ಟೀಂ ಇಂಡಿಯಾಗೆ ಕಮ್'ಬ್ಯಾಕ್ ಮಾಡಲು ಮಿಥುನ್ ಪ್ಲಾನ್..?

By Suvarna Web DeskFirst Published Nov 14, 2017, 1:16 PM IST
Highlights

2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮಿಥುನ್, 2011ರಲ್ಲಿ ಕೊನೆ ಬಾರಿಗೆ ಟೀಂ ಇಂಡಿಯಾದಲ್ಲಿ ಆಡಿದ್ದರು. ‘ನಾನು ಅತ್ಯುತ್ತಮವಾಗಿ ಬೌಲ್ ಮಾಡುತ್ತಿದ್ದೇನೆ. ಇದೇ ಲಯ ಉಳಿಸಿಕೊಂಡರೆ ಭಾರತ ತಂಡದ ಕದ ತಟ್ಟಲು ಸಾಧ್ಯವಾಗಲಿದೆ ಎಂದು ಮಿಥುನ್ ಹೇಳಿದರು.

ಬೆಂಗಳೂರು(ನ.14): ಪ್ರಸಕ್ತ ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್, ಭಾರತ ತಂಡಕ್ಕೆ ಮರಳುವ ಕನಸು ಕಾಣುತ್ತಿದ್ದಾರೆ.

2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮಿಥುನ್, 2011ರಲ್ಲಿ ಕೊನೆ ಬಾರಿಗೆ ಟೀಂ ಇಂಡಿಯಾದಲ್ಲಿ ಆಡಿದ್ದರು. ‘ನಾನು ಅತ್ಯುತ್ತಮವಾಗಿ ಬೌಲ್ ಮಾಡುತ್ತಿದ್ದೇನೆ. ಇದೇ ಲಯ ಉಳಿಸಿಕೊಂಡರೆ ಭಾರತ ತಂಡದ ಕದ ತಟ್ಟಲು ಸಾಧ್ಯವಾಗಲಿದೆ ಎಂದು ಮಿಥುನ್ ಹೇಳಿದರು.

ಈ ಋತುವಿನಲ್ಲಿ ಬೌಲಿಂಗ್ ಸುಧಾರಿಸುವುದಕ್ಕೆ ಕಾರಣವೇನು ಎನ್ನುವುದಕ್ಕೆ ಉತ್ತರಿಸಿದ ಮಿಥುನ್ ‘ನನ್ನ ಬೌಲಿಂಗ್ ಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಜತೆಗೆ ಫಿಟ್ನೆಸ್‌'ನತ್ತ ಹೆಚ್ಚು ಗಮನ ಹರಿಸುತ್ತಿದ್ದು, ಯೋಗದ ಸಹಾಯ ಪಡೆಯುತ್ತಿದ್ದೇನೆ. ಈ ಎಲ್ಲವೂ ನನ್ನ ಆಟದ ಗುಣಮಟ್ಟ ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ’ ಎಂದರು.

ಬೌಲಿಂಗ್ ಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳ ಕುರಿತು ವಿವರಿಸಿದ ಮಿಥುನ್ ‘ಬೌಲಿಂಗ್ ರನ್ ಅಪ್ ಹಾಗೂ ಚೆಂಡನ್ನು ಎಸೆಯುವಾಗ ಮಣಿಕಟ್ಟಿನ ಸ್ಥಿತಿ ಬದಲಾಯಿಸಿಕೊಂಡಿದ್ದೇನೆ. ಈ ಪ್ರಯತ್ನದಲ್ಲಿ ನನಗೆ ಹಿರಿಯ ವೇಗಿ ಎಸ್. ಅರವಿಂದ್ ನೆರವು ನೀಡಿದರು’ ಎಂದು ಮಿಥುನ್ ಹೇಳಿದರು

click me!