
ನೇಪಿಯರ್(ಜ.23): ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅದ್ಬುತ ಬೌಲಿಂಗ್ ದಾಳಿಯಿಂದ ಭಾರತದ ಸುಲಭ ಗೆಲುವು ದಾಖಲಿಸಿತು. ಟೆಸ್ಟ್ ಬಳಿಕ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಕರಾರುವಕ್ ದಾಳಿ ಸಂಘಟಿಸಿದ ಶಮಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಕುಲ್ದೀಪ್–ಶಮಿ ಮ್ಯಾಜಿಕ್: ಅಲ್ಪ ಮೊತ್ತಕ್ಕೆ ಕಿವೀಸ್ ಆಲೌಟ್
ಮೊದಲ ಏಕದಿನದಲ್ಲಿ 3 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಮೊಹಮ್ಮದ್ ಶಮಿಗೆ ನಿಗಧಿತ ಓವರ್ ಕ್ರಿಕೆಟ್‌ಗಿಂತ ಟೆಸ್ಟ್ ಪಂದ್ಯವೇ ಹೆಚ್ಚು ಇಷ್ಟ ಎಂದಿದ್ದಾರೆ. 2018ರಲ್ಲಿ ಸತತ ಟೆಸ್ಟ್ ಪಂದ್ಯ ಆಡೋ ಮೂಲಕ ಆತ್ಮವಿಶ್ವಾಸ ಮರಳಿತು ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾ ಅಬ್ಬರಕ್ಕೆ ಕಿವೀಸ್ ಧೂಳೀಪಟ-ಸರಣಿ ಶುಭಾರಂಭ
2015ರ ವಿಶ್ವಕಪ್ ಟೂರ್ನಿ ಬಳಿಕ ಇಂಜುರಿಗೆ ತುತ್ತಾದ ಶಮಿ ಬರೋಬ್ಬರಿ 2 ವರ್ಷಗಳ ಕಾಲ ತಂಡದಿಂದ ಹೊರಗಿದ್ದರು. 2016ರ ಟಿ20 ವಿಶ್ವಕಪ್ ಮೂಲಕ ಮತ್ತೆ ತಂಡ ಸೇರಿಕೊಂಡಿದ್ದರು. ಇದೀಗ 2019ರ ವಿಶ್ವಕಪ್ ಟೂರ್ನಿಗೂ ಆಯ್ಕೆಯಾಗೋ ಎಲ್ಲಾ ಸಾಧ್ಯತೆಗಳಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.