಿಕ ವಿಶ್ವಕಪ್'ಗೆ ತಂಡದಲ್ಲಿ ಸ್ಥಾನಗಿಟ್ಟಿಸಲು ನೆರವಾಯಿತು ಎಂದಿದ್ದಾರೆ.

ನಾನು 264 ರನ್ ಬಾರಿಸಿದ ಬಳಿಕ ಕೋಚ್ ಡಂಕನ್ ಫ್ಲೆಚರ್ 'ನೀವು ಆರಾಮವಾಗಿ ಒನ್'ಡೇಯಲ್ಲಿ ತ್ರಿಶತಕ ಸಿಡಿಸಬಹುದು' ಎಂದಿದ್ದರು.

ನಾನು ಬ್ಯಾಟಿಂಗ್'ಗೆ ಕ್ರೀಸ್'ಗೆ ಇಳಿದಾಗಲೆಲ್ಲಾ ನಾನು ತ್ರಿಶತಕ ಬಾರಿಸಲಿ ಎಂದು ಜನರು ಬಯಸುತ್ತಾರೆ. ನಾನು ಡೀಪ್ ಫೀಲ್ಡಿಂಗ್'ನಲ್ಲಿರಲಿ, ಇಲ್ಲವೇ ಏರ್'ಫೋರ್ಟ್'ನಲ್ಲಿ ಇದ್ದಾಗಲೆಲ್ಲಾ ತ್ರಿಶತಕ ಬಾರಿಸುವುದು ಯಾವಾಗ ಎಂದು ಕೇಳುತ್ತಾರೆ. ತ್ರಿಶತಕ ಬಾರಿಸುವುದು ಊಟ ಮಾಡಿದಷ್ಟು ಸುಲಭ ಎಂದು ಭಾವಿಸುತ್ತಾರೆ. ನಮ್ಮ ದೇಶದಲ್ಲಿ ಜನರು ನಮ್ಮ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತ್ರಿಶತಕ ಬಾರಿಸಲು ಪ್ರಯತ್ನಿಸುತ್ತೇನೆಂದು ರೋಹಿತ್ ಹೇಳಿದ್ದಾರೆ.

click me!