1983ರ ಫೈನಲ್‌ಗೆ ಶಾಂಪೇನ್‌ ಕೊಂಡೊಯ್ದಿದ್ದರಂತೆ ಕಪಿಲ್ ದೇವ್

Published : May 25, 2019, 01:56 PM IST
1983ರ ಫೈನಲ್‌ಗೆ ಶಾಂಪೇನ್‌ ಕೊಂಡೊಯ್ದಿದ್ದರಂತೆ ಕಪಿಲ್ ದೇವ್

ಸಾರಾಂಶ

1983ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕರಾಗಿದ್ದ ಕಪಿಲ್ ದೇವ್ ತಮ್ಮ ಬ್ಯಾಗ್’ನಲ್ಲಿ ಶಾಂಪೇನ್‌ ಬಾಟಲ್‌ ತೆಗೆದುಕೊಂಡು ಹೋಗಿದ್ದರಂತೆ. ಯಾಕೆ ಹೀಗೆ ಮಾಡಿದ್ದರು ಎನ್ನುವುದನ್ನು ಅವರ ಮಾತುಗಳಲ್ಲೇ ಕೇಳಿ...

ನವದೆಹಲಿ(ಮೇ.25): 1983ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದು ಇತಿಹಾಸ ಬರೆದಿದ್ದ ಭಾರತ ತಂಡದ ನಾಯಕರಾಗಿದ್ದ ಕಪಿಲ್‌ ದೇವ್‌ ಕುತೂಹಲಕಾರಿ ವಿಷಯ ಬಹಿರಂಗಪಡಿಸಿದ್ದಾರೆ. 

ಫೈನಲ್‌ನಲ್ಲಿ ಆಡಲು ಕ್ರೀಡಾಂಗಣಕ್ಕೆ ತೆರಳುವ ವೇಳೆ ಕಿಟ್‌ ಬ್ಯಾಗ್‌ನಲ್ಲಿ ಶಾಂಪೇನ್‌ ಬಾಟಲ್‌ ಇಟ್ಟುಕೊಂಡು ಹೋಗಿದ್ದಾಗಿ ತಿಳಿಸಿದ್ದಾರೆ. ‘ನಾವು ವಿಶ್ವಕಪ್‌ ಗೆಲ್ಲುತ್ತೇವೆ ಎನ್ನುವ ನಂಬಿಕೆ ನನಗಿತ್ತು. ನಾಯಕನಾಗಿ ನನಗೇ ನಂಬಿಕೆ ಇಲ್ಲದಿದ್ದರೆ, ಉಳಿದ ಆಟಗಾರರನ್ನು ಹುರಿದುಂಬಿಸಲು ಹೇಗೆ ಸಾಧ್ಯ. ಒಂದೊಮ್ಮೆ ಸೋತರೂ, ಫೈನಲ್‌ ಪ್ರವೇಶಿಸಿದ್ದಕ್ಕೆ ಸಂಭ್ರಮಿಸೋಣ ಎಂದುಕೊಂಡಿದ್ದೆ’ ಎಂದು ಕಪಿಲ್‌ ಹೇಳಿದ್ದಾರೆ.

Flashback: 1983 ಭಾರತದ ಆಟಕ್ಕೆ ಬೆರಗಾದ ಜಗತ್ತು!

1975 ಹಾಗೂ 1979ರಲ್ಲಿ ಕಪ್ ಗೆದ್ದು ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಶಾಕ್ ನೀಡಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿತ್ತು.  

ವಿಶ್ವಕಪ್ 2019: ಅಭ್ಯಾಸ ಪಂದ್ಯಕ್ಕೆ ರೆಡಿಯಾದ ಭಾರತ-ನ್ಯೂಜಿಲೆಂಡ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬ್ರೇಕ್ ಅಪ್ ಆಗೋರಿಗೆ ಮೂವ್ ಆನ್ ಆಗೋ ಬೆಸ್ಟ್ ಪಾಠ ಹೇಳಿದ ಸ್ಮೃತಿ ಮಂಧನಾ! ಕೊನೆಗೂ ಮೌನ ಮುರಿದ ಕ್ರಿಕೆಟರ್!
ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!