
ಲಂಡನ್(ಜೂ.06): ರಾಷ್ಟ್ರೀಕೃತ ಬ್ಯಾಂಕ್'ಗಳಿಗೆ ಕೋಟ್ಯಾಂತರ ರುಪಾಯಿ ಸಾಲ ಮರುಪಾವತಿ ಮಾಡದೇ ಲಂಡನ್'ಗೆ ಪಲಾಯನ ಮಾಡಿರುವ ಮದ್ಯದ ದೊರೆ ವಿಜಯ್ ಮಲ್ಯ ಮತ್ತೀಗ ಸುದ್ದಿಯಲ್ಲಿದ್ದಾರೆ.
ಇದೇ ಜೂನ್ ನಾಲ್ಕರಂದು ಎಡ್ಜ್'ಬಾಸ್ಟನ್'ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹಾಜರಾಗುವ ಮೂಲಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಹಾಗೂ ಟೀಕೆಗೆ ಗುರಿಯಾಗಿದ್ದರು. ಆದರೆ ಇದೀಗ ಮಲ್ಯ ಭಾರತೀಯ ಮಾಧ್ಯಮಗಳಿಗೆ ಸೆಡ್ಡುಹೊಡೆದಿದ್ದು, ಟೀಂ ಇಂಡಿಯಾ ಆಡುವ ಎಲ್ಲಾ ಪಂದ್ಯಗಳಿಗೂ ತಾವು ಹಾಜರಾಗುವುದಾಗಿ ಟ್ವೀಟ್ ಮಾಡಿದ್ದಾರೆ
‘ನಾನು ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಆದರೆ ನಾನು ಭಾರತ ಆಡುವ ಎಲ್ಲಾ ಪಂದ್ಯಗಳಿಗೂ ತೆರಳಿ, ತಂಡವನ್ನು ಹುರಿದುಂಬಿಸುತ್ತೇನೆ’ ಎಂದು ಮಲ್ಯ ಬರೆದಿದ್ದಾರೆ.
ಸುಮಾರು 9 ಸಾವಿರ ಕೋಟಿ ಸಾಲದಲ್ಲಿರುವ ಮಲ್ಯ 2016ರ ಮಾರ್ಚ್ 2ರಂದು ಭಾರತವನ್ನು ತೊರೆದಿದ್ದರು. ಏಪ್ರಿಲ್ 18, 2017ರಂದು ಸ್ಕಾಟ್'ಲೆಂಡ್ ಯಾರ್ಡ್ ಪೊಲೀಸರು ಮಲ್ಯರನ್ನು ಬಂಧಿಸಿದ್ದರು. ಆದರೆ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಎಡ್ಜ್'ಬಾಸ್ಟನ್'ನಲ್ಲಿ ನಡೆದ ಪಂದ್ಯದಲ್ಲಿ ಮಲ್ಯ ವಿಐಪಿ ಸ್ಟ್ಯಾಂಡ್'ನಲ್ಲಿ ಕಾಣಿಸಿಕೊಳ್ಳುವ ಮೂಲಕ ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಚರ್ಚೆಗೆ ಆಹಾರವಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.